ನವದೆಹಲಿ: ಕೆಲ ಸಮಯದವರೆಗೆ ವಾಟ್ಸಾಪ್ ಸರ್ವರ್ ಡೌನ್ ( WhatsApp Server Down ) ಆಗಿತ್ತು. ಹೀಗಾಗಿ ಅನೇಕ ಬಳಕೆದಾರರಿಗೆ ಸಂದೇಶ ರವಾನೆ ಸೇರಿದಂತೆ ವಾಟ್ಸಾಪ್ ಬಳಕೆಯಲ್ಲಿ ತೊಂದರೆ ಉಂಟಾಗಿತ್ತು. ಇದೀಗ ಈ ಸಮಸ್ಯೆ ಸರಿಯಾಗಿದೆ. ಈಗ ಸಂದೇಶ ಕಳುಹಿಸುವುದು ಸೇರಿದಂತೆ ಎಲ್ಲಾ ಕಾರ್ಯವನ್ನು ವಾಟ್ಸಾಪ್ ನಿರ್ವಹಿಸುತ್ತಿದೆ.
ಭಾರತ ಸೇರಿದಂತೆ ಹಲವು ದೇಶಗಳಲ್ಲಿ ವಾಟ್ಸಾಪ್ ( WhatsApp ) ಸರ್ವರ್ ಸಮಸ್ಯೆ ಉಂಟಾಗಿ, ಬಳಕೆದಾರರು ಹೈರಾಣಗುವಂತೆ ಆಗಿತ್ತು. ಈ ಸಮಸ್ಯೆ ಸರಿ ಪಡಿಸೋ ನಿಟ್ಟಿನಲ್ಲಿ ನಮ್ಮ ತಂತ್ರಜ್ಞರ ತಂಡ ನಿರತವಾಗಿದೆ ಎಂಬುದಾಗಿ ಮೆಟಾ ಗ್ರೂಪ್ ನ ಅಧಿಕಾರಿಳು ತಿಳಿಸಿದ್ದರು.
BIG NEWS: ಮುಂದಿನ ವರ್ಷದಿಂದ ವಿಂಡೋಸ್ 7, 8.1 ಗಳಿಗೆ ʻChrome browserʼ ಸಪೋರ್ಟ್ ನಿಲ್ಲಸಲಿದೆ: ʻGoogleʼ ಘೋಷಣೆ
ಅರ್ಧಗಂಟೆಗಳಿಗೂ ಹೆಚ್ಚು ಕಾಲ ವಾಟ್ಸ್ ಆಪ್ ಕಾರ್ಯನಿರ್ವಹಿಸದ ಕಾರಣ, ಬಳಕೆದಾರರು ಸಂದೇಶ, ಪೋಟೋ, ವಾಯ್ಸ್ ನೋಟ್, ವೀಡಿಯೋ ಕಾಲ್, ವೀಡಿಯೋ ಸಂದೇಶವನ್ನು ಕಳುಹಿಸಲು ಒದ್ದಾಡಿ ಹೈರಾಣಾಗಿ ಹೋಗಿದ್ದರು. ಅಲ್ಲದೇ ಸೂರ್ಯಗ್ರಣದ ಇಂದು ವಾಟ್ಸಾಪ್ ಗೂ ಗ್ರಹಣ ಹಿಡಿದಿದೆ ಎಂಬುದಾಗಿ ಸೋಷಿಯಲ್ ಮೀಡಿಯಾಗಳಲ್ಲಿ ವಾಟ್ಸಾಪ್ ಬಗ್ಗೆ ಗೇಲಿ ಮಾಡಿದ್ದರು.
BIGG NEWS : ನವೆಂಬರ್ 2 ನೇ ವಾರದಲ್ಲಿ ರಾಜ್ಯಾದ್ಯಂತ ಕಾಂಗ್ರೆಸ್ `ರಥಯಾತ್ರೆ’ ಆರಂಭ!
ಈ ಎಲ್ಲಾ ತೊಂದರೆಯ ಬಳಿಕ, ಈಗ ಮತ್ತೆ ವಾಟ್ಸಾಪ್ ಮೊದಲಿನಂತೆ ಕಾರ್ಯ ನಿರ್ವಹಿಸೋದಕ್ಕೆ ಆರಂಭಿಸಿದೆ. ಕೆಲ ಸಮಯದವರೆಗೆ ತಾಂತ್ರಿಕ ತೊಂದರೆ, ಸರ್ವರ್ ಡೌನ್ ನಿಂದ ಉಂಟಾಗಿದ್ದಂತ ಸಮಸ್ಯೆಯನ್ನು ಈಗ ಸರಿ ಪಡಿಸಲಾಗಿದ್ದು, ಮೊದಲಿನಂತೆ ವಾಟ್ಸಾಪ್ ಕಾರ್ಯ ನಿರ್ವಹಣೆ ಆರಂಭಗೊಂಡಿರೋದಾಗಿ ಮೆಟಾ ಸಂಸ್ಥೆ ತಿಳಿಸಿದೆ.