ಪಾಲಕ್ಕಾಡ್: ಕೇರಳದ ವಯನಾಡ್ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಹಿರಿಯ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಡಿಎನ್ಎ ಪರೀಕ್ಷೆ ನಡೆಸುವಂತೆ ಕೇರಳದ ಪಕ್ಷೇತರ ಶಾಸಕರೊಬ್ಬರು ಕರೆ ನೀಡುವ ಮೂಲಕ ವಿವಾದ ಸೃಷ್ಟಿಸಿದ್ದಾರೆ. ರಾಹುಲ್ ಗಾಂಧಿಯನ್ನು ಗಾಂಧಿ ಎಂಬ ಉಪನಾಮದಿಂದ ಕರೆಯಬಾರದು ಎಂದು ಶಾಸಕ ಪಿ.ವಿ.ಅನ್ವರ್ ಸೋಮವಾರ ಹೇಳಿದ್ದಾರೆ.
“ನಾನು ರಾಹುಲ್ ಗಾಂಧಿಯವರ ಕ್ಷೇತ್ರವಾದ ವಯನಾಡ್ ಸಂಸದೀಯ ಕ್ಷೇತ್ರದ ಭಾಗವಾಗಿದ್ದೇನೆ. ಗಾಂಧಿ ಎಂಬ ಉಪನಾಮದಿಂದ ಕರೆಯಲು ಅರ್ಹರಲ್ಲದ ಅಂತಹ ಕೆಳಮಟ್ಟದ ನಾಗರಿಕನಾಗಿ ಅವರು ಮಾರ್ಪಟ್ಟಿದ್ದಾರೆ. ನಾನು ಇದನ್ನು ಹೇಳುತ್ತಿಲ್ಲ. ಕಳೆದ 2 ದಿನಗಳಿಂದ ಭಾರತದ ಜನರು ಇದನ್ನು ಹೇಳುತ್ತಿದ್ದಾರೆ” ಎಂದು ಅವರು ಹೇಳಿದರು.