ದಾವಣಗೆರೆ: ಮುಂಬರುವಂತ ವಿಧಾನಸಭಾ ಚುನಾವಣೆಗೆ ( 2023 Election ) ನಿಲ್ಲೋದಕ್ಕೆ, ಕಾಂಗ್ರೆಸ್ ಪಕ್ಷದ ಟಿಕೆಟ್ ಗಾಗಿ ಅರ್ಜಿ ಸಲ್ಲಿಸುತ್ತೇನೆ. ಆದ್ರೇ ಅನಗತ್ಯವಾಗಿ ಕೆಪಿಸಿಸಿಗೆ 2 ಲಕ್ಷ ರೂ ನೀಡುವುದಿಲ್ಲ. ಯಾಕೆ 2 ಲಕ್ಷ ರೂ ನೀಡಬೇಕು ಎಂಬುದಾಗಿ ಮಾಜಿ ಸಚಿವ ಎಸ್ ಎಸ್ ಮಲ್ಲಿಕಾರ್ಜುನ್ ( Former Minister SS Mallikarjun ) ಪ್ರಶ್ನಿಸಿದ್ದಾರೆ.
‘ಅನುದಾನಿತ ಪದವಿ ಕಾಲೇಜು’ಗಳ ‘ಪ್ರಾಂಶುಪಾಲ’ರಿಗೆ ಗುಡ್ ನ್ಯೂಸ್: ಗಳಿಕೆ ರಜೆ ಮಂಜೂರು
ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ನಾನು ಕಾಂಗ್ರೆಸ್ ಪಕ್ಷದ ಟಿಕೆಟ್ ಆಕಾಂಕ್ಷಿಯಾಗಿದ್ದೇನೆ. ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದಿಂದ ಟಿಕೆಟ್ ಗೆ ಅರ್ಜಿ ಸಲ್ಲಿಸುತ್ತೇನೆ. ಆದ್ರೇ 2 ಲಕ್ಷ ರೂಪಾಯಿ ಕೊಡುವುದಿಲ್ಲ ಎಂದರು.
BIG NEWS: ‘KSRTC ನೂತನ ಬಸ್’ಗಳಿಗೆ ಹೆಸರು, ಟ್ಯಾಗ್ ಲೈನ್, ಗ್ರಾಫಿಕ್ಸ್ ನೀಡಿ ‘25 ಸಾವಿರ’ದವರೆಗೆ ಬಹುಮಾನ ಗೆಲ್ಲಿ
ಎರಡು ಲಕ್ಷ ಕೊಡುವ ಬಗ್ಗೆ ನಾಯಕರೊಂದಿಗೆ ಮಾತನಾಡುತ್ತೇನೆ. ನಮ್ಮಂತ ಪ್ರಾಮಾಣಿಕರು ಯಾಕೆ ಕೆಪಿಸಿಸಿಗೆ 2 ಲಕ್ಷ ಕೊಡಬೇಕು ಎಂದು ಪ್ರಶ್ನಿಸಿದರು. ಅಲ್ಲದೇ ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರಿಂದ ಅರ್ಜಿ ಸಲ್ಲಿಸಿಯೇ ಸಲ್ಲಿಸುತ್ತೇನೆ ಎಂದು ತಿಳಿಸಿದರು.
ಶಿವಮೊಗ್ಗ: ನಾಳೆ, ನಾಡಿದ್ದು ಜಿಲ್ಲೆಯ ಈ ಪ್ರದೇಶಗಳಲ್ಲಿ ‘ವಿದ್ಯುತ್ ವ್ಯತ್ಯಯ’ | Power Cut