ಚಿತ್ರದುರ್ಗ: ವಿದ್ಯಾರ್ಥಿನಿಯರ ವಿರುದ್ಧ ಲೈಂಗಿಕ ಕಿರುಕುಳ ಆರೋಪದ ಅಡಿಯಲ್ಲಿ ಮುರುಘಾ ಶರಣರ ವಿರುದ್ಧ ಪೋಕ್ಸೋ ಕಾಯ್ದೆಯ ಅಡಿಯಲ್ಲಿ ಎಫ್ಐಆರ್ ದಾಖಲಾಗಿದೆ. ಹೀಗಾಗಿ ಮುರುಘಾ ಮಠದಲ್ಲಿ ಶ್ರೀಗಳ ನೇತೃತ್ವದಲ್ಲಿ ಮಹತ್ವದ ಸಲಹಾ ಸಮಿತಿ ಸಭೆ ನಡೆಯುತ್ತಿದೆ.
BIGG NEWS : ‘Meesho’ ಉದ್ಯೋಗಿಗಳಿಗೆ ಬಿಗ್ ಶಾಕ್ ; ‘ದಿನಸಿ ವ್ಯಾಪಾರ’ ಸ್ಥಗಿತ, 300 ಮಂದಿ ಕೆಲಸದಿಂದ ವಜಾ
ಈ ಸಭೆಯಲ್ಲಿ ವಕೀಲರು, ಭಕ್ತರು, ಪ್ರಮುಖ ಮುಖಂಡರು ಭಾಗಿಯಾಗಿದ್ದಾರೆ. ಇದು ಸುಳ್ಳು ದೂರು ಆಗಿದೆ. ರಾಜಕೀಯ ಷಡ್ಯಂತ್ರ ಹೂಡಿದ್ದಾಗಿದೆ. ಇದರ ವಿರುದ್ಧ ಹೋರಾಟ ನಡೆಸೋ ನಿರ್ಣಯವನ್ನು ಕೈಗೊಳ್ಳಲಾಗಿದೆ.
BIGG NEWS : ಮುರುಘ ಮಠದ ವಿರೋಧಿಗಳು ‘ ಮಕ್ಕಳ ಬುದ್ಧಿ ಕೆಡಿಸಿ ದೂರು’ ನೀಡಿದ್ದಾರೆ : ಮುರುಘಾ ಮಠದ ವಕೀಲ ವಿಶ್ವನಾಥಯ್ಯ
ಪ್ರಕರಣ ಹೊರ ಬರುತ್ತಿದ್ದಂತೇ, ಮುರುಘಾ ಮಠಕ್ಕೆ ಹಲವು ರಾಜಕೀಯ ಗಣ್ಯರು, ಭಕ್ತರು ಭೇಟಿ ನೀಡಿ, ಶ್ರೀಗಳ ಜೊತೆಗೆ ಸಮಾಲೋಚನೆ ನಡೆಸುತ್ತಿದ್ದಾರೆ. ಮುಂದೆ ಏನೆಲ್ಲಾ ಕ್ರಮ ಕೈಗೊಳ್ಳ ಬೇಕು ಎನ್ನುವ ಕುರಿತಂತೆಯೂ ಬಿಸಿ ಬಿಸಿ ಚರ್ಚೆ ನಡೆಸಲಾಗುತ್ತಿದೆ.