ವಿಜಯಪುರ: ಮಕ್ಕಳ ಕಳ್ಳರ ಬಗ್ಗೆ ವದಂತಿಗಳು ಇಂದು, ನಾಳೆಯದ್ದಲ್ಲ. ದಿನ ದಿನಕ್ಕೆ ತರಾವರಿಯಾಗಿ ಹುಟ್ಟಿಕೊಳ್ಳುತ್ತಿವೆ. ಇದೇ ಮಾದರಿಯಲ್ಲಿ ವಿಜಯಪುರದಲ್ಲಿ ಭೂ ಗರ್ಭ ಸರ್ವೆಗೆ ತೆರಳಿದ್ದಂತ ಸರ್ಕಾರಿ ಅಧಿಕಾರಿಯೊಬ್ಬರನ್ನು, ಮಕ್ಕಳ ಕಳ್ಳನೆಂದು ತಿಳಿದು, ಗ್ರಾಮಸ್ಥರು ಥಳಿಸಿದಂತ ಘಟನೆ ನಡೆದಿದೆ.
ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಹಿರೇಬೇವನೂರು ಗ್ರಾಮದ ಸುತ್ತಮುತ್ತಾ ಖನಿಜದ ಅದಿರು ಇರುವ ಬಗ್ಗೆ ಪರಿಶೀಲನೆಗಾಗಿ ಬೆಂಗಳೂರಿನಿಂದ ಭೂಗರ್ಭ ಇಲಾಖೆಯ ಸಹಾಯಕ ಅಧಿಕಾರಿ ಜಿನೋಮನ್ ತೆರಳಿದ್ದರು. ಖನಿಜದ ಅದಿರು ಪರಿಶೀಲನೆ ವೇಳೆಯಲ್ಲಿ, ನೆರೆದಂತ ಗ್ರಾಮಸ್ಥರು, ಇಲಾಖೆಯ ಪತ್ರ ತೋರಿಸುವಂತೆ, ಅವರ ಗುರುತು ಋಚುವಾತಿಗೆ ತಿಳಿಸಿದ್ದಾರೆ.
ಈ ವೇಳೆ ಭೂಗರ್ಭ ಅಧಿಕಾರಿ ಜಿನೋಮನ್, ಗೌಪ್ಯತೆಯ ದೃಷ್ಠಿಯಿಂದ ಯಾವುದೇ ಮಾಹಿತಿಯನ್ನು ಗ್ರಾಮಸ್ಥರಿಗೆ ಸರಿಯಾಗಿ ತಿಳಿಸಿಲ್ಲ. ಈ ಸಂದರ್ಭದಲ್ಲಿ ಮಕ್ಕಳ ಕಳ್ಳರೆಂದು ಭಾವಿಸಿದಂತ ಗ್ರಾಮಸ್ಥರು, ಜಿನೋಮನ್ ಅನ್ನು ಹಿಡಿದು ಥಳಿಸಿದ್ದಾರೆ. ಈ ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದಂತ ಪೊಲೀಸರಿಗೆ, ಭೂಗರ್ಭ ಇಲಾಖೆಯ ಸಹಾಯಕ ಅಧಿಕಾರಿ ತಾವೆಂದು ಜಿನೋಮನ್ ಮಾಹಿತಿ ನೀಡಿದ್ದಾರೆ.
ಥಳಿತಕ್ಕೆ ಒಳಗಾದಂತ ಜಿನೋಮನ್ ಸರ್ಕಾರಿ ಅಧಿಕಾರಿಯೆಂದು, ಗೌಪ್ಯತೆಯ ದೃಷ್ಠಿಯಿಂದ ನೀವು ಕೇಳಿದಂತ ಮಾಹಿತಿಯನ್ನು ಅವರು ತಿಳಿಸಿಲ್ಲವೆಂದು ಹಿರೋಬೇವನೂರು ಗ್ರಾಮಸ್ಥರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ. ಈ ಬಳಿಕ ಸರ್ಕಾರಿ ಅಧಿಕಾರಿಯಾಗಿದ್ದಾರೆ ಜಿನೋಮನ್ ಎಂಬುದನ್ನು ಮನವರಿಕೆ ಮಾಡಿಕೊಂಡಂತ ಗ್ರಾಮಸ್ಥರು, ಅವರಲ್ಲಿ ಕ್ಷಮೆಯಾಚಿಸಿದ್ದಾರೆ.
BREAKING NEWS : ಅ. 3ರವರೆಗೆ ‘ಪಿಎಫ್ಐ’ ನಾಯಕ ಮೊಹಮ್ಮದ್ ಅಶ್ರಫ್ ನನ್ನು ಪೊಲೀಸ್ ಕಸ್ಟಡಿಗೆ ನೀಡಿ ಕೋರ್ಟ್ ಆದೇಶ