ಬೆಂಗಳೂರು: ಕನ್ನಡದ ರ್‍ಯಾಪ್ ಹಾಡುಗಾರ ಚೆಂದನ್ ಶೆಟ್ಟಿ ಹಾಗೂ ಬಿಗ್ ಬಾಸ್ ಸ್ಪರ್ಧಿ ನಿವೇದಿತಾ ದಾಂಪತ್ಯದಲ್ಲಿ ಬಿರುಕು ಬಿಟ್ಟಿದೆ. ಹೀಗಾಗಿಯೇ ಬೆಂಗಳೂರಿನ ಶಾಂತಿನಗರದಲ್ಲಿರುವಂತ ಕೌಟುಂಬಿಕ ನ್ಯಾಯಲಯಕ್ಕೆ ವಿಚ್ಚೇದನಕ್ಕಾಗಿ ಅರ್ಜಿ ಸಲ್ಲಿಸಿದ್ದರು. ಜೂನ್.6ರ ನಿನ್ನೆ ಸಲ್ಲಿಸಿದ್ದಂತ ವಿಚ್ಚೇದನ ಅರ್ಜಿಯ ವಿಚಾರಣೆಯನ್ನು ಇಂದು ವಿಚಾರಣೆ ನಡೆಸಿತು. ಬಳಿಕ ಚೆಂದನ್ ಶೆಟ್ಟಿ ಹಾಗೂ ನಿವೇದಿತಾ ವಿವಾಹ ವಿಚ್ಚೇದನಕ್ಕೆ ಕೋರ್ಟ್ ಅನುಮತಿ ನೀಡಿದೆ. ಹೀಗಾಗಿ 4 ವರ್ಷದ ಚೆಂದನ್ ಶೆಟ್ಟಿ-ನಿವೇದಿತಾ ದಾಂಪತ್ಯ ಜೀವನ ಅಂತ್ಯಗೊಂಡಂತೆ ಆಗಿದೆ.
ತಮ್ಮ ಡೈವೋರ್ಸ್ ಕುರಿತಂತೆ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಸಾಮಾಜಿಕ ಜಾಲತಾಣವಾದ ಇನ್ಸ್ಟಾಗ್ರಾಮ್ ಅಧಿಕೃತ ಖಾತೆಯಲ್ಲಿ ಡೈವೋರ್ಸ್ ಬಗ್ಗೆ ಪೋಸ್ಟ್ ಹಾಕಿ ಖಚಿತಪಡಿಸಿದ್ದಾರೆ. ನಮ್ಮ ದಾಂಪತ್ಯ ಜೀವನವನ್ನು ನಾವು ಕೊನೆಗೊಳಿಸಿದ್ದೇವೆ. ಕಾನೂನು ಬದ್ಧವಾಗಿ ದಾಂಪತ್ಯ ಜೀವನ ಕೊನೆಗೊಳಿಸಿದ್ದೇವೆ.ಪರಸ್ಪರ ಒಪ್ಪಿಗೆಯಿಂದ ದಾಂಪತ್ಯ ಜೀವನವನ್ನು ಕೊನೆಗೊಳಿಸಿದ್ದೇವೆ. ಪ್ರತ್ಯೇಕ ಮಾರ್ಗ ಅನುಸರಿಸಿದರು ಒಬ್ಬರನ್ನೊಬ್ಬರು ಗೌರವಿಸುತ್ತೇವೆ ಎಂದು ಡಿವರ್ಸ್ ಕುರಿತು ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಪೋಸ್ಟ್ ಮಾಡಿದ್ದಾರೆ.
ಜೂನ್.6ರ ನಿನ್ನಯಂದು ಚೆಂದನ್ ಶೆಟ್ಟಿ ಹಾಗೂ ನಿವೇದಿತಾ ವಿವಾಹ ವಿಚ್ಚೇದನಕ್ಕಾಗಿ ಕೌಟುಂಬಿಕ ನ್ಯಾಯಲಯಕ್ಕೆ ಸ್ವ ಇಚ್ಚೆಯಿಂದ ಪರಸ್ಪರ ಒಪ್ಪಿ ಇಬ್ಬರೂ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ಶಾಂತಿನಗರದ ಫ್ಯಾಮಿಲಿ ನ್ಯಾಯಾಲಯದ ನ್ಯಾಯಮೂರ್ತಿಗಳು ನಡೆಸಿದರು. ಇಂದಿನ ವಿಚಾರಣೆಗಾಗಿ ಚೆಂದನ್ ಶೆಟ್ಟಿ ಹಾಗೂ ನಿವೇದಿತಾ ಖುದ್ದು ಕೋರ್ಟ್ ಗೆ ಹಾಜರಾಗಿದ್ದರು. ಇಬ್ಬರು ಪರಸ್ಪರ ನಗು ನಗುತ್ತಲೇ ಕೋರ್ಟ್ ಗೆ ಹಾಜರಾಗಿದ್ದರು.
ಬೆಂಗಳೂರಿನ ಶಾಂತಿನಗರದಲ್ಲಿರುವಂತ 2ನೇ ಹೆಚ್ಚುವರಿ ಕೌಟುಂಬಿಕ ನ್ಯಾಯಾಲಯಕ್ಕೆ ಹಾಜರಾದ ನಂತ್ರ, ನ್ಯಾಯಾಲಯವು ವಿವಾಹ ವಿಚ್ಚೇದನ ಅರ್ಜಿಯ ವಿಚಾರಣೆ ನಡೆಸಿತು. ಯಾವುದೇ ಕಾರಣಕ್ಕೂ ಪರಸ್ಪರ ಜೊತೆಗೆ ಇರೋದಕ್ಕೆ ಚೆಂದನ್ ಶೆಟ್ಟಿ ಹಾಗೂ ನಿವೇದಿತಾ ಒಪ್ಪಲಿಲ್ಲ. ಅಂತಿಮವಾಗಿ ಇಬ್ಬರಿಗೂ ವಿವಾಹ ವಿಚ್ಚೇದನ ನೀಡಿದೆ. ಹೀಗಾಗಿ ಸ್ಯಾಂಡಲ್ ವುಡ್ ರ್ಯಾಪ್ ಹಾಡುಗಾರ ಚೆಂದನ್ ಶೆಟ್ಟಿ ಹಾಗೂ ಬಿಗ್ ಬಾಸ್ ಸ್ಪರ್ಧಿ ನಿವೇದಿತಾ ಗೌಡ ದಾಂಪತ ಜೀವನ ಬೇರೆ ಬೇರೆಯಾದಂತೆ ಆಗಿದೆ.
ಅಂದಹಾಗೇ ಬಿಗ್ ಬಾಸ್ ಸೀಸನ್-5ರಲ್ಲಿ ಪ್ರೀತಿಸಿದ್ದಂತ ಈ ಜೋಡಿ, ಮೈಸೂರಿನ ಯುವ ದಸರಾ ಕಾರ್ಯಕ್ರಮದ ವೇದಿಕೆಯಲ್ಲೇ ಚೆಂದನ್ ಶೆಟ್ಟಿ, ನಿವೇದಿತಾಗೆ ಪ್ರಪೋಸ್ ಮಾಡಿದ್ದರು. ಆ ಬಳಿಕ 2020ರಲ್ಲಿ ಮೈಸೂರಿನಲ್ಲಿ ಚಂದನ್ ಶೆಟ್ಟಿ-ನಿವೇದಿತಾ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಕೇವಲ ನಾಲ್ಕೇ ನಾಲ್ಕು ವರ್ಷಗಳಲ್ಲಿ ಚೆಂದನ್ ಶೆಟ್ಟಿ ಹಾಗೂ ನಿವೇದಿತಾ ದಾಂಪತ್ಯ ಮುರಿದು ಬಿದ್ದಂತೆ ಆಗಿದೆ.
‘ಬಿ.ನಾಗೇಂದ್ರ’ ಸಚಿವ ಸ್ಥಾನಕ್ಕೆ ನೀಡಿದ್ದ ರಾಜೀನಾಮೆ ಅಂಗೀಕಾರ: ‘ರಾಜ್ಯಪಾಲ ಗೆಹ್ಲೋಟ್’ ಗೆಜೆಟ್ ಅಧಿಸೂಚನೆ
ಜು.13ರಂದು ರಾಜ್ಯಾದ್ಯಂತ `ರಾಷ್ಟ್ರೀಯ ಲೋಕ್ ಅದಾಲತ್’: ಈ ಎಲ್ಲಾ ಪ್ರಕರಣಗಳಿಗೆ ಸಿಗಲಿದೆ ತಕ್ಷಣ ಪರಿಹಾರ