ಕಲಬುರ್ಗಿ : ಇತ್ತೀಚಿಗೆ ವಿಜಯಪುರ ನಗರದಲ್ಲಿ ಆಸ್ಪತ್ರೆಯಿಂದ ನವಜಾತ ಶಿಶುವನ್ನು ವ್ಯಕ್ತಿ ಒಬ್ಬ ಕಿಡ್ನ್ಯಾಪ್ ಮಾಡಿದ್ದ. ಬಳಿಕ ಮತ್ತೆ ಆಸ್ಪತ್ರೆಗೆ ಬಂದು ತಾಯಿಯ ಕೈಗೆ ಒಪ್ಪಿಸಿದ್ದ ಘಟನೆ ನಡೆದಿತ್ತು. ಇದೀಗ ಕಲ್ಬುರ್ಗಿ ಜಿಮ್ಸ್ ಆಸ್ಪತ್ರೆಯಲ್ಲಿ ಒಂದು ದಿನದ ಗಂಡು ಮಗುವನ್ನು ಮಹಿಳೆಯರಿಬ್ಬರೂ ನರ್ಸ್ ವೇಷದಲ್ಲಿ ಬಂದು ಅಪಹರಿಸಿರುವ ಘಟನೆ ನಡೆದಿದೆ.
ಹೌದು ಕಲಬುರ್ಗಿಯ ಜಿಮ್ಸ್ ಆಸ್ಪತ್ರೆಯ ವಾರ್ಡ್ ನಂಬರ್ 115ರಲ್ಲಿ ಮಗು ಅಪಹರಣವಾಗಿದೆ. ನಿನ್ನೆ ಮುಂಜಾನೆ ನಾಲ್ಕು ಗಂಟೆಗೆ ಗಂಡು ಮಗುವಿಗೆ ಕಸ್ತೂರಿ ಎನ್ನುವ ಮಹಿಳೆ ಜನ್ಮ ನೀಡಿದ್ದರು. ರಕ್ತಪಾಸಣೆಗೆ ಮಗು ಕರೆದುಕೊಂಡು ಬನ್ನಿ ಎಂದು ನಕಲಿ ನರ್ಸ್ ಗಳು ಹೇಳಿದ್ದರು. ಸಂಪೂರ್ಣವಾಗಿ ಇಬ್ಬರು ಮಹಿಳೆಯರು ಮುಖ ಮುಚ್ಚಿಕೊಂಡು ಬಂದಿದ್ದರು.
ರಕ್ತ ತಪಾಸಣೆಗಾಗಿ ಮಗುವನ್ನು ತೆಗೆದುಕೊಂಡು ಸಂಬಂಧಿಕರು ಹೋಗಿದ್ದರು. ಈ ವೇಳೆ ನಕಲಿ ನರ್ಸ್ಗಳು ಮಗುವನ್ನು ನಮಗೆ ಕೊಡಿ ಅಂತ ಹೇಳಿದ್ದಾರೆ ಬಳಿಕ ಮಗುವನ್ನು ಎತ್ತಿಕೊಂಡು ಮಹಿಳೆಯರು ಪರಾರಿಯಾಗಿದ್ದಾರೆ. ಹೆತ್ತ ಮಗುವನ್ನು ಕಳೆದುಕೊಂಡು ಇದೀಗ ಕಸ್ತೂರಿ ಕಣ್ಣೀರು ಇಡುತ್ತಿದ್ದಾರೆ. ಮೂಲತಃ ಚಿತಾಪುರ ತಾಲೂಕಿನ ರಾವೂರ್ ಗ್ರಾಮದ ನಿವಾಸಿ ಎಂದು ತಿಳಿದುಬಂದಿದೆ.ಅಪಹರಣ ಕುರಿತಂತೆ ಬ್ರಹ್ಮಪುರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.