ನವದೆಹಲಿ: ದಿನೇ ದಿನೇ ದೇಶದಲ್ಲಿ ಹುಲಿಗಳ ಸಾವಿನ ಸಂಖ್ಯೆ ಹೆಚ್ಚಾಗುತ್ತಿದೆ. ಇತ್ತೀಚಿನ ಸಮೀಕ್ಷೆಯ ಪ್ರಕಾರ ದೇಶದಲ್ಲಿಯೇ ಅತಿಹೆಚ್ಚು ಹುಲಿಗಳ ಸಾವಿನ ಸಂಖ್ಯೆಯಲ್ಲಿ ಮೊದಲ ಸ್ಥಾನವನ್ನು ಮಧ್ಯಪ್ರದೇಶ ಪಡೆದ್ರೇ, ಕರ್ನಾಟಕ ನಂ.3ನೇ ಸ್ಥಾನದಲ್ಲಿದೆ ಎಂದು ತಿಳಿದು ಬಂದಿದೆ.
ಭಾರತ ಹುಲಿಗಳ ರಾಜ್ಯ ಎಂದೇ ಖ್ಯಾತಿಯಾಗಿತ್ತು. ಆದ್ರೇ ಜುಲೈ.15ರವರೆಗೆ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ ನಡೆಸಿದಂತ ಸಮೀಪಕ್ಷಾ ವರದಿಯ ಪ್ರಕಾರ ಒಟ್ಟು 74 ಹುಲೆಗಳು ಮೃತಪಟ್ಟಿದ್ದು, ಮಧ್ಯಪ್ರದೇಶವೊಂದರಲ್ಲೇ 27 ಸಾವನ್ನಪ್ಪಿವೆ.
ಇಂದು ಭಾರತದ 15ನೇ ರಾಷ್ಟ್ರಪತಿಯಾಗಿ ‘ದ್ರೌಪತಿ ಮುರ್ಮು’ ಪ್ರಮಾಣ ವಚನ | Draupadi Murmu
ಈ ವರದಿಯ ಪರ್ಕಾರ ಅತಿಹೆಚ್ಚು ಹುಲಿಗಳು ಸಾವನ್ನಪ್ಪಿದ ವರದಿಯಾದ ರಾಜ್ಯಗಳಲ್ಲಿ ಕರ್ನಾಟಕ 3ನೇ ಸ್ಥಾನದಲ್ಲಿದೆ. ಮಧ್ಯಪ್ರದೇಶ ಮೊದಲ ಸ್ಥಾನವನ್ನು ಪಡೆದಿದೆ. ಮಧ್ಯಪ್ರದೇಶದಲ್ಲಿ 27, ಮಹಾರಾಷ್ಟ್ರದಲ್ಲಿ 15 ಮತ್ತು ಕರ್ನಾಟಕದಲ್ಲಿ 11, ಅಸ್ಸಾಂನಲ್ಲಿ 5 ಹುಲಿಗಳು ಮೃತಪಟ್ಟಿವೆ.