ಬೆಂಗಳೂರು : ಬಿಜೆಪಿ ವಿರುದ್ಧ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿಕೆಗೆ ಗೃಹ ಸಚಿವ ಆರಗ ಜ್ಞಾನೇಂದ್ರ ತಿರುಗೇಟು ನೀಡಿದ್ದು, ಭೂತದ ಬಾಯಲ್ಲಿ ಭಗವದ್ಗೀತೆ ಬಂದ ಹಾಗೆ ಎಂದು ಹೇಳಿದ್ದಾರೆ.
ಬಿಜೆಪಿ ಪಕ್ಷಕ್ಕೆ ರೌಡಿಶೀಟರ್ಗಳು ಸಮಾಜ ದ್ರೋಹಿಗಳ ಅವಶ್ಯಕತೆ ಇಲ್ಲ. ನಮಗೆ ಜನ ಬೆಂಬಲ ಇದೆ ಅಷ್ಟು ಸಾಕು ಎಂದು ಹೇಳಿದರು.
ಕೆಲವರು ಬಂದು ನಮ್ಮ ಜೊತೆ ಫೋಟೋ ತೆಗೆಸಿಕೊಳ್ತಾರೆ. ಕೊಡೊಲ್ಲ ಅಂದ್ರೆ ನಮಗೆ ಅಹಂಕಾರ ಎಂದುಕೊಳ್ತಾರೆ. ಆದ್ದರಿಂದ ಫೋಟೋ ತೆಗೆಸಿಕೊಳ್ತೀವಿ ಅಷ್ಟಕ್ಕೆ ನಮಗೂ ಅವರಿಗೂ ಸಂಬಂಧ ಉಂಟು ಎಂದು ಹೇಳೋಕೆ ಆಗುತ್ತಾ ಎಂದು ಹೇಳಿದರು. ಡಿಕೆಶಿ ಹಿಂದೆ ಯಾರ ಜೊತೆ ಇದ್ದರು, ಯಾರನ್ನು ಸೇರಿಸಿಕೊಂಡು ರಾಜಕೀಯ ಮಾಡಿದ್ರು ಎಲ್ಲವೂ ಗೊತ್ತಿದೆ ಎಂದರು.
ಕುಂಬಳಕಾಯಿ ಕಳ್ಳ ಅಂದ್ರೆ ನೀವ್ಯಾಕೆ ಹೆಗಲು ಮುಟ್ಟಿಕೊಳ್ಳುತ್ತೀರಿ : ಟ್ವೀಟ್ ನಲ್ಲಿ ಕಾಂಗ್ರೆಸ್ ಗೆ ಬಿಜೆಪಿ ಟಾಂಗ್
ರಾಜ್ಯದ ಶಾಲಾ ಮಕ್ಕಳಿಗೆ ಬಹುಮುಖ್ಯ ಮಾಹಿತಿ: ಹೀಗಿದೆ 2022-23ನೇ ಸಾಲಿನ ‘ಬಾನ್ ದನಿ ರೇಡಿಯೋ ಪಾಠ’ ಪ್ರಸಾರ ವೇಳಾಪಟ್ಟಿ