ಬೆಂಗಳೂರು: ನಟ ಅನಿರುದ್ಧ್ ಗೆ ಯಾವುದೇ ಅನ್ಯಾಯವಾಗಲು ನಾವು ಬಿಡುವುದಿಲ್ಲ. ಅನಿರುದ್ಧ್ ಬ್ಯಾನ್ ಮಾಡುವ ಅಧಿಕಾರ ಯಾರಿಗೂ ಇಲ್ಲ ಎಂಬುದಾಗಿ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಬಾ ಮಾ ಹರೀಶ್ ಹೇಳಿದ್ದಾರೆ.
ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು ನಿರ್ಮಾಪಕರ ಸಂಘದಲ್ಲಿ ಸಾಕಷ್ಟು ಭಿನ್ನಾಭಿಪ್ರಾಯಗಳಿವೆ. ಅನಿರುದ್ಧ್ ಟಾರ್ಗೆಟ್ ಮಾಡ್ತಿದ್ದಾರೆ ಅನಿಸುತ್ತಿದೆ. ನಿರ್ಮಾಪಕ ಸಂಘದ ಪದಾಧಿಕಾರಿಗಳ ಜೊತೆ ಮಾತನಾಡಿದ್ದೇನೆ. ಅನಿರುದ್ಧ ಪರ ನಿಂತಿದ್ದಾರೆ ಎಂದು ಅವರಿಗೆ ಮುಜುಗರವಾಗಿದೆ. ನಾನು ನೋಡಿದ ಹಾಗೆ ನಟ ಅನಿರುದ್ಧ್ ಸರಳ ಸಜ್ಜನಿಕೆಯ ಮನುಷ್ಯ. ನಿರ್ಮಾಪಕರ ಸಂಘ ಬಾರದಿರುವ ಕಾರಣ ಸಂಧಾನ ವಿಫಲವಾಗಿದೆ ಎಂದರು.
ಅಂದಹಾಗೇ ನಟ ಅನಿರುದ್ಧ್ ಅವರನ್ನು ನಿರ್ಮಾಪಕರ ಸಂಘವು ಕಿರುತೆರೆಯ ಚಿತ್ರೀಕರಣದಿಂದ ದೂರ ಇಟ್ಟಿರುವುದಾಗಿ ಹೇಳಲಾಗುತ್ತಿತ್ತು. ಈ ಕಾರಣದಿಂದಲೇ ಜೊತೆ ಜೊತೆಯಲಿ ಸೀರಿಯಲ್ ನಿಂದ ಅವರನ್ನು ಹೊರ ಕಳುಹಿಸಲಾಗಿತ್ತು ಎಂದು ಹೇಳಲಾಗುತ್ತಿತ್ತು. ಇದೀಗ ಅವರ ಪರವಾಗಿ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಬಾ ಮಾ ಹರೀಶ್ ಬ್ಯಾಟ್ ಬೀಸಿ, ಅವರಿಗೆ ಅನ್ಯಾಯವಾಗಲು ಬಿಡುವುದಿಲ್ಲ ಎಂಬುದಾಗಿ ಹೇಳಿದ್ದಾರೆ.