ಈ ವಾರದಲ್ಲೇ CET-2022ರ ಫಲಿತಾಂಶ ಪ್ರಕಟ | CET-2022 Exam Results

ಬೆಂಗಳೂರು: ಸಿಇಟಿ-2022ರ ಪರೀಕ್ಷೆಯ ಫಲಿತಾಂಶವನ್ನು ( CET-2022 Exam Results ) ಜುಲೈ 29 ಅಥವಾ 30ರಂದು ಪ್ರಕಟಿಸಲಾಗುತ್ತದೆ ಎಂಬುದಾಗಿ ತಿಳಿದು ಬಂದಿದೆ. ಸಿಬಿಎಸ್ಸಿ 12ನೇ ತರಗತಿ ಫಲಿತಾಂಶ ವಿಳಂಬಗೊಂಡಿದ್ದರಿಂದಾಗಿ ಸಿಇಟಿ ಫಲಿತಾಂಶ ಪ್ರಕಟಣೆಯಲ್ಲಿಯೂ ತಡವಾಗಿತ್ತು. ಇದೀಗ ಸಿಬಿಎಸ್ಇಯ 12ನೇ ತರಗತೆ ಫಲಿತಾಂಶ ಪ್ರಕಟವಾಗಿದೆ. ಸಿಬಿಎಸ್ಇ, ಐಸಿಎಸ್ಇನಲ್ಲಿ ಪಡೆದಿರುವ ಫಲಿತಾಂಶದ ವಿಜ್ಞ್ನ ವಿಷಯಗಳ ಶೇ.50ರಷ್ಟು ಅಂಕಗಳನ್ನು ಸಿಇಟಿ Rank ಪಟ್ಟಿಗೆ ಪರಿಗಣಿಸಿ, ಪಟ್ಟಿಯನ್ನು ತಯಾರಿಸಿ, ಈ ತಿಂಗಳ ಅಂತ್ಯಕ್ಕೆ ಫಲಿತಾಂಶ ಪ್ರಕಟಗೊಳ್ಳುವ ಸಾಧ್ಯತೆ ಇದೆ.