ಮುಂಬೈ: ಪ್ರತಿಭಟನೆಯ ಹೆಸರಿನಲ್ಲಿ ರಸ್ತೆ ತಡೆದು ಸಾರ್ವಜನಿಕರಿಗೆ ತೊಂದರೆ ನೀಡುತ್ತಿದ್ದ ಬಿಜೆಪಿ ನಾಯಕರಿಗೆ ಮುಂಬೈನ ಮಹಿಳೆಯೊಬ್ಬರು ಸಾರ್ವಜನಿಕವಾಗಿಯೇ ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ. ಗಂಟೆಗಟ್ಟಲೆ ಸಂಚಾರ ದಟ್ಟಣೆಯಲ್ಲಿ ಸಿಲುಕಿ ಆಕ್ರೋಶಗೊಂಡ ಮಹಿಳೆಯು, ಸ್ಥಳದಲ್ಲಿದ್ದ ಮಹಾರಾಷ್ಟ್ರ ಸಚಿವ ಗಿರೀಶ್ ಮಹಾಜನ್ ಅವರಿಗೆ “ಇಲ್ಲಿಂದ ಮೊದಲು ಹೊರಡಿ” (Get out of here) ಎಂದು ಗದರಿಸಿದ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ.
ಮಹಿಳಾ ಮೀಸಲಾತಿ ಮಸೂದೆ ಲೋಕಸಭೆಯಲ್ಲಿ ವಿಫಲವಾದ ಹಿನ್ನೆಲೆಯಲ್ಲಿ ವಿರೋಧ ಪಕ್ಷಗಳ ವಿರುದ್ಧ ಮುಂಬೈನ ವರ್ಲಿ ಭಾಗದಲ್ಲಿ ಬಿಜೆಪಿ ‘ನಾರಿ ಶಕ್ತಿ ವಂದನ್’ ಮೆರವಣಿಗೆ ಹಮ್ಮಿಕೊಂಡಿತ್ತು.
ಈ ಮೆರವಣಿಗೆಯಿಂದಾಗಿ ವರ್ಲಿ ಮತ್ತು ಸುತ್ತಮುತ್ತಲಿನ ರಸ್ತೆಗಳಲ್ಲಿ ಕಿಲೋಮೀಟರ್‌ಗಟ್ಟಲೆ ಸಂಚಾರ ದಟ್ಟಣೆ ಉಂಟಾಗಿತ್ತು. ಶಾಲೆಗೆ ತೆರಳಿದ್ದ ಮಗುವನ್ನು ಕರೆತರಲು ಹೊರಟಿದ್ದ ಮಹಿಳೆಯೊಬ್ಬರು ಈ ಟ್ರಾಫಿಕ್‌ನಲ್ಲಿ ಸಿಲುಕಿ ಹೈರಾಣಾಗಿದ್ದರು.
ಟ್ರಾಫಿಕ್‌ನಿಂದ ಬೇಸತ್ತ ಮಹಿಳೆ ತನ್ನ ವಾಹನದಿಂದ ಕೆಳಗಿಳಿದು ನೇರವಾಗಿ ಸಚಿವ ಗಿರೀಶ್ ಮಹಾಜನ್ ಅವರು ಮಾಧ್ಯಮಗಳೊಂದಿಗೆ ಮಾತನಾಡುತ್ತಿದ್ದ ಜಾಗಕ್ಕೆ ತೆರಳಿ, “ಇಲ್ಲಿ ರಸ್ತೆ ತಡೆಯುವ ಬದಲು ಮೈದಾನಕ್ಕೆ ಹೋಗಿ ಪ್ರತಿಭಟನೆ ಮಾಡಿ. ನೂರಾರು ಜನರು ಇಲ್ಲಿ ಕಾಯುತ್ತಿದ್ದಾರೆ, ನಿಮಗೆ ಅರ್ಥವಾಗುತ್ತಿಲ್ಲವೇ?” ಎಂದು ಕಿಡಿಕಾರಿದರು.
ವೈರಲ್ ಆಗಿರುವ ವಿಡಿಯೋದಲ್ಲಿ ಮಹಿಳೆಯು ಅತ್ಯಂತ ಆಕ್ರೋಶದಿಂದ ಮಾತನಾಡುವುದು ಕಂಡುಬಂದಿದೆ. ಸಚಿವರು ಅವಳನ್ನು ಸಮಾಧಾನಪಡಿಸಲು ಯತ್ನಿಸಿದರೂ, “ನನ್ನ ಜೊತೆ ಮಾತನಾಡಬೇಡಿ, ಮೊದಲು ದಾರಿ ಬಿಡಿ” ಎಂದು ಅವರು ಪೊಲೀಸರು ಮತ್ತು ನಾಯಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಈ ವಿಡಿಯೋವನ್ನು ಹಂಚಿಕೊಂಡಿರುವ ವಿರೋಧ ಪಕ್ಷದ ನಾಯಕರು, ಬಿಜೆಪಿಯ “ಡ್ರಾಮಾ” ದಿಂದ ಸಾಮಾನ್ಯ ಜನರು ಅನುಭವಿಸುತ್ತಿರುವ ಕಷ್ಟಕ್ಕೆ ಇದು ಸಾಕ್ಷಿ ಎಂದು ಟೀಕಿಸಿದ್ದಾರೆ. ಕಾಂಗ್ರೆಸ್ ನಾಯಕರು ಮಹಿಳೆಯ ಧೈರ್ಯವನ್ನು ಶ್ಲಾಘಿಸಿದ್ದು, “ಜನಸಾಮಾನ್ಯರ ಆಕ್ರೋಶಕ್ಕೆ ಈ ಘಟನೆ ಕನ್ನಡಿ ಹಿಡಿದಿದೆ” ಎಂದು ಹೇಳಿದ್ದಾರೆ.
”ಸಾಮಾನ್ಯ ಜನರ ಸಮಯಕ್ಕೆ ಬೆಲೆಯಿಲ್ಲವೇ? ಪ್ರತಿಭಟನೆ ಮಾಡಲು ಮೈದಾನಗಳಿಲ್ಲವೇ?” ಎಂದು ಮಹಿಳೆ ಪ್ರಶ್ನಿಸಿರುವುದು ಈಗ ಮುಂಬೈ ಜನರ ಮೆಚ್ಚುಗೆಗೆ ಪಾತ್ರವಾಗಿದೆ.
A woman brutally takes the BJP MLA to task for blocking road and protesting
“Get the Hell out of here,Did you not understand, there’s a whole empty ground there, go there and protest”
This is how everyone should treat these sanghi NETAs.
Peak Satisfaction 😂😂 pic.twitter.com/fPwBnoDzVF
— Nehr_who? (@Nher_who) April 21, 2026








