ಮುನುಗೋಡ್ : ಮುನುಗೋಡ್ನಲ್ಲಿ ಬಿಜೆಪಿಯ ಸೋಲಿನ ನಂತ್ರ ರಾಜ್ಯದಲ್ಲಿ 2023ರ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ತೆಲಂಗಾಣಕ್ಕೆ ಮನವಿ ಮಾಡಿದ ಪ್ರಧಾನಿ ನರೇಂದ್ರ ಮೋದಿ, “ಜನರ ಹೆಮ್ಮೆಯನ್ನ ಎತ್ತಿಹಿಡಿಯುವುದಾಗಿ ಭರವಸೆ ನೀಡಿದರು. ಇನ್ನು ಬೈಯುವುದಾದ್ರೆ ನನ್ನನ್ನ, ಪಕ್ಷವನ್ನ ಬೈಯಿರಿ. ಅದು ಬಿಟ್ಟು ತೆಲಂಗಾಣ ಜನರ ಸುದ್ದಿಗೆ ಬಂದ್ರೆ ಸರಿಯಿರೋಲ್ಲ ಎಂದು ಟಿಆರ್ಎಸ್ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ತೆಲಂಗಾಣದಲ್ಲಿ ಆಡಳಿತಾರೂಢ ಟಿಆರ್ಎಸ್ ಜನರಿಗೆ ದ್ರೋಹ ಬಗೆದಿದೆ ಮತ್ತು ರಾಜ್ಯದ ಎಲ್ಲೆಡೆ ‘ಕಮಲ ಅರಳುತ್ತದೆ’ ಎಂದು ಪ್ರಧಾನಿ ಮೋದಿ ಶನಿವಾರ ಹೇಳಿದ್ದಾರೆ.
“ನಾನು ಬೈಗುಳಗಳಿಗೆ ಒಗ್ಗಿಕೊಂಡಿದ್ದೇನೆ, ನಾನು ಅವುಗಳನ್ನ ಪ್ರತಿದಿನ 2-3 ಕೆಜಿ ಆಹಾರದಂತೆ ಸೇವಿಸುತ್ತೇನೆ. ಅವರು ನನ್ನನ್ನ ನಿಂದಿಸಲಿ, ನಾನು ಪ್ರತಿದಿನ ವಿವಿಧ ರೀತಿಯ ನಿಂದನೆಗಳನ್ನ ಕೇಳುತ್ತೇನೆ. ಆದ್ರೆ, ಅವರು (ರಾಜ್ಯ ಸರ್ಕಾರ) ಈ ರಾಜ್ಯದ ಜನರನ್ನ ಅವಮಾನಿಸಿದ್ರೆ, ಸಹಿಸಲು ಸಾಧ್ಯವಿಲ್ಲ ಎಂದು ರಾಜ್ಯ ಸರ್ಕಾರಕ್ಕೆ” ಎಚ್ಚರಿಸಿದರು. ಇನ್ನು “ಕತ್ತಲು ಹೆಚ್ಚಾದಾಗ, ಆ ಪರಿಸ್ಥಿತಿಯಲ್ಲಿ ಕಮಲ ಅರಳಲು ಪ್ರಾರಂಭಿಸುತ್ತದೆ” ಎಂದರು. ಈ ಮೂಲಕ ರಾಜ್ಯದಲ್ಲಿ ತಮ್ಮ ಪಕ್ಷದ ಏಳಿಗೆಗೆ ಒತ್ತಾಯಿಸಿದರು.
“ತೆಲಂಗಾಣದ ಹೆಸರಿನಲ್ಲಿ ಅಭಿವೃದ್ಧಿ ಹೊಂದಿದವರು, ಮುಂದೆ ಸಾಗಿ, ಅಧಿಕಾರಕ್ಕೆ ಬಂದವರು, ರಾಜ್ಯವನ್ನ ಹಿಂದಕ್ಕೆ ತಳ್ಳಿದ್ದು ದುಃಖದ ಸಂಗತಿ. ತೆಲಂಗಾಣದ ಸರ್ಕಾರ ಮತ್ತು ನಾಯಕರು ಯಾವಾಗಲೂ ರಾಜ್ಯದ ಸಾಮರ್ಥ್ಯ ಮತ್ತು ಅದರ ಜನರ ಪ್ರತಿಭೆಗೆ ಅನ್ಯಾಯ ಮಾಡುತ್ತಾರೆ” ಎಂದು ಅವರು ತೆಲಂಗಾಣದ ಬೇಗಂಪೇಟ್ನಲ್ಲಿ ರ್ಯಾಲಿಯನ್ನುದ್ದೇಶಿಸಿ ಮಾತನಾಡುತ್ತಾ ಹೇಳಿದರು.
BIGG NEWS: ಯೂಟ್ಯೂಬ್, ಮ್ಯೂಸಿಕ್ ಆ್ಯಪ್ಗಳಿಂದ ‘ವರಾಹ ರೂಪಂ..’ ಹಾಡು ಡಿಲೀಟ್
‘ಪ್ರಗತಿ ಪ್ರತಿಮೆ’ ಕಾರ್ಯಕ್ರಮಕ್ಕೆ ಕರ್ಕೊಂಡು ಬಂದು ‘ಕೂಲಿ’ ನೀಡದ ಆರೋಪ : 40 ಕಾರ್ಮಿಕರಿಂದ ದೂರು ದಾಖಲು
BIGG NEWS : 2ನೇ ಅವಧಿಗೆ ಐಸಿಸಿ ಅಧ್ಯಕ್ಷರಾಗಿ ‘ಗ್ರೆಗ್ ಬಾರ್ಕ್ಲೇ’ ಪುನರಾಯ್ಕೆ