ಮಧ್ಯಪ್ರದೇಶ: ಮಧ್ಯಪ್ರದೇಶದ ಜಬಲ್ಪುರದ ದೇವಸ್ಥಾನವೊಂದರಲ್ಲಿ ಕಳ್ಳತನವಾಗಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಸುಖ ಗ್ರಾಮದ ದೇವಸ್ಥಾನದ ಒಳಗೆ ಅಳವಡಿಸಲಾಗಿರುವ ಸಿಸಿಟಿವಿಯಲ್ಲಿ ಕಳ್ಳತನದ ದೃಶ್ಯ ಸೆರೆಯಾಗಿದೆ.
ವಿಡಿಯೋದಲ್ಲಿ, ಕಳ್ಳನು ಒಳಗಿನ ಗರ್ಭಗುಡಿಗೆ ಪ್ರವೇಶಿಸಿ ಅಪರಾಧ ಮಾಡುವ ಮೊದಲು ಅಲ್ಲಿದ್ದ ದೇವಿಯ ಪ್ರತಿಮೆಗೆ ನಮಸ್ಕರಿಸುತ್ತಿರುವುದನ್ನು ನೋಡಬಹುದು. ಕಳ್ಳನ ಆಸಕ್ತಿದಾಯಕ ಗೆಸ್ಚರ್ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
मां मुझे माफ़ करना…चोर की भक्ति…पहले मांगी माफी और फिर चुराई दानपेटी…घटना जबलपुर की है@ABPNews @brajeshabpnews@AshishSinghLIVE @prakashnaraya18 @iampulkitmittal pic.twitter.com/XReJ2xK1p3
— Ajay Tripathi (ABP NEWS) (@ajay_media) August 8, 2022
ಆಗಸ್ಟ್ 5 ರಂದು ಈ ಘಟನೆ ನಡೆದಿದ್ದು, ಕಳ್ಳನನ್ನು ಹಿಡಿಯಲು ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ವಿಶ್ಲೇಷಿಸುತ್ತಿದ್ದಾರೆ.
ಪೊಲೀಸರ ಪ್ರಕಾರ, ಕಳ್ಳನು ಎರಡು ದೊಡ್ಡ ದೇವಾಲಯದ ಗಂಟೆಗಳನ್ನು ಮತ್ತು ಸ್ಥಳೀಯರು ದೇವಿಗೆ ಅರ್ಪಿಸಿದ ನೈವೇದ್ಯವನ್ನು ಕದ್ದಿದ್ದಾನೆ.
ಆಶ್ಚರ್ಯವಾದ್ರೂ ಇದು ಸತ್ಯ: ಬಿಹಾರದ ಮಾರುಕಟ್ಟೆಯೊಂದರಲ್ಲಿ ʻವರʼರ ಮಾರಾಟ: ಇಲ್ಲಿ ಹುಡುಗಿಯರದ್ದೇ ಸೆಲೆಕ್ಷನ್!