ಬೆಂಗಳೂರು: ವಿವಿಧ ಕಾರಣದಿಂದಾಗಿ ಸ್ಥಗಿತಗೊಂಡಿದಂತ 3,000 ಅರ್ಹ ಕಲಾವಿದರಿಗೆ ರಾಜ್ಯ ಸರ್ಕಾರ ಮಾಸಾಶನ ಬಿಡುಗಡೆ ಮಾಡಿ ಆದೇಶಿಸಿದೆ.
ಈ ಕುರಿತಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದ್ದು, ಮಾಸಾಶನ ಕೋರಿ 2018-2021ರವರೆಗೆ ಅರ್ಜಿ ಸಲ್ಲಿಸಿದ್ದ 3 ಸಾವಿರ ಅರ್ಹ ಸಾಹಿತಿ ಮತ್ತು ಕಲಾವಿದರಿಗೆ ತಲಾ 2 ಸಾವಿರ ರೂ ಗಳಂತೆ 2022ರ ಸೆಪ್ಟೆಂಬರ್ 1ರಿಂದ ಜಾರಿಗೆ ಬರುವಂತೆ ಮಾಸಾಶನ ನೀಡಲು ಸೂಚಿಸಿದೆ.
ರಾಜ್ಯ ಸರ್ಕಾರದ ವಿರುದ್ಧ ಸಿಡಿದೆದ್ದ ಅಥಿತಿ ಉಪನ್ಯಾಸಕರು: ಪರೀಕ್ಷಾ ಕಾರ್ಯ ಬಹಿಷ್ಕಾರಕ್ಕೆ ನಿರ್ಧಾರ
ಅರ್ಹ ಸಾಹಿತಿ ಮತ್ತು ಕಲಾವಿದರುಗಳಿಗೆ ಮಾಸಾಶನ ಬಿಡುಗಡೆಗೆ ಮುನ್ನ ಅವರ ನೈಜತೆಯನ್ನು ಪರಿಶೀಲಿಸಿ, ಖಾತ್ರಿ ಪಡಿಸಿಕೊಳ್ಳಬೇಕು ಎಂದು ಕೂಡ ಆದೇಶಸದಲ್ಲಿ ತಿಳಿಸಿದೆ.
ಅಂದಹಾಗೇ ಮೈಸೂರಿನ ಶ್ರೀನಿವಾಸ ಸಮಿತಿಯು 2019-20 ಹಾಗೂ 2020-21ನೇ ಸಾಲಿನಲ್ಲಿ ಎರಡು ಸಾವಿರ ಸಾಹಿತಿ, ಕಲಾವಿದರಿಗೆ ಮಾಸಾಶನ ಮಂಜೂರು ಮಾಡಲು ಶಿಫಾರಸ್ಸು ಮಾಡಿತ್ತು.
BIG NEWS: ಬೆಂಗಳೂರಿನಲ್ಲಿ ಭಾರೀ ಮಳೆಗೆ 600 ಮನೆ, 130 ಅಪಾರ್ಮೆಂಟ್ ಜಲಾವೃತ: 4,500 ಕುಟುಂಬಗಳು ಕಂಗಾಲು