ವಿಜಯಪುರ: ಮಹಾನಗರ ಪಾಲಿಕೆ ಚುನಾವಣೆಯಲ್ಲಿ ( Vijayapura Municipal Corporation elections ) ಬಿಜೆಪಿಗೆ ( BJP ) ಸೆಡ್ಡು ಹೊಡೆದು, ಬಂಡಾಯವೆದ್ದಂತ ನಾಯಕರಿಗೆ, ಬಿಜೆಪಿ 14 ಮಂದಿಯನ್ನು ಉಚ್ಚಾಟನೆ ಮಾಡಿ ಬಿಗ್ ಶಾಕ್ ನೀಡಿದೆ. ಮಾಜಿ ಸಚಿವ ಕೆಎಸ್ ಈಶ್ವರಪ್ಪ ( Farmer Minister KS Eshwarappa ) ಆಪ್ತ ಸೇರಿದಂತೆ 14 ಜನರನ್ನು ಉಚ್ಚಾಟಿಸಿದೆ.
ಈ ಕುರಿತಂತೆ ವಿಜಯಪುರ ಜಿಲ್ಲಾ ಬಿಜೆಪಿ ಅಧ್ಯಕ್ಷ ಆದೇಶ ಹೊರಡಿಸಿದ್ದು, ಪಕ್ಷದ ನಿರ್ಧಾರಗಳನ್ನು ಧಿಕ್ಕರಿಸಿ, ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿರುವ 14 ಕಾರ್ಯಕರ್ತರನ್ನು ಮುಂದಿನ ಆರು ವರ್ಷಗಳ ಅವಧಿಗೆ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಉಚ್ಚಾಟಿಸಲಾಗಿದೆ. ಇದು ಈಗನಿಂದಲೇ ಜಾರಿಗೆ ಬರುವಂತೆ ಕ್ರಮ ಕೈಗೊಳ್ಳಲಾಗಿದೆ ಎಂದಿದ್ದಾರೆ.
‘ಕುಕ್ಕೆ ಸುಬ್ರಹ್ಮಣ್ಯ’ಕ್ಕೆ ತೆರಳುವ ಭಕ್ತರ ಗಮನಕ್ಕೆ: ಅ.25ರಂದು ಯಾವುದೇ ಸೇವೆಯಿಲ್ಲ, ದೇವರ ದರ್ಶನಕ್ಕೆ ಮಾತ್ರ ಅವಕಾಶ
ಹೀಗಿದೆ ಉಚ್ಚಾಟಿತ ಬಿಜೆಪಿ ಕಾರ್ಯಕರ್ತರ ವಿವರ
- ಭಾರತಿ ಭುಯ್ಯಾರೆ – ಮಹಿಳಾ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ
- ಅಲ್ತಫ್ ಹಮೀದಸಾಬ ಇಟಗಿ, ನಗರಮಂಡಲದ ಅಲ್ಪಸಖ್ಯಾತರ ಮೋರ್ಚಾ ಅಧ್ಯಕ್ಷ
- ಬಾಬು ವೇಣು ವಾಧನ, ಜಿಲ್ಲಾ ಉಪಾಧ್ಯಕ್ಷರು, ಪ.ಜಿ ಮೋರ್ಚಾ
- ಬಾಬು ಶಿರಸ್ಯಾಡ – ಜಿಲ್ಲಾ ಭಾಜಪ ವಿಶೇಷ ಆಹ್ವಾನಿತರು
- ಅಶೋಕ ನ್ಯಾಮಗೊಂಡ, ಸಂಚಾಲಕರು, ಸಹಕಾರಿ ಪ್ರಕೋಷ್ಠ ನಗರ ಮಂಡಲ
- ಚೆನ್ನಪ್ಪ ಚಿನಗುಂಡಿ, ಉಪಾಧ್ಯಕ್ಷರು, ನಗರ ಹಿಂದುಳಿದ ವರ್ಗಗಳ ಮೋರ್ಚಾ
- ಬಸವರಾಜ ಗೊಳಸಂಗಿ, ಕಾರ್ಯದರ್ಶಿಗಳು, ನಗರ ಮಂಡಲ
- ಅಭಿಷೇಕ ಸಾವಂತ, ಎಸ್.ಟಿ ಮೋರ್ಚಾ, ನಗರ ಮಂಡಲ ಅಧ್ಯಕ್ಷ
- ಬಾಬು ಎಳಗಂಟಿ, ಸಂಚಾಲಕರು, ಕೈಗಾರಿಕಾ ಪ್ರಕೋಷ್ಟ, ನಗರಮಂಡಲ
- ರವಿ ಬಗಲಿ, ಕಾರ್ಯದರ್ಶಿಗಳು, ರಾಜ್ಯ ರೈತ ಮೋರ್ಚಾ
- ಬಸಪ್ಪ ಸಿದ್ದಪ್ಪ ಹಳ್ಳಿ, ಬಿಜೆಪಿ ಕಾರ್ಯಕರ್ತರು
- ಸವಿತಾ ಪಾಟೀಲ, ಬಿಜೆಪಿ ಕಾರ್ಯಕರ್ತರು
- ಸಂಗೀತಾ ಪೋಳ, ಮಾಜಿ ಮಹಾಪೌರರು
- ರಾಜು ಬಿರದಾರ, ಜಿಲ್ಲಾ ಸಂಚಾಲಕರು, ಗ್ರಾಮೀಣ ಪಂಚಾಯತ್ ರಾಜ್ ಪ್ರಕೋಷ್ಟ
ಅಂದಹಾಗೇ ವಿಜಯಪುರ ಜಿಲ್ಲಾ ಪಂಚಾಯ್ತಿ ಚುನಾವಣೆ ಸಂಬಂಧ ಬಂಡಾಯವೆದ್ದಂತ 14 ಮಂದಿ ಬಿಜೆಪಿ ನಾಯಕರನ್ನು ಉಚ್ಚಾಟಿಸಿದ್ದರಲ್ಲಿ, ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಆಪ್ತ ರಾಜು ಬಿರಾದಾರ, ಮಾಜಿ ಮೇಯರ್ ಸಂಗೀತ ಪೋಳ, ರಾಜ್ಯ ರೈತ ಮೋರ್ಚಾದ ಕಾರ್ಯದರ್ಶಿ ರವಿ ಬಗಲಿ ಕೂಡ ಸೇರಿದ್ದಾರೆ.
‘ನನ್ನ ಬಿಟ್ರೆ ಯಾವನೂ ಮುಖ್ಯಮಂತ್ರಿ ಆಗೋಕೆ ಸಾಧ್ಯವಿಲ್ಲ’ : H.D ಕುಮಾರಸ್ವಾಮಿ ಓಪನ್ ಚಾಲೆಂಜ್