ಮೈಸೂರು: ಟಿಪ್ಪು ಸುಲ್ತಾನ್ ಪ್ರತಿಮೆಯನ್ನು ( Tippu Sultan Statue ) ನವದೆಹಲಿಯ ಸಂಸತ್ ಭವನದ ( Parliament Bhavna ) ಮುಂದೆ ನಿಲ್ಲಿಸುವಂತೆ ಕನ್ನಡ ಚಳುವಳಿ ಪಕ್ಷದ ವಾಟಾಳ್ ನಾಗರಾಜ್ ( Vatal Nagaraj ) ಒತ್ತಾಯಿಸಿದ್ದಾರೆ.
BIG NEWS: 11,000 ಸಿಬ್ಬಂದಿಯನ್ನು ಕಡಿತಗೊಳಿಸಿದ ಫೇಸ್ ಬುಕ್ ಒಡೆತನದ ಮೆಟಾ | Facebook cut staff
ಇಂದು ಮೈಸೂರಿನ ಟಿಪ್ಪು ಹೆಸರು ಬದಲಾಯಿಸಿದಂತ ರೈಲಿಗೆ ಮತ್ತೆ ಮರುನಾಮಕರಣ ಮಾಡಬೇಕೆಂದು ಒತ್ತಾಯಿಸಿ ಏಕಾಂಗಿಯಾಗಿ ಹಾರ್ಡಿಂಗ್ ವೃತ್ತದ ಬಳಿಯಲ್ಲಿ ವಾಟಾಳ್ ನಾಗರಾಜ್ ಪ್ರತಿಭಟನೆ ನಡೆಸಿದರು.
ಈ ವೇಳೆ ಮಾತನಾಡಿದಂತ ಅವರು ಮೈಸೂರಿನಲ್ಲಿ ಟಿಪ್ಪು ಸುಲ್ತಾನ್ ಪ್ರತಿಮೆ ನಿರ್ಮಾಣಕ್ಕೆ ಮುಂದಾಗಿರೋದು ಸಂತೋಷದ ವಿಷಯವಾಗಿದೆ. ನಾವೇ ಮೊದಲ ಬಾರಿಗೆ ಟಿಪ್ಪು ಜಯಂತಿಯನ್ನು ಮೈಸೂರಿನಲ್ಲಿ ಮಾಡಿದವರು ಎಂದರು.
ಬಿಜೆಪಿ ಮತ್ತು ಆರ್ ಎಸ್ ಎಸ್ ನವರು ಟಿಪ್ಪು ಇತಿಹಾಸವನ್ನೇ ತಿರುಚೋ ಕೆಲಸ ಮಾಡುತ್ತಿದೆ. ಟಿಪ್ಪು ಇತಿಹಾಸ ತಿಳಿಬೇಕಾದ್ರೇ ಕನ್ನಂಬಾಡಿ ಕಟ್ಟೆಯ ಪಕ್ಕದಲ್ಲಿ ಒಂದು ಕನ್ನಡಲ್ಲಿ ವಾಕ್ಯವಿದೆ ಅನ್ನು ಓದಿ ಎಂಬುದಾಗಿ ಹೇಳಿದರು.
ಬೆಂಗಳೂರಿನಲ್ಲಿ ಕೆಂಪೇಗೌಡ ಪ್ರತಿಮೆ ನಿರ್ಮಾಣ ಮಾಡಿದಂತೆ ಸಂಸತ್ ಭವನದ ಮುಂದೆ ಟಿಪ್ಪು ಪ್ರತಿಮೆಯನ್ನು ನಿರ್ಮಿಸಬೇಕು ಎಂಬುದಾಗಿ ಇದೇ ವೇಳೆ ಕೇಂದ್ರ, ರಾಜ್ಯ ಸರ್ಕಾರವನ್ನು ಅವರು ಒತ್ತಾಯಿಸಿದರು.