ಬೆಂಗಳೂರು: ಕೇವಲ ಗುಜರಾತ್ ವಿಧಾನಸಭಾ ಚುನಾವಣೆಯ ಗೆಲುವನ್ನೇ ದೇಶದ ಗೆಲುವು ಎಂಬಂತೆ BJP ನಾಯಕರು ಸಂಭ್ರಮಿಸುತ್ತಿದ್ದಾರೆ. ಆದರೆ ಹಿಮಾಚಲ ಪ್ರದೇಶದಲ್ಲಿ ಅಧಿಕಾರದಲ್ಲಿದ್ದೂ ಹೀನಾಯವಾಗಿ ಸೋತಿರುವುದನ್ನು ಮರೆಮಾಚುತ್ತಿರುವದೇಕೆ? ಕಾಂಗ್ರೆಸ್ ಮುಕ್ತ ಮಾಡುತ್ತೇವೆ ಎಂದ ಬಿಜೆಪಿಯವರು ಹಿಮಾಚಲ ಪ್ರದೇಶದ ಫಲಿತಾಂಶದ ಬಗ್ಗೆ ಯಾಕೆ ಮಾತಾಡುತ್ತಿಲ್ಲ? ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಪ್ರಶ್ನಿಸಿದ್ದಾರೆ.
1
ಕೇವಲ ಗುಜರಾತ್ ವಿಧಾನಸಭಾ ಚುನಾವಣೆಯ ಗೆಲುವನ್ನೇ ದೇಶದ ಗೆಲುವು ಎಂಬಂತೆ BJP ನಾಯಕರು ಸಂಭ್ರಮಿಸುತ್ತಿದ್ದಾರೆ.ಆದರೆ ಹಿಮಾಚಲ ಪ್ರದೇಶದಲ್ಲಿ ಅಧಿಕಾರದಲ್ಲಿದ್ದೂ ಹೀನಾಯವಾಗಿ ಸೋತಿರುವುದನ್ನು ಮರೆಮಾಚುತ್ತಿರುವದೇಕೆ?
ಕಾಂಗ್ರೆಸ್ ಮುಕ್ತ ಮಾಡುತ್ತೇವೆ ಎಂದ ಬಿಜೆಪಿಯವರು ಹಿಮಾಚಲ ಪ್ರದೇಶದ ಫಲಿತಾಂಶದ ಬಗ್ಗೆ ಯಾಕೆ ಮಾತಾಡುತ್ತಿಲ್ಲ?
— Dinesh Gundu Rao/ದಿನೇಶ್ ಗುಂಡೂರಾವ್ (@dineshgrao) December 8, 2022
ಈ ಕುರಿತಂತೆ ಸರಣಿ ಟ್ವಿಟ್ ಮಾಡಿದ್ದು, ಗುಜರಾತ್ ಚುನಾವಣೆಯ ಫಲಿತಾಂಶ ನಿರೀಕ್ಷೀತ. ಪ್ರಧಾನಿ ಮೋದಿ ಗುಜರಾತ್ನವರು. ಗುಜರಾತ್ನಲ್ಲಿ ಸೋತರೆ ತಮಗೆ ಮುಖಭಂಗ ಎನ್ನುವ ಕಾರಣಕ್ಕೆ ಚುನಾವಣಾ ಪೂರ್ವದಲ್ಲಿ ಮೋದಿಯವರು ತಮ್ಮ ತವರು ರಾಜ್ಯಕ್ಕೆ ವಿಪರೀತ ಕೊಡುಗೆ ನೀಡಿದ್ದರು. ಗುಜರಾತ್ನಲ್ಲಿ ಬಿಜೆಪಿ ಗೆಲ್ಲಲು ಇದು ಕೂಡ ಪ್ರಮುಖ ಕಾರಣ. ಜೊತೆಗೆ AAP ಸ್ಪರ್ಧೆಯಿಂದ BJPಗೆ ಅನುಕೂಲವಾಗಿದೆ ಎಂದು ಹೇಳಿದ್ದಾರೆ.
2
ಗುಜರಾತ್ ಚುನಾವಣೆಯ ಫಲಿತಾಂಶ ನಿರೀಕ್ಷೀತ. ಪ್ರಧಾನಿ ಮೋದಿ ಗುಜರಾತ್ನವರು.ಗುಜರಾತ್ನಲ್ಲಿ ಸೋತರೆ ತಮಗೆ ಮುಖಭಂಗ ಎನ್ನುವ ಕಾರಣಕ್ಕೆ ಚುನಾವಣಾ ಪೂರ್ವದಲ್ಲಿ ಮೋದಿಯವರು ತಮ್ಮ ತವರು ರಾಜ್ಯಕ್ಕೆ ವಿಪರೀತ ಕೊಡುಗೆ ನೀಡಿದ್ದರು.
ಗುಜರಾತ್ನಲ್ಲಿ ಬಿಜೆಪಿ ಗೆಲ್ಲಲು ಇದು ಕೂಡ ಪ್ರಮುಖ ಕಾರಣ.
ಜೊತೆಗೆ AAP ಸ್ಪರ್ಧೆಯಿಂದ BJPಗೆ ಅನುಕೂಲವಾಗಿದೆ.— Dinesh Gundu Rao/ದಿನೇಶ್ ಗುಂಡೂರಾವ್ (@dineshgrao) December 8, 2022
ಗುಜರಾತ್ ಚುನಾವಣೆಯ ಫಲಿತಾಂಶ ಕರ್ನಾಟಕದಲ್ಲಿ ನಡೆಯುವ ಚುನಾವಣೆಯ ದಿಕ್ಸೂಚಿ ಎಂದು BJPಯವರ ವಾದ. ಹಾಗಾದರೆ ಹಿಮಾಚಲ ಪ್ರದೇಶದ ಫಲಿತಾಂಶ ದಿಕ್ಸೂಚಿಯಲ್ಲವೇ? ದೆಹಲಿ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಹೀನಾಯವಾಗಿ ಸೋತಿರುವುದು ದಿಕ್ಸೂಚಿಯಲ್ಲವೇ? ಒಡಿಶಾ,ರಾಜಸ್ಥಾನ, ಉ.ಪ್ರದೇಶದಲ್ಲಿ ನಡೆದ ಉಪ ಚುನಾವಣೆಯಲ್ಲಿ BJPಯ ಸೋಲು ದಿಕ್ಸೂಚಿಯಲ್ಲವೇ? ಎಂದು ಪ್ರಶ್ನಿಸಿದ್ದಾರೆ.
3
ಗುಜರಾತ್ ಚುನಾವಣೆಯ ಫಲಿತಾಂಶ ಕರ್ನಾಟಕದಲ್ಲಿ ನಡೆಯುವ ಚುನಾವಣೆಯ ದಿಕ್ಸೂಚಿ ಎಂದು BJPಯವರ ವಾದ. ಹಾಗಾದರೆ ಹಿಮಾಚಲ ಪ್ರದೇಶದ ಫಲಿತಾಂಶ ದಿಕ್ಸೂಚಿಯಲ್ಲವೇ?ದೆಹಲಿ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಹೀನಾಯವಾಗಿ ಸೋತಿರುವುದು ದಿಕ್ಸೂಚಿಯಲ್ಲವೇ?
ಒಡಿಶಾ,ರಾಜಸ್ಥಾನ, ಉ.ಪ್ರದೇಶದಲ್ಲಿ ನಡೆದ ಉಪ ಚುನಾವಣೆಯಲ್ಲಿ BJPಯ ಸೋಲು ದಿಕ್ಸೂಚಿಯಲ್ಲವೇ?
— Dinesh Gundu Rao/ದಿನೇಶ್ ಗುಂಡೂರಾವ್ (@dineshgrao) December 8, 2022
ಗುಜರಾತ್ ಹೊರತುಪಡಿಸಿ BJPಯ ವಿರುದ್ಧ ಜನ ತಿರುಗಿ ಬಿದ್ದಿದ್ದಾರೆ ಎನ್ನುವುದಕ್ಕೆ ಹಿಮಾಚಲ ಪ್ರದೇಶ, ದೆಹಲಿ ಮಹಾನಗರ ಪಾಲಿಕೆ, ಹಾಗೂ ವಿವಿಧ ರಾಜ್ಯಗಳಲ್ಲಿ ನಡೆದ ಉಪ ಚುನಾವಣೆಗಳ ಫಲಿತಾಂಶವೇ ಸಾಕ್ಷಿ. ಆದರೂ ಬಿಜೆಪಿಯವರು ಜಟ್ಟಿ ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎಂಬಂತೆ ಗುಜರಾತ್ ಗೆಲುವೊಂದನ್ನೇ ಸಂಭ್ರಮಿಸುತ್ತಿದ್ದಾರೆ. ಇದೆಂತಾ ವಿಚಿತ್ರ? ಎಂದು ಕೇಳಿದ್ದಾರೆ.
4
ಗುಜರಾತ್ ಹೊರತುಪಡಿಸಿ BJPಯ ವಿರುದ್ಧ ಜನ ತಿರುಗಿ ಬಿದ್ದಿದ್ದಾರೆ ಎನ್ನುವುದಕ್ಕೆ ಹಿಮಾಚಲ ಪ್ರದೇಶ, ದೆಹಲಿ ಮಹಾನಗರ ಪಾಲಿಕೆ, ಹಾಗೂ ವಿವಿಧ ರಾಜ್ಯಗಳಲ್ಲಿ ನಡೆದ ಉಪ ಚುನಾವಣೆಗಳ ಫಲಿತಾಂಶವೇ ಸಾಕ್ಷಿ.ಆದರೂ ಬಿಜೆಪಿಯವರು ಜಟ್ಟಿ ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎಂಬಂತೆ ಗುಜರಾತ್ ಗೆಲುವೊಂದನ್ನೇ ಸಂಭ್ರಮಿಸುತ್ತಿದ್ದಾರೆ.
ಇದೆಂತಾ ವಿಚಿತ್ರ?
— Dinesh Gundu Rao/ದಿನೇಶ್ ಗುಂಡೂರಾವ್ (@dineshgrao) December 8, 2022