ಬಾಗಲಕೋಟೆ: ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ ಯೋಜನೆ ಪಿ.ಎಂ.ಕಿಸಾನ್ದಡಿ ಪರಿಹಾರ ಪಡೆಯಲು ರೈತರು ಇ-ಕೆವೈಸಿ ಮಾಡಿಸುವುದು ಕಡ್ಡಾಯವಾಗಿದೆ. ಪ್ರತಿ ಫಲಾನುಭವಿಯು ಇ-ಕೆವೈಸಿ ಮಾಡಿಸಲು 31 ಜುಲೈ 2022 ರವರೆಗೆ ಅವಧಿಯನ್ನು ವಿಸ್ತರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಪಿ.ಸುನೀಲ್ಕುಮಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇ-ಕೆವೈಸಿ ಮಾಡಿಸಲು ರೈತರು ಕೇಂದ್ರ ಸರ್ಕಾರದ ಜಾಲ ತಾಣವಾದ https://pmkisan.gov.in/ ಪೋರ್ಟಲ್ನ ಪಾರ್ಮರ್ಸ್ ಕಾರ್ನರ್ನ ಇ-ಕೆವೈಸಿ ಅವಕಾಶದಡಿ ರೈತನ (ಫಲಾನುಭವಿ) ಆಧಾರ ಸಂಖ್ಯೆಯನ್ನು ನಮೂದಿಸಿ ನಂತರ ಆಧಾರ ಸಂಖ್ಯೆ ಯೊಂದಿಗೆ ನೊಂದಣಿಯಾದ ಮೊಬೈಲ್ ಸಂಖ್ಯೆಯನ್ನು ದಾಖಲಿಸಬೇಕು. ಆಧಾರ ಕಾರ್ಡನೊಂದಿಗೆ ನೊಂದಣಿಯಾದ ಮೊಬೆಲ್ ಸಂಖ್ಯೆಗೆ ಓಟಿಪಿ ರವಾನೆಯಾಗುತ್ತದೆ. ನಂತರ ಸ್ವೀಕರಿಸಿದ ಓಟಿಪಿ ಯನ್ನು ದಾಖಲಿಸಿ ಸಬ್ಮೀಟ್ ಎಂಬ ಬಟನ್ ಒತ್ತಬೇಕು.
ಆಗ ತಂತ್ರಾಂಶ ಆಧಾರಿತ ಪರಿಶೀಲನೆ ನಡೆದು ಇ-ಕೆವೈಸಿ ಸಕ್ಸಸ್ಪುಲ್ ಎಂಬ ವಾಕ್ಯವು ಗೋಚರಿಸುತ್ತದೆ. ಹೀಗೆ ಮೊಬೈಲ್ ಓಟಿಪಿ ಆಧಾರಿತವಾಗಿ ಫಲಾನುಭವಿಯು ಖುದ್ದಾಗಿ ಇ-ಕೆವೈಸಿ ಮಾಡಬಹುದಾಗಿದೆ. ಯಾವ ಫಲಾನುಭವಿಯ ಮೊಬೈಲ್ ಸಂಖ್ಯೆ ಆಧಾರ ಸಂಖ್ಯೆಯೊಂದಿಗೆ ಜೋಡಣೆಯಾಗಿರುವುದಿಲ್ಲವೋ ಅಥವಾ ಯಾವ ಮೊಬೈಲ್ ಸಂಖ್ಯೆಗೆ ಇ-ಕೆವೈಸಿ ಗಾಗಿ ಕಳುಹಿಸಿದ ಓಟಿಪಿಯು ಸ್ವೀಕೃತವಾಗಿರುವುದಿಲ್ಲವೋ ಅಂತಹ ಫಲಾನುಭವಿಗಳು ಸಮೀಪದ ಸಿಎಸ್ಸಿ-ನಾಗರಿಕ ಸೇವಾ ಕೇಂದ್ರಗಳಿಗೆ ಭೇಟಿ ನೀಡಿ ಅಲ್ಲಿ ಬಯೋಮೆಟ್ರಿಕ್ ಯಂತ್ರದ ಮೂಖಾಂತರ ಇ-ಕೆವೈಸಿ ಮಾಡಬಹು.
ಇಲ್ಲಿ ಕೈ ಬೆರಳಿನ ಗುರುತು ಆಧಾರದ ಮೇಲೆ ಇ-ಕೆವೈಸಿ ಮಾಡಲಾಗುತ್ತದೆ. 2ನೇ ಪ್ರಕ್ರಿಯೆ (ವಿಧಾನ) ಗಾಗಿ ಮಾತ್ರ ಸಿಎಸ್ಸಿ-ನಾಗರಿಕ ಸೇವಾ ಕೇಂದ್ರದವರಿಗೆ ರೂ. 15/-ಗಳನ್ನು ಫಲಾನುಭವಿಯು ಪಾವತಿಸಬೇಕು. ಹೆಚ್ಚಿನ ಮಾಹಿತಿಗೆ ಹತ್ತಿರದ ರೈತ ಸಂಪರ್ಕ ಕೇಂದ್ರ ಅಥವಾ ಸಹಾಯಕ ಕೃಷಿ ನಿರ್ದೇಶಕರ ಕಛೇರಿಗೆ ಭೇಟಿ ನೀಡಬಹುದಾಗಿದೆ.
BREAKING: ವೇಶ್ಯಾವಾಟಿಕೆ ನಡೆಸುತ್ತಿದ್ದ ಮೇಘಾಲಯ ಬಿಜೆಪಿ ನಾಯಕನ ಬಂಧನ | Meghalaya BJP Leader