ಮಡಿಕೇರಿ: ಸಬ್ಸೀಡಿಯಲ್ಲಿ ಕಾರು ಖರೀದಿಗಾಗಿ ಹಣ ನೀಡುವಂತ ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆಯ ಸೌಲಭ್ಯದಲ್ಲಿ ಶೇ.10ರಷ್ಟು ಲಂಚವನ್ನು ಪಡೆಯುವಂತೆ ಎಫ್ ಡಿಎ ಒಬ್ಬರು ಬೇಡಿಕೆ ಇಟ್ಟಿದ್ದರು. ಈ ಹಣವನ್ನು ಪಡೆಯುತ್ತಿದ್ದಾಗಲೇ ಇಂದು ಲೋಕಾಯುಕ್ತ ಅಧಿಕಾರಿಗಳಿಗೆ (Karnataka Lokayukta ) ರೆಡ್ ಹ್ಯಾಡ್ ಆಗಿ ಸಿಕ್ಕಿಬಿದ್ದಿರುವ ಘಟನೆ ಕೊಡಗಿನಲ್ಲಿ ನಡೆದಿದೆ.
ಕೊಡಗು ಜಿಲ್ಲೆಯ ಅಲ್ಪ ಸಂಖ್ಯಾತ ಕಲ್ಯಾಣ ಇಲಾಖೆಗೆ ಲತೀಫ್ ಎಂಬುವರು ಸಬ್ಸಿಡಿ ದರದಲ್ಲಿ ಕಾರು ಖರೀದಿಗಾಗಿ ಅರ್ಜಿಯನ್ನು ಸಲ್ಲಿಸಿದ್ದರು. ಇವರು ಸಲ್ಲಿಸಿದ್ದಂತ ಅರ್ಜಿಗೆ ಸಬ್ಸಿಡಿ ಹಣದಲ್ಲಿ ಕಾರು ಖರೀದಿಸೋದಕ್ಕೂ ಹಣ ಮಂಜೂರಾಗಿತ್ತು. ಆದ್ರೇ ಇಲ್ಲಿನ ಎಫ್ ಡಿಎ ಲತಾ ಎಂಬುವರು ಶೇ.10ರಷ್ಟು ಹಣವನ್ನು ಸಬ್ಸೀಡಿ ಮಂಜೂರಿಗಾಗಿ ನೀಡುವಂತೆ ಲಂಚಕ್ಕೆ ಬೇಡಿಕೆ ಇಟ್ಟಿದ್ದರು.
ಈ ಹಿನ್ನಲೆಯಲ್ಲಿ ಲತೀಫ್ ಕೊಡಗಿನ ಲೋಕಾಯುಕ್ತ ಅಧಿಕಾರಿಗಳಿಗೆ ದೂರು ನೀಡಿದ್ದರು. ಈ ದೂರು ಆಧರಿಸಿ, ಇಂದು ಕಾರಿನ ಸಬ್ಸಿಡಿ ಮಂಜೂರಾತಿಗಾಗಿ ಶೇ.10ರಷ್ಟು ಲಂಚದ ಹಣವನ್ನು ಎಫ್ ಡಿಎ ಲತಾಗೆ ನೀಡುವ ವೇಳೆಯಲ್ಲಿ ದಾಳಿಯನ್ನು ಲೋಕಾಯುಕ್ತ ಅಧಿಕಾರಿಗಳು ನಡೆಸಿದ್ದಾರೆ. ಈ ಮೂಲಕ ರೆಡ್ ಹ್ಯಾಂಡ್ ಆಗಿ ಲಂಚದ ಹಣದ ಜೊತೆಗೆ ಕೊಡಗು ಜಿಲ್ಲೆಯ ಅಲ್ಪ ಸಂಖ್ಯಾತ ಕಲ್ಯಾಣ ಇಲಾಖೆಯ ಎಫ್ ಡಿಎ ಲತಾ ಬಂಧಿಸಿದ್ದಾರೆ.