ಮಂಗಳೂರು : ದೇಶಾದ್ಯಂತ ರೈಲು ಅಪಘಾತಕ್ಕೆ ಸಂಚು ನಡೆಯುತ್ತಿರುವ ಹೊತ್ತಲ್ಲೇ ಕರ್ನಾಟಕದಲ್ಲೂ ಇಂತಹದ್ದೇ ಘಟನೆಯೊಂದು ಬೆಳಕಿಗೆ ಬಂದಿದ್ದು, ರೈಲು ಹಳಿ ಮೇಲೆ ಕಲ್ಲು ಇಟ್ಟು ದುಷ್ಕರ್ಮಿಗಳು ಪರಾರಿಯಾಗಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ.
ಮಂಗಳೂರಿನ ಉಳ್ಳಾಲದ ತೊಕ್ಕೊಟ್ಟುವಿಲ್ಲಿಯಲ್ಲಿ ಮಂಗಳೂರು-ಕೇರಳ ರೈಲು ಮಾರ್ಗದ ಹಳಿಗಳ ಮೇಲೆ ದುಷ್ಕರ್ಮಿಗಳು ಕಲ್ಲು ಇಟ್ಟು ಪರಾರಿಯಾಗಿದ್ದಾರೆ. ರೈಲುಗಳ ಸಂಚಾರಿಸಿದ ವೇಳೆ ದೊಡ್ಡ ಸದ್ದು ಕೇಳಿ ಸ್ಥಳಿಯರು ಆತಂಕಗೊಂಡಿದ್ದು, ಸ್ಥಳಕ್ಕೆ ಹೋಗಿ ನೋಡಿದಾಗ ರೈಲ್ವೆ ಹಳಿಗಳ ಮೇಲೆ ಕಲ್ಲು ಇಟ್ಟಿರುವ ಘಟನೆ ಬೆಳಕಿಗೆ ಬಂದಿದೆ.
ಇನ್ನು ತಡರಾತ್ರಿ ರೈಲ್ವೆ ಹಳಿಗಳ ಮೇಲೆ ಕಲ್ಲು ದುಷ್ಕರ್ಮಿಗಳು ಕಲ್ಲು ಇಟ್ಟಿದ್ದು, ಸ್ಥಳೀಯರು ಇಬ್ಬರು ದುಷ್ಕರ್ಮಿಗಳನ್ನು ನೋಡಿರುವುದಾಗಿ ತಿಳಿಸಿದ್ದಾರೆ.