ನವದೆಹಲಿ: ಕರ್ನಾಟಕ ಹೈಕೋರ್ಟ್ ನಿಂದ ( Karnataka High Court ) ಎಸಿಬಿ ರದ್ದುಗೊಳಿಸಿ, ಲೋಕಾಯುಕ್ತಕ್ಕೆ ( Karnataka Lokayukta ) ಬಲ ನೀಡಲಾಗಿತ್ತು. ಈ ಸಂಬಂಧ ಸುಪ್ರೀಂ ಕೋರ್ಟ್ ಗೆ ( Supreme Court ) ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿತ್ತು. ಈ ವಿಚಾರಣೆ ನಡೆಸಿದಂತ ಸುಪ್ರೀಂ ಕೋರ್ಟ್ ನ್ಯಾಯಪೀಠವು, ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಿ, ನಾಲ್ಕುವಾರಗಳ ಕಾಲ ಅರ್ಜಿಯ ವಿಚಾರಣೆ ಮುಂದೂಡಿಕೆ ಮಾಡಿದೆ.
ಬೆಂಗಳೂರಿಗರೇ ಮನೆಯಿಂದ ಹೊರ ಬರೋ ಮುನ್ನಾ ಎಚ್ಚರ: ಮುಂದಿನ 3 ಗಂಟೆ ಭಾರಿ ಮಳೆ | Bengaluru Rain
ಇಂದು ಎಸಿಬಿ ರದ್ದು ಸಂಬಂಧ ಸುಪ್ರೀಂ ಕೋರ್ಟ್ ಗೆ ಸಲ್ಲಿಕೆಯಾಗಿದ್ದಂತ ಖಾಸಗೀ ಅರ್ಜಿಯನ್ನು ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಅವರನ್ನೊಳಗೊಂಡ ಪೀಠವು ವಿಚಾರಣೆ ನಡೆಸಿತು. ಎಸಿಬಿ ರದ್ದು ಪಡಿಸಿರೋ ಹೈಕೋರ್ಟ್ ಆದೇಶ ಸಂಬಂಧ ಕರ್ನಾಟಕ ಸರ್ಕಾರ ತನ್ನ ನಿಲುವನ್ನು ತಿಳಿಸುವಂತೆ ನೋಟಿಸ್ ಜಾರಿಗೊಳಿಸಿತು. ಅಲ್ಲದೇ ಅರ್ಜಿಯ ವಿಚಾರಣೆಯನ್ನು ಮುಂದಿನ ನಾಲ್ಕುವಾರಗಳು ಮುಂದೂಡಿದೆ.
ಅಂದಹಾಗೇ ಕರ್ನಾಟಕ ಹೈಕೋರ್ಟ್ ನಿಂದ ಕೆಲ ದಿನಗಳ ಹಿಂದೆ ಎಸಿಬಿಯನ್ನು ರದ್ದುಗೊಳಿಸಲಾಗಿತ್ತು. ಇಲ್ಲಿನ ಪ್ರಕರಣಗಳನ್ನು ಲೋಕಾಯುಕ್ತಕ್ಕೆ ವರ್ಗಾವಣೆ ಮಾಡುವಂತೆ ಸೂಚಿಸಲಾಗಿತ್ತು. ಈ ಮೂಲಕ ಲೋಕಾಯುಕ್ತಕ್ಕೆ ಬಲ ನೀಡಿತ್ತು. ಈ ಹಿನ್ನಲೆಯಲ್ಲಿಯೇ ಲೋಕಾಯುಕ್ತ ಡಿಐಜಿ ಇನ್ಮುಂದೆ ಭ್ರಷ್ಟಾಚಾರ ಸಂಬಂಧದ ಕೇಸ್ ಗಳನ್ನು ಲೋಕಾಯುಕ್ತದಲ್ಲಿ ದಾಖಲಿಸಿಕೊಂಡು ತನಿಖೆ ನಡೆಸುವಂತೆಯೂ ಆದೇಶಿಸಿದ್ದರು.