ಕೆಎನ್ಎನ್ಡಿಜಿಟಲ್ ಡೆಸ್ಕ್ : ಭಾನುವಾರ ಬೆಳಿಗ್ಗೆ ತಾಂಜೇನಿಯಾದ ವಿಮಾನ ನಿಲ್ದಾಣವನ್ನ ಸಮೀಪಿಸುತ್ತಿದ್ದಾಗ ಸಣ್ಣ ಪ್ರಯಾಣಿಕ ವಿಮಾನವೊಂದು ವಿಕ್ಟೋರಿಯಾ ಸರೋವರಕ್ಕೆ ಅಪ್ಪಳಿತು. ಸಧ್ಯ ಸಿಕ್ಕಿರುವ ಮಾಹಿತಿಯ ಪ್ರಕಾರ ಇದ್ರಲ್ಲಿ ಕನಿಷ್ಠ ಮೂವರು ಸಾವನ್ನಪ್ಪಿದ್ದಾರೆ.
ಅಧಿಕಾರಿಗಳ ಪ್ರಕಾರ ವಿಮಾನವು 49 ಪ್ರಯಾಣಿಕರನ್ನು ಹೊಂದಿತ್ತು, ಆದರೆ ಅಪಘಾತದಲ್ಲಿ ಸಾವುನೋವುಗಳು ಅನಿರ್ದಿಷ್ಟವಾಗಿ ಉಳಿದಿವೆ. ಪ್ರಯಾಣಿಕರ ವಿಮಾನದಿಂದ ಕನಿಷ್ಠ 26 ಜನರನ್ನ ರಕ್ಷಿಸಲಾಗಿದೆ ಎಂದು ಏಜೆನ್ಸಿ ಪ್ರತಿನಿಧಿ ವರದಿ ಮಾಡಿದೆ.
ತಾಂಜೇನಿಯಾದ ವಿಮಾನಯಾನ ಸಂಸ್ಥೆ ಪ್ರೆಸಿಷನ್ ಏರ್ ಈ ವಿಮಾನವು ಕರಾವಳಿ ನಗರವಾದ ದಾರ್ ಎಸ್ ಸಲಾಮ್ ನಿಂದ ಬರುತ್ತಿತ್ತು ಎಂದು ಹೇಳಿದೆ.
ರಕ್ಷಣಾ ದೋಣಿಗಳನ್ನು ನಿಯೋಜಿಸಲಾಗಿದ್ದು, ತುರ್ತು ಕಾರ್ಯಕರ್ತರು ವಿಮಾನದಲ್ಲಿ ಸಿಲುಕಿರುವ ಇತರ ಪ್ರಯಾಣಿಕರನ್ನ ರಕ್ಷಿಸುವುದನ್ನ ಮುಂದುವರಿಸಿದ್ದಾರೆ ಎಂದು ಟಿಬಿಸಿ ವರದಿ ಮಾಡಿದೆ.
Precision Air plane crashes into Lake Victoria while trying to land in Tanzania; no word on casualties pic.twitter.com/EpRrgPvAVB
— BNO News (@BNONews) November 6, 2022
‘ಪಂಚರತ್ನ ಯೋಜನೆ’ ಜಾರಿ ಮಾಡದಿದ್ರೆ, ‘ಜೆಡಿಎಸ್’ ವಿಸರ್ಜನೆ ; ಹೆಚ್.ಡಿ ಕುಮಾರಸ್ವಾಮಿ
ಬಾಹ್ಯಾಕಾಶಕ್ಕೆ ‘ಕೋತಿ’ಗಳನ್ನ ಕಳುಹಿಸಲಿದ್ಯಂತೆ ಚೀನಾ.! ಅಷ್ಟಕ್ಕೂ ಡ್ರ್ಯಾಗನ್ ಯೋಜನೆ ಏನು ಗೊತ್ತಾ?