ಬೆಂಗಳೂರು : ಕೃಷಿ ನೀರಾವರಿ ಪಂಪ್ಸೆಟ್ ಬಳಕೆದಾರರು ತಮ್ಮ ನೀರಾವರಿ ಪಂಪ್ಸೆಟ್ನ ವಿದ್ಯುತ್ ಆರ್.ಆರ್.ಸಂಖ್ಯೆಗೆ ಕಡ್ಡಾಯವಾಗಿ ಆಧಾರ್ ಸಂಖ್ಯೆಯನ್ನು ಜೋಡಣೆ ಮಾಡುವಂತೆ ಸೂಚನೆ ನೀಡಲಾಗಿದೆ.
ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ 2024-25ನೇ ಸಾಲಿನಲ್ಲಿ ದರ ಪರಿಷ್ಕರಣೆ ಮಾಡುವ ಆದೇಶದಲ್ಲಿ ಕೃಷಿ ಪಂಪ್ ಸೆಟ್ಗಳಿಗೆ ಆಧಾರ್ ಲಿಂಕ್ ಮಾಡುವುದು ಕಡ್ಡಾಯ ಮಾಡಿದೆ. ಆದ್ದರಿಂದ ಹೆಸ್ಕಾಂಗಳು 10 ಹೆಚ್ಪಿ ಪಂಪ್ ಸೆಟ್ ಹೊಂದಿರುವ ರೈತರ ಆಧಾರ್ ಸಂಖ್ಯೆ ಸಂಗ್ರಹ ಮಾಡುತ್ತಿದೆ.
ಹಾಲಿ ಇರುವ ಕೃಷಿ ಪಂಪ್ಸೆಟ್ನ ವಾರಸುದಾರರು ಮರಣ ಹೊಂದಿದ್ದಲ್ಲಿ ಪ್ರಸ್ತುತ ಪಹಣಿಯಲ್ಲಿರುವ ಆಧಾರ್ ಕಾರ್ಡ್, ಮೊಬೈಲ್ ಸಂಖ್ಯೆ, ಹಿಂದಿನ ವಾರಸುದಾರರ ಮರಣ ಪ್ರಮಾಣ ಪತ್ರ, ಛಾಪಾಕಾಗದ ಹಾಗೂ ಪಹಣಿಯಲ್ಲಿ ಜಂಟಿ ಖಾತೆಯಾಗಿದ್ದರೆ ಉಳಿದವರ ಒಪ್ಪಿಗೆ ಪತ್ರ, ಕ್ರಯಪತ್ರದ ದಾಖಲೆಯನ್ನು ಸಮೀಪದ ಬೆಸ್ಕಾಂ ಶಾಖಾ ಕಚೇರಿ ಅಥವಾ ಸಂಬಂಧಿಸಿದ ಪವರ್ ಮ್ಯಾನ್ ಅಥವಾ ಮೀಟರ್ ರೀಡರ್ಗಳಿಗೆ ಸಲ್ಲಿಸಿ ಹಾಲಿ ಆರ್.ಆರ್.ಸಂಖ್ಯೆಯಲ್ಲಿರುವ ಹೆಸರನ್ನು ಬದಲಾವಣೆ ಮಾಡಿಸಿಕೊಳ್ಳಬೇಕು ಎಂದು ತಿಳಿಸಲಾಗಿದೆ.