ನವದೆಹಲಿ: ಗೀತರಚನೆಕಾರ ಜಾವೇದ್ ಅಖ್ತರ್ ತಮ್ಮ ಹಾಡುಗಳು ಮತ್ತು ಗಜಲ್ ಗಳಿಗೆ ಹೆಸರುವಾಸಿಯಾಗಿದ್ದಾರೆ. ಇದರ ಹೊರಾತಗಿ ಕೂಡ ಅವರು ಅನೇಕ ಸಾಮಾಜಿಕ ವಿಷಯಗಳ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುವುದನ್ನು ಕಾಣಬಹುದಾಗಿದ್ದು, ಕೆಲವು ಹೇಳಿಕೆಗಳು ವಿವಾದವನ್ನು ನಿರ್ಮಾಣ ಮಾಡಿದೆ ಕೂಡ.
ಈ ನಡುವೆ ಜಾವೇದ್ ಅಖ್ತರ್ ಅವರ ‘ಜದುನಾಮಾ’ ಪುಸ್ತಕ ಇತ್ತೀಚೆಗೆ ಬಿಡುಗಡೆಯಾಗಿದೆ. ಜಾದೂ ಎಂಬುದು ಜಾವೇದ್ ಅಖ್ತರ್ ಅವರ ಬಾಲ್ಯದ ಹೆಸರು ಆಗಿದೆ. ಪ್ರಕಟವಾದ ಸಂದರ್ಭದಲ್ಲಿ ನೀಡಿದ ಸಂದರ್ಶನದಲ್ಲಿ ಜಾವೇದ್ ಅಖ್ತರ್ ‘ಮುಸ್ಲಿಂ ವೈಯಕ್ತಿಕ ಕಾನೂನು’ ಕುರಿತು ಮಾತನಾಡಿದ್ದಾರೆ.
ಜಾವೇದ್ ಅಖ್ತರ್ ಮುಸ್ಲಿಂ ವೈಯಕ್ತಿಕ ಕಾನೂನು ತಪ್ಪು ಎಂದು ಹೇಳಿದ್ದು, “ಮುಸ್ಲಿಂ ಗಂಡಂದಿರಿಗೆ ನಾಲ್ವರನ್ನು ಮದುವೆಯಾಗುವ ಹಕ್ಕಿದ್ದರೆ, ಮಹಿಳೆಯರು ಒಂದೇ ಸಮಯದಲ್ಲಿ ಒಂದಕ್ಕಿಂತ ಹೆಚ್ಚು ಗಂಡಂದಿರನ್ನು ಹೊಂದುವ ಹಕ್ಕನ್ನು ಹೊಂದಿರಬೇಕು. ಗಂಡನಿಗೆ ಒಂದಕ್ಕಿಂತ ಹೆಚ್ಚು ಹೆಂಡತಿಯರಿದ್ದಾರೆ ಎಂಬ ಒಂದೇ ಕಾರಣಕ್ಕೆ ಪುರುಷರು ಮತ್ತು ಮಹಿಳೆಯರ ನಡುವೆ ಸಮಾನತೆ ಇಲ್ಲ. ಒಂದಕ್ಕಿಂತ ಹೆಚ್ಚು ಬಾರಿ ಮದುವೆಯಾಗುವುದು ದೇಶದ ಕಾನೂನುಗಳು ಮತ್ತು ಸಂವಿಧಾನದ ನಿಯಮಗಳಿಗೆ ವಿರುದ್ಧವಾಗಿದೆ ಅಂತ ಹೇಳಿದ್ದಾರೆ.
ಈ ವಸ್ತುವನ್ನು ಸ್ನಾನದ ನೀರಿನಲ್ಲಿ ಮಿಶ್ರಣ ಮಾಡಿ, ಎಲ್ಲಾ ಸಮಸ್ಯೆಗಳು ನಿವಾರಣೆಯಾಗುತ್ತವೆ