ಬೆಂಗಳೂರು: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಕೇಸ್ ಸಂಬಂಧ ನಟ ದರ್ಶನ್ ಜಾಮೀನು ಅರ್ಜಿ ಸಲ್ಲಿಸಿದ್ದರು. ಈ ಜಾಮೀನು ಅರ್ಜಿಯ ವಾದ, ಪ್ರತಿವಾದ ಆಲಿಸಿದ್ದಂತ ನ್ಯಾಯಾಲಯವು, ತೀರ್ಪು ಇಂದಿಗೆ ಕಾಯ್ದಿರಿಸಿತ್ತು. ಇದೀಗ ನ್ಯಾಯಾಲಯವು ತನ್ನ ತೀರ್ಪು ಪ್ರಕಟಿಸಿದ್ದು, ರೇಣುಕಾಸ್ವಾಮಿ ಕೊಲೆ ಕೇಸಲ್ಲಿ ಜಾಮೀನು ಕೋರಿ ನಟ ದರ್ಶನ್ ಸಲ್ಲಿಸಿದ್ದಂತ ಅರ್ಜಿಯನ್ನು ವಜಾಗೊಳಿಸಿದೆ. ಈ ಮೂಲಕ ನಟ ದರ್ಶನ್ ಗೆ ಬಿಗ್ ಶಾಕ್ ನೀಡಿದೆ. ಜೈಲೇ ಗತಿ ಎನ್ನುವಂತೆ ಆಗಿದೆ.
ರೇಣುಕಾಸ್ವಾಮಿ ಕೊಲೆ ಕೇಸಲ್ಲಿ ಎ2 ಆರೋಪಿಯಾಗಿರುವಂತ ನಟ ದರ್ಶನ್ ಜಾಮೀನು ಕೋರಿ ಬೆಂಗಳೂರಿನ 57ನೇ ಸಿಸಿಹೆಚ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಸರ್ಕಾರದ ಅಭಿಯೋಜಕ ಎಸ್ ಪಿಪಿ ಪ್ರಸನ್ನ ಕುಮಾರ್ ಹಾಗೂ ದರ್ಶನ್ ಪರವಾಗಿ ವಕೀಲ ಸಿ.ವಿ ನಾಗೇಶ್ ತಮ್ಮ ವಾದ ಪ್ರತಿವಾದವನ್ನು ಮಂಡಿಸಿದ್ದರು. ಈ ಬಳಿಕ ಕೋರ್ಟ್ ಇಂದಿಗೆ ಜಾಮೀನು ಅರ್ಜಿಯ ತೀರ್ಪು ಕಾಯ್ದರಿಸಿತ್ತು.
ಈಗ ತೀರ್ಪು ಪ್ರಕಟಿಸಿರುವಂತೆ ಬೆಂಗಳೂರಿನ 57ನೇ ಸಿಸಿಹೆಚ್ ನ್ಯಾಲಾಯವು ಎ.1 ಆರೋಪಿ ಪವಿತ್ರಾ ಗೌಡ, ಎ.2 ಆರೋಪಿ ನಟ ದರ್ಶನ್, ರವಿ, ನಾಗರಾಜ್, ಲಕ್ಷ್ಮಣ್ ಜಾಮೀನು ಅರ್ಜಿ ವಜಾಗೊಳಿಸಿದೆ. ಆದರೇ ಎ.13 ಆರೋಪಿ ದೀಪಕ್ ಜಾಮೀನು ಮಂಜೂರು ಮಾಡಿದೆ. ಈಗ ಬಳ್ಳಾರಿ ಜೈಲಿನಲ್ಲಿದ್ದು, ಜಾಮೀನು ನಿರೀಕ್ಷೆಯಲ್ಲಿದ್ದಂತ ನಟ ದರ್ಶನ್ ಗೆ ಜಾಮೀನು ಅರ್ಜಿ ವಜಾಗೊಳಿಸುವ ಮೂಲಕ ಬಿಗ್ ಶಾಕ್ ನೀಡಲಾಗಿದೆ. ಈ ಮೂಲಕ ನಟ ದರ್ಶನ್ ಗೆ ಬಿಗ್ ಶಾಕ್ ನೀಡಲಾಗಿದ್ದು, ನಟ ದರ್ಶನ್ ಗೆ ಜೈಲೇ ಗತಿ ಎನ್ನುವಂತೆ ಆಗಿದೆ.