ಬೆಂಗಳೂರು- ಪ್ರಧಾನಿ ನರೇಂದ್ರ ಮೋದಿ ( Prime Minister Narendra Modi ) ಅವರ ಜನಪ್ರಿಯತೆ ಮುಂದೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ( Congress Leader Rahul Gandhi ) ಬಿಗ್ ಜೀರೋ ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ( MP Renukacharya ) ಅವರು ವ್ಯಂಗ್ಯವಾಡಿದ್ದಾರೆ.
BIG NEWS: ನಿಗದಿತ ಕಾಲಮಿತಿಯೊಳಗೆ ‘ಜಲಜೀವನ್ ಮಿಷನ್ ಯೋಜನೆ’ ಅನುಷ್ಠಾನ – CM ಬಸವರಾಜ ಬೊಮ್ಮಾಯಿ ಸೂಚನೆ
ಇಂದು ವಿಧಾನಸೌಧದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು,ರಾಹುಲ್ ಗಾಂಧಿಯವರು ಬಲವಂತವಾಗಿ ಅಪ್ಪಿಕೊಳ್ಳಿ ಎಂದು ಡಿ.ಕೆ ಶಿವಕುಮಾರ್ ಅವರಿಗೆ ಸೂಚಿಸಿದ್ರು. ನನಗೆ ನಗು ಬರುತ್ತದೆ, ಒಂದು ಕಡೆ ಆಶ್ಚರ್ಯ ಆಗುತ್ತದೆ. ದೇವಸ್ಥಾನದಲ್ಲಿ ತೀರ್ಥವನ್ನು ಮಾತ್ರೆಯಂತೆ ತೆಗೆದುಕೊಳ್ಳುತ್ತಾರೆ. ನರೇಂದ್ರ ಮೋದಿ ವಿಶ್ವ ಮೆಚ್ಚಿದ ನಾಯಕ. ಮೋದಿ ಮುಂದೆ ರಾಹುಲ್ ಗಾಂಧಿ ಝೀರೋ ಎಂದು ರಾಹುಲ್ ಗಾಂಧಿ ಕುರಿತು ಟೀಕಿಸಿದರು.
ದಾವಣಗೆರೆಯಲ್ಲಿ ಸಿದ್ದರಾಮಯ್ಯ ಅಮೃತ ಮಹೋತ್ಸವ ಮಾಡಿದ್ರು. ಸಿದ್ದರಾಮಯ್ಯನವರ ಮೇಲಿನ ಗೌರವಕ್ಕೆ ಅಭಿಮಾನಿಗಳು ಬಂದಿದ್ದಾರೆ. ಆದರೆ ಅಧಿಕಾರಕ್ಕೆ ಬಂದೇ ಬರುತ್ತೇವೆಂದು ಕಾಂಗ್ರೆಸ್ ಮುಖಂಡರು ಭ್ರಮೆಯಲ್ಲಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಸಿದ್ದರಾಮಯ್ಯನವರ ಮೇಲೆ ನನಗೆ ನಿಜವಾಗಿಯೂ ಗೌರವ ಇದೆ. ನಾನು ಟೀಕೆ ಮಾಡಲ್ಲ. ಅವರ ಮೇಲಿಟ್ಟಿರುವ ಗೌರವಕ್ಕೆ ಅಭಿಮಾನಿಗಳು ಬಂದಿದ್ದಾರೆ. ಅವು ಕಾಂಗ್ರೆಸ್ ಮತಗಳಲ್ಲ. ಎಲ್ಲೋ ಒಂದು ಕಡೆ ಕಾಂಗ್ರೆಸ್ ಸತ್ತು ಹೋಗಿದೆ ಎಂದು ಟೀಕಿಸಿದರು.
ನನಗೆ ಸರಿಯಾಗಿ ಹುಟ್ಟುಹಬ್ಬದ ದಿನ ಗೊತ್ತಿಲ್ಲ ಅಂತ ಸಿದ್ದರಾಮಯ್ಯನವರು ಹೇಳಿರುವುದನ್ನು ಗಮನಿಸಿದ್ದೇನೆ. ಕಾಂಗ್ರೆಸ್ನ ಮುಖಂಡರು ಭ್ರಮಾಲೋಕದಲ್ಲಿದ್ದಾರೆ. ರಾಹುಲ್ ಗಾಂಧಿಯವರು ಬಲವಂತವಾಗಿ ಅಪ್ಪಿಕೊಳ್ಳಿ ಎಂದು ಹೇಳಿದರು. ನನಗೆ ಇದು ಒಂದು ಕಡೆ ನಗು ಬರುತ್ತದೆ, ಮತ್ತೊಂದು ಕಡೆ ಆಶ್ಚರ್ಯ ಆಗುತ್ತದೆ ಎಂದು ಕುಹಕವಾಡಿದರು.
BIG NEWS: ‘ಮೈಸೂರು ದಸರಾ ಮಹೋತ್ಸವ-2022’ರ ಜಂಬೂಸವಾರಿಗೆ ‘ಆನೆಗಳ ಪಟ್ಟಿ’ ಫೈನಲ್: ಇಲ್ಲಿದೆ ಸಂಪೂರ್ಣ ಲೀಸ್ಟ್
ದೇವಸ್ಥಾನದಲ್ಲಿ ತೀರ್ಥವನ್ನ ಮಾತ್ರೆಯಂತೆ ತೆಗೆದುಕೊಳ್ಳುತ್ತಾರೆ. ನರೇಂದ್ರ ಮೋದಿ ವಿಶ್ವ ಮೆಚ್ಚಿದ ನಾಯಕ. ಮೋದಿ ಮುಂದೆ ರಾಹುಲ್ ಗಾಂದಿ ಜೀರೋ. ಹಿಂದೂ ವಿರೋಧಿಯವರು. ವಿನಃ ಕಾರಣ ಕಾಂಗ್ರೆಸ್ನವರಿಗೆ ಕಾನೂನನ್ನು ಗೌರವಿಸುವುದು ಗೊತ್ತಿಲ್ಲ. ಸಿದ್ದರಾಮಯ್ಯ ಕಾರ್ಯಕ್ರಮಕ್ಕೆ ಬಂದವರು ಕಾಂಗ್ರೆಸ್ನವರಲ್ಲ, ಸಿದ್ದರಾಮಯ್ಯನವರ ಅಭಿಮಾನಿಗಳು. ಬಹಳಷ್ಟು ಜನ ಪಕ್ಷಾತೀತವಾಗಿ ಹೋಗಿದ್ದಾರೆ ಎಂದು ಹೇಳಿದರು.
ಕಾಂಗ್ರೆಸ್ನವರು ಈಗ ಭ್ರಮಾಲೋಕದಲ್ಲಿ ತೇಲಾಡುತ್ತಿದ್ದಾರೆ. ನಾವು ಅಧಿಕಾರಕ್ಕೆ ಬಂದೇ ಬರುತ್ತೇವೆ ಅಂದುಕೊಂಡಿದ್ದಾರೆ. ಅಲ್ಲಿ ಬಂದಿರುವ 60 ಪರ್ಸೆಂಟ್ ಜನ ಸಿದ್ದರಾಮಯ್ಯ ಅಭಿಮಾನಿಗಳು. ನಾನು ಸಿದ್ದರಾಮಯ್ಯನವರ ಬಗ್ಗೆ ಟೀಕೆ ಮಾಡಲ್ಲ. ಸಿದ್ದರಾಮಯ್ಯನವರ ಬಗ್ಗೆ ಇಟ್ಟಿರುವ ಗೌರವಕ್ಕೆ ಅಭಿಮಾನಿಗಳು ಬಂದಿದ್ದಾರೆ. ಆದರೆ ಅವರು ಕಾಂಗ್ರೆಸ್ ಮತದಾರರು ಅಲ್ಲ. ಕಾಂಗ್ರೆಸ್ ಒಂದು ರೀತಿ ಸತ್ತೇ ಹೋಗಿದೆ ಎಂದು ಟೀಕಿಸಿದರು.
ಬಿಜೆಪಿ ಸಂಘಟನೆ ದೇಶ, ರಾಜ್ಯದಲ್ಲಿ ಬಲಿಷ್ಠವಾಗಿದೆ. ಪ್ರಧಾನಿ ನರೇಂದ್ರ ಮೋದಿ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅನೇಕ ಅಭಿವೃದ್ಧಿ ಕಾರ್ಯಕ್ರಮಗಳನ್ನು ನೀಡಿದ್ದಾರೆ. ನೇಕಾರ ಸಮುದಾಯದ ಮಕ್ಕಳಿಗೆ ವಿದ್ಯಾನಿಧಿ ಕಾರ್ಯಕ್ರಮವನ್ನು ಸಿಎಂ ಕೊಟ್ಟಿದ್ದಾರೆ. ಸ್ವಾಮಿ ವಿವೇಕಾನಂದರ ಹೆಸರಿನಲ್ಲಿ ಯುವಕರಿಗೆ ಆದ್ಯತೆ ಕೊಟ್ಟಿದ್ದಾರೆ. ನಮ್ಮ ಸರ್ಕಾರ ಅನೇಕ ಜನಪರ ಕಾರ್ಯಕ್ರಮಗಳನ್ನು ನೀಡಿದೆ. ನಾವು ಒಟ್ಟಾಗಿ ಮುನ್ನುಗ್ಗಿ ಮತ್ತೆ ಅಧಿಕಾರಕ್ಕೆ ಬರುತ್ತೇವೆ. ಜನರ ಮನೆ ಬಾಗಿಲಿಗೆ ಯೋಜನೆ ತಲುಪಿಸಿ ಮತ್ತೆ ನಾವು ಅಧಿಕಾರಕ್ಕೆ ಬರುವ ವಿಶ್ವಾಸ ಇದೆ ಎಂದರು.
ಸಿ.ಎಂ.ಬಸವರಾಜ್ ಬೊಮ್ಮಾಯಿ ಕೊಟ್ಟ ಅನೇಕ ಕಾರ್ಯಕ್ರಮಗಳು ಜನಪರವಾಗಿವೆ. ಕಾಂಗ್ರೆಸ್ ಸಿದ್ದರಾಮೋತ್ಸವ ಕಾರ್ಯಕ್ರಮದ ಬಗ್ಗೆ ನಮಗೇನೂ ಭಯ ಇಲ್ಲ. ಆ ಕಾರ್ಯಕ್ರಮ ವಿರೋಧ ಮಾಡಿದ್ದು ಕಾಂಗ್ರೆಸ್ನವರೇ ಹೊರತು, ನಾವಲ್ಲಾ. ಬಿಜೆಪಿ ಜನಪರ ಕಾರ್ಯಕ್ರಮಗಳ ಬಗ್ಗೆ ರಾಜ್ಯಾದ್ಯಂತ ಕಾರ್ಯಕ್ರಮ ಮಾಡಲಿದೆ. ಆ ಕಾರ್ಯಕ್ರಮದ ಸಮಾರೋಪ ಸಮಾರಂಭವನ್ನು ದಾವಣಗೆರೆಯಲ್ಲಿ ಮಾಡಲು ಸಿಎಂಗೆ ವಿನಂತಿ ಮಾಡುತ್ತೇನೆ ಎಂದು ರೇಣುಕಾಚಾರ್ಯ ಅವರು ತಿಳಿಸಿದರು.
ಒಟ್ಟಾಗಿ ನಾವು ಮುನ್ನುಗ್ಗಿ ಮತ್ತೆ ಅಧಿಕಾರಕ್ಕೆ ಬರುತ್ತೇವೆ. ಜನರ ಮನೆ ಬಾಗಿಲನ್ನು ತಲುಪಿ ಮತ್ತೆ ನಾವು ಅಧಿಕಾರಕ್ಕೆ ಬರುವ ವಿಶ್ವಾಸ ಇದೆ. ನಾವು ಸಹ ದಾವಣಗೆರೆಯಲ್ಲಿ ಸಮಾವೇಶ ಮಾಡುತ್ತೇವೆ. ಆದರೆ ಇದು ಸಿದ್ದರಾಮೋತ್ಸವಕ್ಕೆ ಕೌಂಟರ್ ಅಲ್ಲ ಎಂದು ಸ್ಪಷ್ಟಪಡಿಸಿದರು.
ಜನಪರವಾದ ಯೋಜನೆಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸುವ ಸಲುವಾಗಿ ಸಮಾರೋಪ ಕಾರ್ಯಕ್ರಮ ಮಾಡುತ್ತೇವೆ. ಈ ಬಗ್ಗೆ ಸಿಎಂ ಹಾಗೂ ಅಧ್ಯಕ್ಷರ ಜೊತೆಗೆ ಚರ್ಚೆ ನಡೆಸಿದ್ದೇವೆ. ಕಾರ್ಯಕ್ರಮದ ಸಮಾರೋಪಕ್ಕೆ ಅವಕಾಶ ಕೊಡಿ ಅಂತ ಕೇಳಿದ್ದೇವೆ. ಸಿದ್ದರಾಮೋತ್ಸವ ವಿರೋಧ ಮಾಡಿದ್ದು ಕಾಂಗ್ರೆಸ್ನವರು. ಕಾಂಗ್ರೆಸ್ನಲ್ಲಿ ಗುಂಪಿಗಾರಿಕೆ ಇದೆ. ಬಿಜೆಪಿಯಲ್ಲಿ ಯಾವುದೇ ಗುಂಪಿಗಾರಿಕೆ ಇಲ್ಲ. ಸಿದ್ದರಾಮಯ್ಯನವರ ಮೇಲೆ ಗೌರವ ಇದೆ. ಯಾವುದೇ ಭಯವಿಲ್ಲ ಎಂದು ಹೇಳಿದರು.