ಕೆಎನ್ಎನ್ಡಿಜಿಟಲ್ ಡೆಸ್ಕ್ : ಇತ್ತೀಚಿನ ದಿನಗಳಲ್ಲಿ ಅಂತರ್ಜಾಲದಲ್ಲಿ ಹಲವು ರೀತಿಯ ವಿಡಿಯೋಗಳು ವೈರಲ್ ಆಗುತ್ತಿರುವುದು ಕಂಡು ಬರುತ್ತಿದೆ. ಇವುಗಳಲ್ಲಿ ಹೆಚ್ಚಿನವು ನೃತ್ಯ ವೀಡಿಯೋಗಳನ್ನ ಹೊಂದಿವೆ. ಈ ದಿನಗಳಲ್ಲಿ ಕಂಟೆಂಟ್ ಕ್ರಿಯೇಟರ್ಗಳು ಸಾಮಾಜಿಕ ಮಾಧ್ಯಮದಲ್ಲಿ ಟ್ರೆಂಡಿಂಗ್ ಹಾಡುಗಳಿಗೆ ಡ್ಯಾನ್ಸ್ ಮಾಡುತ್ತಿದ್ದಾರೆ. ಏತನ್ಮಧ್ಯೆ, ಅಜ್ಜ ಮತ್ತು ಮೊಮ್ಮಗನ ಜೋಡಿ ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿದ್ದು, ಇದನ್ನ ನೆಟ್ಟಿಗರು ಮೆಚ್ಚಿಕೊಂಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವೀಡಿಯೋದಲ್ಲಿ ಪುಟ್ಟ ಮಗುವೊಂದು ಅಜ್ಜನ ಕೈ ಮೇಲೆ ನಿಂತು ಡ್ಯಾನ್ಸ್ ಮಾಡ್ತಿರುವುದು ಕಂಡು ಬಂದಿದೆ. ಇದನ್ನ ನೋಡಿದ್ರೆ, ಅಜ್ಜ ಮತ್ತು ಮೊಮ್ಮಗ ಒಟ್ಟಿಗೆ ಕೆಲವು ರೀತಿಯ ಸಾಹಸವನ್ನ ಮಾಡಲು ಹೊರಟಿದ್ದಾರೆ ಎಂದು ಊಹಿಸಬೋದು. ಇನ್ನು ವಿಡಿಯೋ ಮುಂದೆ ಸಾಗುತ್ತಿರುವಾಗ ಮೊಮ್ಮಗ ಅಂಗೈಯ ಮೇಲೆ ನಿಂತು ಒಂದೇ ಕಾಲಿನಿಂದ ಡ್ಯಾನ್ಸ್ ಮಾಡುತ್ತಿರುವುದು ಕಂಡು ಬಂದಿದೆ.
ಅಜ್ಜನ ಅಂಗೈಯ ಮೇಲೆ ನಿಂತು ನೃತ್ಯ .!
ಈ ವೀಡಿಯೊವನ್ನ ಅನೇಕ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಹಂಚಿಕೊಳ್ಳಲಾಗಿದೆ. ಈ ವೀಡಿಯೊದಲ್ಲಿ, ಅಜ್ಜನೊಬ್ಬ ತನ್ನ ಮೊಮ್ಮಗನನ್ನ ಅಂಗೈಯಲ್ಲಿ ನಿಲ್ಲಿಸಿಕೊಂಡಿರೋದನ್ನ ಕಾಣಬಹುದು. ಈ ಸಮಯದಲ್ಲಿ, ಪುಟಾಣ ಮೊಮ್ಮಗ ತನ್ನ ಕೈಗಳನ್ನ ಬೀಸುತ್ತಾ ನೃತ್ಯ ಮಾಡಲು ಪ್ರಾರಂಭಿಸುತ್ತಾನೆ. ಈ ವೀಡಿಯೊ ವೈರಲ್ ಆಗುತ್ತಿರುವುದನ್ನು ನೋಡಿ, ನೆಟ್ಟಗರು ಖುಷಿ ವ್ಯಕ್ತ ಪಡಿಸುತ್ತಿದ್ದಾರೆ.
दादा और पोते की जोड़ी मचा रही धमाल…#TrendingNow #Trending #ViralVideos pic.twitter.com/bzHjigqgcL
— Narendra Singh (@NarendraNeer007) November 23, 2022
BIGG NEWS : ‘ಅಂತಾರಾಷ್ಟ್ರೀಯ ಮತ್ತು ಗಡಿಯಾಚೆಗಿನ ಭಯೋತ್ಪಾದನೆ ದೊಡ್ಡ ಬೆದರಿಕೆ’: ಸಚಿವ ರಾಜನಾಥ್ ಸಿಂಗ್
Tears Fact: ಅತ್ತಾಗ ಕಣ್ಣುಗಳಲ್ಲಿ ನೀರು ಏಕೆ ಬರುತ್ತೆ ? ಕಣ್ಣೀರಿನ ಹಿಂದಿನ ವಿಜ್ಞಾನ ಗೊತ್ತಾ? ಇಲ್ಲಿದೆ ಮಾಹಿತಿ
BREAKING NEWS : ವೈಶಾಲಿಯಲ್ಲಿ ‘ಪೆಟ್ರೋಲ್ ಟ್ಯಾಂಕರ್’ ಸ್ಪೋಟ ; ಮೂವರ ದಾರುಣ ಸಾವು, ಹಲವರಿಗೆ ಗಾಯ