ಮೈಸೂರು : ಸ್ಪಾ ಹೆಸರಲ್ಲಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಅಡ್ಡೆಯ ಮೇಲೆ ಪೊಲೀಸರು ದಾಳಿ ನಡೆಸಿದ್ದು, ದಾಳಿಯ ವೇಳೆ ಐವರು ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಅಲ್ಲದೆ ಐವರು ಯುವತಿಯರನ್ನು ಇದೆ ವೇಳೆ ರಕ್ಷಣೆ ಮಾಡಿರುವ ಘಟನೆ ಮೈಸೂರಿನ ವಿಜಯನಗರದಲ್ಲಿ ನಡೆದಿದೆ.
ಹೌದು ಮೈಸೂರಿನ ವಿಜಯನಗರದಲ್ಲಿ ಸ್ಪಾ ಹೆಸರಲ್ಲಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಅಡ್ಡೆಯ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಐವರು ಆರೋಪಿಗಳನ್ನು ವಶಕ್ಕೆ ಪಡೆದ ಪೊಲೀಸರು ಐವರು ಯುವತಿಯರನ್ನು ಇದೆ ವೇಳೆ ಪೊಲೀಸರು ರಕ್ಷಣೆ ಮಾಡಿದ್ದಾರೆ
ಮೈಸೂರಿನ ವಿಜಯನಗರದ ರಾಯಲ್ ಇಷಾ ಸ್ಪಾ ಹೆಸರಲ್ಲಿ ವೇಶ್ಯಾ ವಾಟಿಕೆ ದಂದೇ ನಡೆಸುತ್ತಿದ್ದ ಆರೋಪ ಕೇಳಿ ಬಂದಿದೆ ದಂಧೆಯ ಬಗ್ಗೆ ಒಡನಾಡಿ ಸಂಸ್ಥೆಗೆ ನಾಗರೀಕರು ದೂರು ನೀಡಿದ್ದರು ಎಂದು ಹೇಳಲಾಗುತ್ತಿದೆ. ವಿಜಯನಗರ ಪೊಲೀಸರ ಜೊತೆ ಎಸಿಪಿ ಗಜೇಂದ್ರ ಪ್ರಸಾದ್ ಸಿಬ್ಬಂದಿಗಳ ಜೊತೆಗೆ ದಾಳಿ ನಡೆಸಿದ್ದಾರೆ. ಆರೋಪಿಗಳನ್ನು ವಶಕ್ಕೆ ಪಡೆದು ಪೊಲೀಸರು ಐವರು ಯುವತಿಯರನ್ನು ರಕ್ಷಿಸಿದ್ದಾರೆ.