ಬೆಂಗಳೂರು: ನಗರಾಭಿವೃದ್ಧಿ ಸಚಿವ ಬಿ.ಎ ಬಸವರಾಜ್ ( Minister BA Basavaraj ) ಅವರ ತಂದೆ ಆಂಜಿನಪ್ಪ (85) ಅವರು ಇಂದು ನಿಧನರಾಗಿದ್ದಾರೆ. ಹೀಗಾಗಿ ನಗರಾಭಿವೃದ್ಧಿ ಸಚಿವರಾದ ಶ್ರೀ ಬಿ.ಎ.ಬಸವರಾಜ(ಬೈರತಿ) ಅವರಿಗೆ ಪಿತೃ ವಿಯೋಗ ಉಂಟಾಗಿದೆ.
BIGG NEWS : ಶಿವಮೊಗ್ಗದಲ್ಲಿ ಅಶಾಂತಿ ವಾತಾವರಣ ಸೃಷ್ಟಿಗೆ ಯತ್ನ : ಸಂಸದ ಬಿ.ವೈ. ರಾಘವೇಂದ್ರ
ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದಂತ ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ ( Bairati Basavaraj ) ಅವರ ತಂದೆ ಆಂಜಿನಪ್ಪ ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಇಂದು ಅವರು ಚಿಕಿತ್ಸೆ ಫಲಿಸದೇ ಸಾವನ್ನಪ್ಪಿರೋದಾಗಿ ತಿಳಿದು ಬಂದಿದೆ.
ಮೃತ ಆಂಜಿನಪ್ಪ ಅವರಿಗೆ ಸಚಿವ ಬಿಎ ಬಸವರಾಜ ಸೇರಿದಂತೆ ಐವರು ಗಂಡು ಮಕ್ಕಳು ಹಾಗೂ ಮೂವರು ಹೆಣ್ಣುಮಕ್ಕಳಿದ್ದಾರೆ. ಈ ಪೈಕಿ ಭೈರತಿ ಬಸವರಾಜ್ ಅವರು ದೊಡ್ಡಮಗನಾಗಿದ್ದಾರೆ.
ಇಂದು ಮೃತರಾದಂತ ಸಚಿವ ಬಿ ಎ ಬಸವರಾಜ್ ಅವರ ತಂದೆ ಆಂಜಿನಪ್ಪ ಅವರ ಅಂತ್ಯಕ್ರಿಯೆಯನ್ನು ಸಚಿವರ ಸ್ವಗ್ರಾಮ ಭೈರತಿಯಲ್ಲಿ ಸಂಜೆ 6 ಗಂಟೆಗೆ ನೆರವೇರಲಿದೆ.