ದಾವಣಗೆರೆ: ಮಹಾರಾಷ್ಟ್ರ- ಕರ್ನಾಟಕ ಗಡಿ ವಿವಾದ ಸುಪ್ರೀಂ ಕೋರ್ಟ್ ನಲ್ಲಿ ಇದೆ. ನ್ಯಾಯಾಲಯದಲ್ಲಿ ನಮ್ಮ ಪರವಾಗಿಯೇ ತೀರ್ಪು ಬರುವಂತ ವಿಶ್ವಾಸವಿದೆ. ನಾವು ರಾಜ್ಯದ ಒಂದಿಂಚೂ ಭೂಮಿಯನ್ನು ಮಹಾರಾಷ್ಟ್ರಕ್ಕೆ ಬಿಟ್ಟುಕೊಡುವುದಿಲ್ಲ ಎಂಬುದಾಗಿ ಸಿಎಂ ಬಸವರಾಜ ಬೊಮ್ಮಾಯಿ ( CM Basavaraj Bommai ) ಹೇಳಿದ್ದಾರೆ.
Job Alert : ವಿದೇಶದಲ್ಲಿ ಉದ್ಯೋಗವಕಾಶ : ಅರ್ಹ ಅಭ್ಯರ್ಥಿಗಳಿಂದ ನೊಂದಣಿಗೆ ಆಹ್ವಾನ
ಇಂದು ದಾವಣಗೆರೆಯಲ್ಲಿ ಬೆಳಗಾವಿ ಗಡಿ ( Belagavin Border ) ವಿಚಾರವಾಗಿ ಮಾತನಾಡಿದ ಅವರು, ಈಗ ನಮ್ಮ ಮುಂದೆ ಇರುವಂತದ್ದು ಆರ್ಟಿಕಲ್ 3 ಆದಮೇಲೆ ಮಹಾರಾಷ್ಟ್ರದಿಂದ ಯಾವೆಲ್ಲಾ ಧಾವೆಯನ್ನು ಹೂಡಿದ್ದಾರೆ. ಅದಕ್ಕೆ ಯಾವುದೇ ಮನ್ನಣೆಯಿಲ್ಲ ಎಂಬುದಾಗಿ ನ್ಯಾಯಾಲಯದ ಮುಂದೆ ವಾದ ಮಂಡಿಸೋದಾಗಿದೆ. ಇದಕ್ಕಾಗಿ ಮುಕುಲ್ ರೋಹಟಗಿ, ಉದಯ್ ಹೊಳ್ಳ ಮೂಲಕ ಬಹಳ ಗಂಭೀರವಾದ ಪ್ರಯತ್ನ ಮಾಡಲಾಗುತ್ತಿದೆ ಎಂದರು.
BIG BREAKING NEWS: ಬಾಲಿವುಡ್ ಹಿರಿಯ ನಟ ವಿಕ್ರಮ್ ಗೋಖಲೆ ವಿಧಿವಶ | Actor Vikram Gokhale No More
ನಮಗೆ ವಿಶ್ವಾಸವಿದೆ ಆ ಕೇಸ್ ನಲ್ಲಿ ಸಂವಿಧಾನ, ಕಾನೂನಬದ್ಧವಾಗಿ ಇದ್ದೇವೆ. ಕರ್ನಾಟಕದ ಯಾವುದೇ ಪ್ರದೇಶ ಈಗ ಏನಿದೆಯೋ ಅದ್ಯಾವುದೂ ಬದಲಾವಣೆ ಆಗುವುದಿಲ್ಲ ಎಂಬುದಾಗಿ ಸಂಪೂರ್ಣವಾಗಿ ವಿಶ್ವಾಸವಿದೆ. ಕಾನೂನಾತ್ಮಕವಾಗಿಯೂ ವಿಶ್ವಾಸವಿದೆ ಎಂದು ಹೇಳಿದರು.
Google Search: ವಿವಾಹಿತ ಮಹಿಳೆಯರು ಗೂಗಲ್ನಲ್ಲಿ ಏನು ಸರ್ಚ್ ಮಾಡ್ತಾರೆ ಗೊತ್ತೇ? ಇಲ್ಲಿದೆ ಮಾಹಿತಿ
ಗಡಿ ವಿಚಾರವಾಗಿ ರಾಜ್ಯ ಸರ್ಕಾರದಿಂದ ಸುಪ್ರೀಂ ಕೋರ್ಟ್ ನ ನಿವೃತ್ತ ನ್ಯಾಯಮೂರ್ತಿ ಶಿವರಾಜ್ ಪಾಟೀಲ್ ಅವರನ್ನು ಕರ್ನಾಟಕ ಗಡಿ ಮತ್ತು ನದಿಗಳ ರಕ್ಷಣಾ ಆಯೋಗದ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ಬೇರೆ ಬೇರೆ ವಿಚಾರಗಳಾಗಿ ಸುಪ್ರೀಂ ಕೋರ್ಟ್ ನಲ್ಲಿ ಚರ್ಚೆಯಾಗಲಿದೆ. ಮುಂದಿನ ವಾರದ ಸರ್ವಪಕ್ಷದ ಸಭೆಯನ್ನು ಕರೆದಿದ್ದೇನೆ. ಆ ಸಭೆಯಲ್ಲಿಯೂ ಎಲ್ಲಾ ಚರ್ಚೆ ನಡೆಸಲಾಗುತ್ತದೆ ಎಂದರು.
BIGG NEWS: ಮಂಡ್ಯದಲ್ಲಿ ಕಮಲ ಅರಳಿಸಲು ಸಖತ್ ಪ್ಲ್ಯಾನ್ ; ಸುಮಲತಾ ಅಂಬರೀಶ್ ಆಪ್ತ ಸಚ್ಚಿದಾನಂದ ಬಿಜೆಪಿಗೆ
ಶರದ್ ಪವಾರ್ ಅವರು, ರಾಜಕೀಯವನ್ನು ಇದರ ಮೇಲೆ ಮಾಡಿಕೊಂಡು ಬಂದಿದ್ದಾರೆ. ಬೆಳಗಾಂ ಕನಸು ಇವತ್ತಿನದಲ್ಲ, ಹಳೆಯದು. ಅವರ ಕನಸು ನನಸಾಗುವುದಿಲ್ಲ ಎಂಬುದಾಗಿ ಆ ಹಿರಿಯರಿಗೆ ಹೇಳುತ್ತೇನೆ ಎಂದು ತಿಳಿಸಿದರು.