Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಕ್ಯಾನ್ಸರ್ ಚಿಕಿತ್ಸೆಯಲ್ಲಿ ಹೊಸ ಕ್ರಾಂತಿ: ಭಾರತದಲ್ಲಿ ಬಿಡುಗಡೆಯಾಯಿತು ಕೇವಲ ‘7 ನಿಮಿಷದ’ ಇಂಜೆಕ್ಷನ್ !

BIG NEWS : `CM’ ಹುದ್ದೆಯಲ್ಲಿ 8 ವರ್ಷ ಪೂರೈಸಿದ ಸಿದ್ದರಾಮಯ್ಯ : ಕರ್ನಾಟಕದ ಇತಿಹಾಸದಲ್ಲಿ ಗರಿಷ್ಠ ಸಾಧನೆಗೈದ ಹಿರಿಮೆ | CM Siddaramaiah

ಹಾಸಿಗೆಯ ಮೇಲೆ ಕಾಲ ಕಳೆದರೂ ಸಿಗುತ್ತಿಲ್ಲವೇ ನೆಮ್ಮದಿಯ ನಿದ್ದೆ? ಇದರ ಹಿಂದಿರುವ ಅಸಲಿ ಕಾರಣಗಳೇನು?

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : `CM’ ಹುದ್ದೆಯಲ್ಲಿ 8 ವರ್ಷ ಪೂರೈಸಿದ ಸಿದ್ದರಾಮಯ್ಯ : ಕರ್ನಾಟಕದ ಇತಿಹಾಸದಲ್ಲಿ ಗರಿಷ್ಠ ಸಾಧನೆಗೈದ ಹಿರಿಮೆ | CM Siddaramaiah
KARNATAKA

BIG NEWS : `CM’ ಹುದ್ದೆಯಲ್ಲಿ 8 ವರ್ಷ ಪೂರೈಸಿದ ಸಿದ್ದರಾಮಯ್ಯ : ಕರ್ನಾಟಕದ ಇತಿಹಾಸದಲ್ಲಿ ಗರಿಷ್ಠ ಸಾಧನೆಗೈದ ಹಿರಿಮೆ | CM Siddaramaiah

By kannadanewsnow57

ಬೆಂಗಳೂರು: ಕರ್ನಾಟಕದ ರಾಜಕೀಯ ಇತಿಹಾಸದಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮತ್ತೊಂದು ಅಭೂತಪೂರ್ವ ಮೈಲಿಗಲ್ಲು ನೆಟ್ಟಿದ್ದಾರೆ. ಮುಖ್ಯಮಂತ್ರಿ ಹುದ್ದೆಯಲ್ಲಿ ಸುದೀರ್ಘ 8 ವರ್ಷಗಳ ಆಡಳಿತ ಅವಧಿಯನ್ನು ಪೂರ್ಣಗೊಳಿಸಿದ ಏಕೈಕ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಪ್ರಸ್ತುತ ಕಾಂಗ್ರೆಸ್ ಸರ್ಕಾರವು ಅಸ್ತಿತ್ವಕ್ಕೆ ಬಂದು ಮೇ 20ಕ್ಕೆ ಮೂರು ವರ್ಷಗಳನ್ನು ಪೂರ್ಣಗೊಳಿಸಲಿದೆ. ಇದಕ್ಕೂ ನಾಲ್ಕು ದಿನಗಳ ಮೊದಲೇ, ಅಂದರೆ ಭಾನುವಾರದ ವೇಳೆಗೆ ಸಿದ್ದರಾಮಯ್ಯ ಅವರು ತಮ್ಮ ಒಟ್ಟಾರೆ ಆಡಳಿತಾವಧಿಯಲ್ಲಿ ಭರ್ತಿ 8 ವರ್ಷಗಳನ್ನು ಪೂರ್ಣಗೊಳಿಸಿ ಇತಿಹಾಸ ನಿರ್ಮಿಸಿದ್ದಾರೆ.

ದಾಖಲೆಯ ಹಾದಿ ಹೀಗಿದೆ:
ಮೊದಲನೇ ಅವಧಿ: 5 ವರ್ಷ 4 ದಿನಗಳು

ಎರಡನೇ ಅವಧಿ (ಪ್ರಸ್ತುತ): 2 ವರ್ಷ 361 ದಿನಗಳು

ಒಟ್ಟು ಆಡಳಿತಾವಧಿ: ಭಾನುವಾರಕ್ಕೆ ಭರ್ತಿ 8 ವರ್ಷಗಳು ಪೂರ್ಣ

ಬಜೆಟ್ ಮಂಡನೆ: ಇದುವರೆಗೆ ಒಟ್ಟು 17 ಬಾರಿ ದಾಖಲೆಯ ಬಜೆಟ್ ಮಂಡನೆ

ಈ ಹಿಂದೆ ಕರ್ನಾಟಕದ ಇತಿಹಾಸದಲ್ಲಿ ದೀರ್ಘಕಾಲ ಸಿಎಂ ಆಗಿದ್ದ ದಾಖಲೆ ಎಸ್‌. ನಿಜಲಿಂಗಪ್ಪ ಹಾಗೂ ಡಿ. ದೇವರಾಜ ಅರಸು ಅವರ ಹೆಸರಿನಲ್ಲಿತ್ತು. ಎಸ್‌. ನಿಜಲಿಂಗಪ್ಪ ಅವರು ಎರಡು ಅವಧಿಗಳಲ್ಲಿ ಒಟ್ಟು 7 ವರ್ಷ 175 ದಿನಗಳ ಕಾಲ (ಮೊದಲ ಬಾರಿ 1 ವರ್ಷ 197 ದಿನ, ಎರಡನೇ ಬಾರಿ 5 ವರ್ಷ 343 ದಿನ) ರಾಜ್ಯಭಾರ ಮಾಡಿದ್ದರು. ಆ ಬಳಿಕ ಡಿ. ದೇವರಾಜ ಅರಸು ಅವರು ಮೂರು ಅವಧಿಗಳಲ್ಲಿ ಒಟ್ಟು 7 ವರ್ಷ 239 ದಿನಗಳ ಕಾಲ ಮುಖ್ಯಮಂತ್ರಿಯಾಗಿದ್ದರು. ಈಗ ಸಿದ್ದರಾಮಯ್ಯ ಅವರು ಇವರಿಬ್ಬರ ದಾಖಲೆಗಳನ್ನೂ ಮೀರಿಸಿ, 8 ವರ್ಷಗಳ ಕಾಲ ಸಿಎಂ ಆಗಿ ಸೇವೆ ಸಲ್ಲಿಸುವ ಮೂಲಕ ಹೊಸ ಇತಿಹಾಸ ಸೃಷ್ಟಿಸಿದ್ದಾರೆ.

ಕೇವಲ ಸಿಎಂ ಅವಧಿಯಷ್ಟೇ ಅಲ್ಲದೆ ಬಜೆಟ್ ಮಂಡನೆಯಲ್ಲೂ ಸಿದ್ದರಾಮಯ್ಯ ಅವರು ರಾಷ್ಟ್ರೀಯ ದಾಖಲೆಯ ಹೊಸ್ತಿಲಲ್ಲಿದ್ದಾರೆ. ಕರ್ನಾಟಕದಲ್ಲಿ ಈಗಾಗಲೇ 17 ಬಾರಿ ಮುಂಗಡ ಪತ್ರ ಮಂಡಿಸಿರುವ ಅವರು, ದೇಶದಲ್ಲೇ ಅತಿ ಹೆಚ್ಚು ಅಂದರೆ 18 ಬಾರಿ ಬಜೆಟ್ ಮಂಡಿಸಿದ ಗುಜರಾತ್‌ನ ಮಾಜಿ ಹಣಕಾಸು ಸಚಿವ ವಜುಭಾಯಿ ವಾಲಾ ಅವರ ರಾಷ್ಟ್ರೀಯ ದಾಖಲೆಯನ್ನು ಸರಿಗಟ್ಟಲು ಇನ್ನು ಕೇವಲ ಒಂದು ಬಜೆಟ್ ಬಾಕಿ ಇದೆ. ಪ್ರಸ್ತುತ ಸರ್ಕಾರ ಯಶಸ್ವಿಯಾಗಿ 5 ವರ್ಷ ಪೂರೈಸಿದರೆ ಸಿದ್ದರಾಮಯ್ಯ ಅವರಿಗೆ ಇನ್ನೂ ಎರಡು ಬಜೆಟ್ ಮಂಡಿಸುವ ಅವಕಾಶ ಸಿಗಲಿದ್ದು, ಒಟ್ಟು 19 ಬಜೆಟ್ ಪ್ರಸ್ತುತಪಡಿಸುವ ಮೂಲಕ ದೇಶದಲ್ಲೇ ಅತಿ ಹೆಚ್ಚು ಬಾರಿ ಬಜೆಟ್ ಮಂಡಿಸಿದ ಮಹಾನ್ ದಾಖಲೆಗೆ ಸಿದ್ದರಾಮಯ್ಯ ಭಾಜನರಾಗಲಿದ್ದಾರೆ.

BIG NEWS: Siddaramaiah completes 8 years as CM: The greatest achievement in the history of Karnataka!
Share. Facebook Twitter LinkedIn WhatsApp Email

Related Posts

Bhagyalakshmi Bond : `ಭಾಗ್ಯಲಕ್ಷ್ಮಿ ಬಾಂಡ್’ ಹಣ ಪಡೆಯುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ

2 Mins Read

ರಾಜ್ಯದ ಪಿಯು ಕಾಲೇಜುಗಳಲ್ಲಿ ಈ ವರ್ಷದಿಂದಲೇ ‘ಘಟಕ ಆಧಾರಿತ ಮೌಲ್ಯಮಾಪನ’ (LBA) ಜಾರಿ : ಶಿಕ್ಷಣ ಇಲಾಖೆ ಮಹತ್ವದ ಆದೇಶ | Lesson Based Assessment

2 Mins Read

Women Alert : `ಪೀರಿಯಡ್ಸ್’ ಮುಂದೂಡುವ ಮಾತ್ರೆ ನುಂಗುವ ಮಹಿಳೆಯರು ತಪ್ಪದೇ ಇದನ್ನೊಮ್ಮೆ ಓದಲೇಬೇಕು.!

2 Mins Read
Recent News

ಕ್ಯಾನ್ಸರ್ ಚಿಕಿತ್ಸೆಯಲ್ಲಿ ಹೊಸ ಕ್ರಾಂತಿ: ಭಾರತದಲ್ಲಿ ಬಿಡುಗಡೆಯಾಯಿತು ಕೇವಲ ‘7 ನಿಮಿಷದ’ ಇಂಜೆಕ್ಷನ್ !

BIG NEWS : `CM’ ಹುದ್ದೆಯಲ್ಲಿ 8 ವರ್ಷ ಪೂರೈಸಿದ ಸಿದ್ದರಾಮಯ್ಯ : ಕರ್ನಾಟಕದ ಇತಿಹಾಸದಲ್ಲಿ ಗರಿಷ್ಠ ಸಾಧನೆಗೈದ ಹಿರಿಮೆ | CM Siddaramaiah

ಹಾಸಿಗೆಯ ಮೇಲೆ ಕಾಲ ಕಳೆದರೂ ಸಿಗುತ್ತಿಲ್ಲವೇ ನೆಮ್ಮದಿಯ ನಿದ್ದೆ? ಇದರ ಹಿಂದಿರುವ ಅಸಲಿ ಕಾರಣಗಳೇನು?

BREAKING : ಪ್ರಧಾನಿ ಮೋದಿಗೊಲಿದ ಮತ್ತೊಂದು ಅಂತಾರಾಷ್ಟ್ರೀಯ ಗೌರವ: ಸ್ವೀಡನ್‌ನ ಅತ್ಯುನ್ನತ ಪುರಸ್ಕಾರ ಪ್ರದಾನ | PM Modi

State News
KARNATAKA

BIG NEWS : `CM’ ಹುದ್ದೆಯಲ್ಲಿ 8 ವರ್ಷ ಪೂರೈಸಿದ ಸಿದ್ದರಾಮಯ್ಯ : ಕರ್ನಾಟಕದ ಇತಿಹಾಸದಲ್ಲಿ ಗರಿಷ್ಠ ಸಾಧನೆಗೈದ ಹಿರಿಮೆ | CM Siddaramaiah

By kannadanewsnow57 KARNATAKA 2 Mins Read

ಬೆಂಗಳೂರು: ಕರ್ನಾಟಕದ ರಾಜಕೀಯ ಇತಿಹಾಸದಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮತ್ತೊಂದು ಅಭೂತಪೂರ್ವ ಮೈಲಿಗಲ್ಲು ನೆಟ್ಟಿದ್ದಾರೆ. ಮುಖ್ಯಮಂತ್ರಿ ಹುದ್ದೆಯಲ್ಲಿ ಸುದೀರ್ಘ 8…

Bhagyalakshmi Bond : `ಭಾಗ್ಯಲಕ್ಷ್ಮಿ ಬಾಂಡ್’ ಹಣ ಪಡೆಯುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ

ರಾಜ್ಯದ ಪಿಯು ಕಾಲೇಜುಗಳಲ್ಲಿ ಈ ವರ್ಷದಿಂದಲೇ ‘ಘಟಕ ಆಧಾರಿತ ಮೌಲ್ಯಮಾಪನ’ (LBA) ಜಾರಿ : ಶಿಕ್ಷಣ ಇಲಾಖೆ ಮಹತ್ವದ ಆದೇಶ | Lesson Based Assessment

Women Alert : `ಪೀರಿಯಡ್ಸ್’ ಮುಂದೂಡುವ ಮಾತ್ರೆ ನುಂಗುವ ಮಹಿಳೆಯರು ತಪ್ಪದೇ ಇದನ್ನೊಮ್ಮೆ ಓದಲೇಬೇಕು.!

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.