ಶಿವಮೊಗ್ಗ: ವಿವಿಧ ವಿದ್ಯುತ್ ವಿತರಣಾ ಕೇಂದ್ರಗಳ ತುರ್ತು ಕಾಮಗಾರಿಯ ಹಿನ್ನಲೆಯಲ್ಲಿ ಅಕ್ಟೋಬರ್ 21ರ ನಾಳೆ ಹಾಗೂ ಅಕ್ಟೋಬರ್ 22ರ ನಾಡಿದ್ದು ಜಿಲ್ಲೆಯ ಈ ಕೆಲ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ( Power Cut ) ಉಂಟಾಗಲಿದೆ.
ಈ ಕುರಿತಂತೆ ಮೆಸ್ಕಾಂ ( MESCOM ) ನಿಂದ ಮಾಹಿತಿ ನೀಡಲಾಗಿದ್ದು, ಮಂಗಳೂರು ವಿದ್ಯುತ್ಛಕ್ತಿ ಸರಬರಾಜು ಕಂಪನಿಯು ನಗರ ಉವಿ-2 ರ ಘಟಕ-5 ಮತ್ತು 6ರ ಮಂಡ್ಲಿ 100 ಅಡಿ ರಸ್ತೆಯಲ್ಲಿ ದೋಷಪೂರಿತ ಪೀಡರ್ ದುರಸ್ಥಿ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಅಕ್ಟೋಬರ್ 21 ರಂದು ಬೆಳಿಗ್ಗೆ 10 ರಿಂದ ಸಂಜೆ 4.00 ರವರೆಗೆ ಗಾರ್ಡನ್ ಏರಿಯಾ 1 ರಿಂದ 3 ನೇ ಕ್ರಾಸ್, ಸಾವರ್ಲೈನ್ ರಸ್ತೆ, ಬಿ.ಹೆಚ್.ರಸ್ತೆ, ನೆಹರು ರಸ್ತೆ, ಆರ್.ಎಂ.ಎಲ್.ನಗರದ 1 ಮತ್ತು 2ನೇ ಹಂತ, ಟಿಪ್ಪುನಗರ, ಮಂಜುನಾಥ ಬಡಾವಣೆ, ಆನಂದರಾವ್ ಬಡಾವಣೆ, ಮಿಳಘಟ್ಟ, ಬುದ್ಧನಗರ, ಡಿಪೋರಸ್ತೆ, ಮಾರ್ನಮಿಬೈಲು, ಸರ್ಕಾರಿ ಮತ್ತು ಖಾಸಗಿ ಬಸ್ ನಿಲ್ದಾಣ, ಖಾಜಿನಗರ, ತುಂಗಾನಗರ, ಗೋಪಿಶೆಟ್ಟಿಕೊಪ್ಪ, ಇಲಿಯಾಜ್ನಗರ, ಚಾಲುಕ್ಯನಗರ, ಮಂಡಕ್ಕಿಭಟ್ಟಿ, ಕಲ್ಲೂರು ಮಂಡ್ಲಿ ಇಂಡಸ್ಟ್ರೀಯಲ್ ಏರಿಯಾ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ತಿಳಿಸಿದೆ.
ರಾಜ್ಯ ‘ಆಗ್ನಿಶಾಮಕ ದಳ’ಕ್ಕೆ ಮತ್ತಷ್ಟು ಬಲ: 90 ಮೀಟರ್ ಏರಿಯಲ್ ಲ್ಯಾಡರ್ ಪ್ಲಾಟ್ ಫಾರಂ ವಾಹನ ಸಿಎಂ ಲೋಕಾರ್ಪಣೆ
ಅಕ್ಟೋಬರ್ 22 ರಂದು ಶಿವಮೊಗ್ಗ ಮಾಚೇನಹಳ್ಳಿ 110/11 ಕೆವಿ ವಿದ್ಯುತ್ ವಿತರಣಾ ಕೇಂದ್ರದ ವ್ಯಾಪ್ತಿಯಲ್ಲಿ ಬರುವ ಎಂಸಿಎಫ್-3, ಎಂಸಿಎಫ್-4 ಮತ್ತು ಎಂಸಿಎಫ್-20 ಮಾರ್ಗಗಳಲ್ಲಿ ತುರ್ತು ಕಾಮಗಾರಿ ಹಮ್ಮಿಕೊಂಡಿರುವುದರಿಂದ ಅಂದು ಬೆಳಿಗ್ಗೆ 10 ರಿಂದ ಸಣಹೆ 4 ಗಂಟೆವರೆಗೆ ಮಾಚೇನಹಳ್ಳಿ, ಬಿದರೆ, ನಿದಿಗೆ, ಓತಿಘಟ್ಟ, ಸಿದ್ದರಗುಡಿ, ಹಾರೇಕಟ್ಟೆ, ಸೋಗಾನೆ, ಆಚಾರಿ ಕ್ಯಾಂಪ್, ಹೊಸೂರು ರೆಡ್ಡಿಕ್ಯಾಂಪ್, ದುಮ್ಮಳ್ಳಿ, ಶುಗರ್ ಕಾಲೋನಿ ಮತ್ತು ಜಯಂತಿ ಗ್ರಾಮ, ಕಿಯೋನಿಕ್ಸ್, ಐಟಿ ಪಾರ್ಕ್, ಮಲ್ನಾಡ್ ಆಸ್ಪತ್ರೆ, ಕೆಎಸ್ಆರ್ಪಿ ಕಾಲೋನಿ ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಹೇಳಿದೆ.
BREAKING: ಹಾಸನಾಂಭ ದೇವರ ದರ್ಶನಕ್ಕಾಗಿ ಸಾಲಿನಲ್ಲಿ ನಿಂತಿದ್ದ ವ್ಯಕ್ತಿ ಸಾವು