ಮೈಸೂರು: ಕಾಂಗ್ರೆಸ್ ನಡೆಸುತ್ತಿರುವ ಭಾರತ್ ಜೋಡೋ ಯಾತ್ರೆ ಬಗ್ಗೆ ಬಿಜೆಪಿ ಟೀಕಿಸುತ್ತಿದ್ದಾರೆ. ಇದಕ್ಕೆ ರಾಜ್ಯ ಬಿಜೆಪಿ ನಾಯಕರಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ತಿರುಗೇಟು ನೀಡಿದ್ದಾರೆ. ನಮ್ಮ ಪಕ್ಷದ ಬಗ್ಗೆ ಅವರಿಗೆ ಯಾಕೆ ಅಷ್ಟೋಂದು ಕಾಳಜಿ.ಮೊದಲು ಬಿಜೆಪಿ ಅವರು ತಮ್ಮ ಪಕ್ಷದ ಜೋಡೋ ಮಾಡಿಕೊಳ್ಳಲಿ ಎಂದು ಕಿಡಿಕಾರಿದ್ದಾರೆ.
BIGG NEWS: ಹಾವೇರಿಯಲ್ಲಿ ನಿಗದಿತ ದಿನಾಂಕದಂದು ಕನ್ನಡ ಸಾಹಿತ್ಯ ಸಮ್ಮೇಳನ ನಡೆಯೋದು ಡೌಟು; ಕಸಾಪ ಅಧ್ಯಕ್ಷರ ಬೇಸರ
ನಗರದಲ್ಲಿ ಮಾತನಾಡಿದ ಅವರು, ನಮ್ಮ ಬಗ್ಗೆ ಬಿಜೆಪಿ ಏಕೆ ಅಷ್ಟು ಕಾಳಜಿ? ಪಾಪ ಮಾಜಿ ಸಚಿವ ಈಶ್ವರಪ್ಪ ಕಣ್ಣೀರು ಹಾಕಿದ್ದಾರೆ. ಮುಖ್ಯಮಂತ್ರಿ , ಗೃಹ ಸಚಿವರು ಸೇರಿ ಯಾರೇ ಅಪಹಾಸ್ಯ ಮಾಡಿದರೂ ಪಾದಯಾತ್ರೆಯು ನದಿಯ ಹರಿವಿನ ರೀತಿಯಲ್ಲಿ ನಿರಾತಂಕವಾಗಿ ಸಾಗಿದೆ. ಮುಂದೆಯೂ ಸಾಗುತ್ತದೆ ಎಂದರು
ಇನ್ನು ಇದೇ ತಿಂಗಳು ಏಳುಕ್ಕೆ ಇಡಿ ಪ್ರಕರಣ ಸಂಬಂಧವಾಗಿ ಹಾಜರಾಗುವಂತೆ ನನಗೆ ಸಮನ್ಸ್ ಜಾರಿಯಾಗಿದೆ. ಸಮಯಾವಕಾಶ ನೀಡುವಂತೆ ನಾನು ಹಾಗೂ ಸುರೇಶ್ ಇಬ್ಬರೂ ಇಡಿಯವರನ್ನು ಕೋರಿಕೊಂಡಿದ್ದೇವೆ ಎಂದು ಹೇಳಿದ್ದಾರೆ.