Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಸಾಗರದ ಹಲಸು, ಮಾವು ಮೇಳಕ್ಕೆ ಪ್ರಹ್ಲಾದ್ ಜೋಷಿ ಭೇಟಿ: ಹಣ್ಣಿನ ರುಚಿ ಸವಿದ ಕೇಂದ್ರ ಸಚಿವರು, ನಾಳೆ ಕೊನೆ ದಿನ

​ಯು18 ಏಷ್ಯಾ ಕಪ್ 2026: ಭಾರತೀಯ ಹಾಕಿ ತಂಡಗಳ ಸಾಧನೆಗೆ ಪ್ರಧಾನಿ ಮೋದಿ ಅಭಿನಂದನೆ

​ಫ್ರೆಂಚ್ ಓಪನ್ ಚಾಂಪಿಯನ್: ಮಾಯಾ ಚ್ವಾಲಿನ್ಸ್ಕ ವಿರುದ್ಧ ಭರ್ಜರಿ ಜಯ ಸಾಧಿಸಿ ಪ್ರಶಸ್ತಿ ಮುಡಿಗೇರಿಸಿಕೊಂಡ ಮಿರಾ ಆಂಡ್ರೀವಾ

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » 2nd ಪಿಯು ಪರೀಕ್ಷೆ ರಿಸಲ್ಟ್ : ಕೊಲೆ ಕೇಸ್​ನಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಕೈದಿಗೆ ಶೇ 80.1ರಷ್ಟು ಅಂಕ!
KARNATAKA

2nd ಪಿಯು ಪರೀಕ್ಷೆ ರಿಸಲ್ಟ್ : ಕೊಲೆ ಕೇಸ್​ನಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಕೈದಿಗೆ ಶೇ 80.1ರಷ್ಟು ಅಂಕ!

By ಸುರೇಶ್‌

ಬಳ್ಳಾರಿ : 2025-2026ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ ನಿನ್ನೆ ಪ್ರಕಟವಾಗಿದೆ. ಪ್ರತಿ ಬಾರಿಯಂತೆ ಈ ಬಾರಿಯೂ ಕೂಡ ಫಲಿತಾಂಶದಲ್ಲಿ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ ಆಗದೆ ಕಳೆದ ಬಾರಿ 72 ಪ್ರತಿಶತ ವಿದ್ಯಾರ್ಥಿಗಳು ತೆರ್ಗಡೆಯಾಗಿದ್ದು ಈ ಬಾರಿ ದಾಖಲೆಯ 86 ಪ್ರತಿಶತ ವಿದ್ಯಾರ್ಥಿಗಳು ಸೇರ್ಗಡೆ ಆಗಿದ್ದು ದಾಖಲೆ ಮಟ್ಟದಲ್ಲಿ ಫಲಿತಾಂಶ ಏರಿಕೆ ಆಗಿದೆ.

ಇದೀಗ ಕೊಲೆ ಪ್ರಕರಣವೊಂದರಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿ ಬಳ್ಳಾರಿ ಕೇಂದ್ರ ಕಾರಾಗೃಹದಲ್ಲಿರುವ ಕೈದಿಯೊಬ್ಬರು ದ್ವಿತೀಯ ಪಿಯುಸಿ ಕಲಾ ವಿಭಾಗದಲ್ಲಿ ಪ್ರಥಮ ದರ್ಜೆ(ಶೇಕಡಾ 80.1)ಯಲ್ಲಿ ಪಾಸ್‌ ಆಗುವ ಮೂಲಕ ಗಮನ ಸೆಳೆದಿದ್ದಾರೆ. ಹೌದು ಕೊಲೆ ಪ್ರಕರಣವೊಂದರಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿ ಕಾರಾಗೃಹದಲ್ಲಿರುವ ಕೈದಿಯೊಬ್ಬರು ದ್ವಿತೀಯ ಪಿಯುಸಿ ಪಾಸ್​ ಆಗಿದ್ದಾರೆ.

ಬೆಂಗಳೂರು ಮೂಲದ ಎಸ್‌.ಅಶೋಕ್‌ ಕುಮಾರ್‌ ಎಂಬಾತ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿ, ಕಳೆದ 7 ವರ್ಷಗಳಿಂದ ಬಳ್ಳಾರಿ ಕೇಂದ್ರ ಕಾರಾಗೃಹದಲ್ಲಿ ಬಂಧಿಯಾಗಿದ್ದಾರೆ. ವಿದ್ಯಾಭ್ಯಾಸದ ಬಗ್ಗೆ ಹೆಚ್ಚಿನ ಆಸಕ್ತಿ ಹೊಂದಿದ್ದ ಅಶೋಕ್‌ ಕುಮಾರ್‌, ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ ಬರೆಯಲು ಇಂಗಿತ ವ್ಯಕ್ತಪಡಿಸಿದ್ದ. ಇದಕ್ಕೆ ಸಹಕರಿಸಿದ ಜೈಲಿನ ಅಧಿಕಾರಿಗಳು ದೂರ ಶಿಕ್ಷಣದ ಮೂಲಕ ಪರೀಕ್ಷೆಗೆ ನೋಂದಣಿ ಮಾಡಿಸಿದ್ದರು.

ಜೈಲಿನ ಪ್ರತ್ಯೇಕ ಸೆಲ್​ನಲ್ಲಿಯೇ ಅಭ್ಯಾಸ ಮಾಡುತ್ತಿದ್ದ ಅಶೋಕ್, ಕಲಾ ವಿಭಾಗದಲ್ಲಿ ಪರೀಕ್ಷೆ ಬರೆದಿದ್ದ. ಇದೀಗ ಫಲಿತಾಂಶ ಹೊರಬಿದ್ದಿದ್ದು,​ 600ಕ್ಕೆ 481 ಅಂಕ ಪಡೆದುಕೊಂಡಿದ್ದಾರೆ. ಕನ್ನಡ 82, ಇಂಗ್ಲಿಷ್ 69, ಇತಿಹಾಸ 94, ಅರ್ಥಶಾಸ್ತ್ರ 84, ಸಮಾಜಶಾಸ್ತ್ರ 77 ಹಾಗೂ ರಾಜ್ಯಶಾಸ್ತ್ರದಲ್ಲಿ 75 ಅಂಕಗಳನ್ನು ಪಡೆದುಕೊಂಡಿದ್ದಾರೆ.

ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದರೂ ಓದುವ ಅಭ್ಯಾಸ ರೂಢಿಸಿಕೊಂಡಿದ್ದರು. ಹೀಗಾಗಿ ಖಾಸಗಿ ಅಭ್ಯರ್ಥಿಯಾಗಿ ಪರೀಕ್ಷೆ ಬರೆದು ಇದೀಗ ಫಸ್ಟ್ ಕ್ಲಾಸ್​ನಲ್ಲಿ ಪಾಸಾಗಿದ್ದಾರೆ. ಮುಂದಿನ ದಿನಗಳಲ್ಲಿ ಪದವಿ ಶಿಕ್ಷಣದ ಬಗ್ಗೆ ಆಸಕ್ತಿ ತೋರಿದಲ್ಲಿ ಅದಕ್ಕೂ ಅವಕಾಶ ಮಾಡಿಕೊಡಲಾಗುವುದು ಎಂದು ಜೈಲಿನ ಅಧಿಕಾರಿಗಳು ತಿಳಿಸಿದ್ದಾರೆ.

ಈ ಬಗ್ಗೆ ಡಿಜಿಪಿ ಅಲೋಕ್ ಕುಮಾರ್​ ಅವರು ತಮ್ಮ ಎಕ್ಸ್​​ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಜೀವಾವಧಿ ಶಿಕ್ಷೆಗೊಳಗಾದ ಕೈದಿಗಳಲ್ಲಿ ಒಬ್ಬರಾದ ಅಶೋಕ್​, ಪಿಯುಸಿ ಪರೀಕ್ಷೆಯಲ್ಲಿ 80.1% ಅಂಕಗಳನ್ನು ಪಡೆದಿರುವುದು ಹೃದಯಸ್ಪರ್ಶಿಯಾಗಿದೆ. ಬಳ್ಳಾರಿ ಕೇಂದ್ರ ಕಾರಾಗೃಹದಿಂದ ಜೈಲು ಅಧಿಕಾರಿಗಳ ಬೆಂಗಾವಲಿನೊಂದಿಗೆ ಪರೀಕ್ಷೆಗೆ ಹಾಜರಾಗಿದ್ದರು. ಮುಂದಿನ ಉತ್ತಮ ಭವಿಷ್ಯದ ಬಗ್ಗೆಗಿನ ಅವರ ಭರವಸೆಯನ್ನು ಜೈಲಿನ ಗೋಡೆಗಳು ಇನ್ನೂ ಹುಸಿಗೊಳಿಸಿಲ್ಲ ಎಂಬುದನ್ನು ಕಂಡು ಸಂತೋಷವಾಯಿತು ಎಂದು ಬರೆದುಕೊಂಡಿದ್ದಾರೆ.

It’s heartening to see that one of our life convict prisoners Ashok has obtained 80.1% marks in PUC exam. He appeared under Prison escort from Ballari Central Prison for his exams.

Glad to see that Walls of the prison has not subdued his hopes for a better future. pic.twitter.com/Nzlcy076SR

— alok kumar (@alokkumar6994) April 9, 2026

Share. Facebook Twitter LinkedIn WhatsApp Email

Related Posts

ಸಾಗರದ ಹಲಸು, ಮಾವು ಮೇಳಕ್ಕೆ ಪ್ರಹ್ಲಾದ್ ಜೋಷಿ ಭೇಟಿ: ಹಣ್ಣಿನ ರುಚಿ ಸವಿದ ಕೇಂದ್ರ ಸಚಿವರು, ನಾಳೆ ಕೊನೆ ದಿನ

2 Mins Read

ರಾಮನಗರದ ಬಿಡದಿ ಬಳಿ ಸರಣಿ ಅಪಘಾತ: ಪ್ರಾಣಾಪಾಯದಿಂದ ಕೆ.ಆರ್.ಪೇಟೆ ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್ ಪಾರು

1 Min Read

BREAKING: ಸಚಿವ ಸ್ಥಾನಕ್ಕೆ ನೀಡಿದ್ದ ರಾಜೀನಾಮೆ ವಾಪಾಸ್ ಪಡೆದ ರಾಮಲಿಂಗಾರೆಡ್ಡಿ

1 Min Read
Recent News

ಸಾಗರದ ಹಲಸು, ಮಾವು ಮೇಳಕ್ಕೆ ಪ್ರಹ್ಲಾದ್ ಜೋಷಿ ಭೇಟಿ: ಹಣ್ಣಿನ ರುಚಿ ಸವಿದ ಕೇಂದ್ರ ಸಚಿವರು, ನಾಳೆ ಕೊನೆ ದಿನ

​ಯು18 ಏಷ್ಯಾ ಕಪ್ 2026: ಭಾರತೀಯ ಹಾಕಿ ತಂಡಗಳ ಸಾಧನೆಗೆ ಪ್ರಧಾನಿ ಮೋದಿ ಅಭಿನಂದನೆ

​ಫ್ರೆಂಚ್ ಓಪನ್ ಚಾಂಪಿಯನ್: ಮಾಯಾ ಚ್ವಾಲಿನ್ಸ್ಕ ವಿರುದ್ಧ ಭರ್ಜರಿ ಜಯ ಸಾಧಿಸಿ ಪ್ರಶಸ್ತಿ ಮುಡಿಗೇರಿಸಿಕೊಂಡ ಮಿರಾ ಆಂಡ್ರೀವಾ

​ಕುಟುಂಬದ ನಿರ್ವಹಣೆಗೆ ‘ಉದ್ಯೋಗವಿಲ್ಲ’ ಎಂಬ ನೆಪ ನಡೆಯದು: ಪತಿಯ ಹೊಣೆಗಾರಿಕೆಯನ್ನು ಎತ್ತಿ ಹಿಡಿದ ದೆಹಲಿ ನ್ಯಾಯಾಲಯ

State News
KARNATAKA

ಸಾಗರದ ಹಲಸು, ಮಾವು ಮೇಳಕ್ಕೆ ಪ್ರಹ್ಲಾದ್ ಜೋಷಿ ಭೇಟಿ: ಹಣ್ಣಿನ ರುಚಿ ಸವಿದ ಕೇಂದ್ರ ಸಚಿವರು, ನಾಳೆ ಕೊನೆ ದಿನ

By ವಸಂತ ಬಿ ಈಶ್ವರಗೆರೆ KARNATAKA 2 Mins Read

ಶಿವಮೊಗ್ಗ: ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗ ಜಿಲ್ಲೆಯ ಸಾಗರ ನಗರದಲ್ಲಿ ಹಲಸು ಮತ್ತು ಮಾವು ಪ್ರಿಯರಿಗಾಗಿ ಹಮ್ಮಿಕೊಳ್ಳಲಾಗಿರುವ ‘ಬೃಹತ್ ಹಲಸು ಮತ್ತು…

ರಾಮನಗರದ ಬಿಡದಿ ಬಳಿ ಸರಣಿ ಅಪಘಾತ: ಪ್ರಾಣಾಪಾಯದಿಂದ ಕೆ.ಆರ್.ಪೇಟೆ ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್ ಪಾರು

BREAKING: ಸಚಿವ ಸ್ಥಾನಕ್ಕೆ ನೀಡಿದ್ದ ರಾಜೀನಾಮೆ ವಾಪಾಸ್ ಪಡೆದ ರಾಮಲಿಂಗಾರೆಡ್ಡಿ

ಸಿಎಂ ಡಿ.ಕೆ ಶಿವಕುಮಾರ್ ಆಪ್ತ ಕಾರ್ಯದರ್ಶಿಯಾಗಿ ಕೆಎಎಸ್ ಅಧಿಕಾರಿ ಡಾ. ರಾಜೇಂದ್ರ ಪ್ರಸಾದ್ ನೇಮಕ

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.