Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

Shocking: ಮತಾಂತರಕ್ಕೆ ಒತ್ತಡ: ವೈಪ್ರೊ ಸಂಸ್ಥೆಯ ಮಾಜಿ ಉದ್ಯೋಗಿಯಿಂದ ಗಂಭೀರ ಆರೋಪ, ಉದ್ಯೋಗಕ್ಕೆ ರಾಜೀನಾಮೆ!

ಜೂನ್ 10ರಂದು ಭಾರತದ ಅತಿ ದೀರ್ಘಕಾಲದ ಚುನಾಯಿತ ಪ್ರಧಾನಿಯಾಗಿ ಮೋದಿ ದಾಖಲೆ | PM Modi

ಸಿಎಂ ಡಿಕೆಶಿ ಮೊದಲ ಕ್ಯಾಬಿನೆಟ್ ಬಿಗ್ ಗಿಫ್ಟ್: ವಿದ್ಯಾರ್ಥಿಗಳಿಗೆ ಫ್ರೀ ಬಸ್ ಪಾಸ್ ಸೇರಿದಂತೆ 6 ಮಹತ್ವದ ಘೋಷಣೆ!

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ‘ಸಾಗರ ನಗರಸಭೆ’ ವಿರುದ್ಧ ಸಿಡಿದೆದ್ದ ‘ವರದ ಕಾಲೋನಿ’ ಜನರು: ಮೂಲಭೂತ ಸೌಕರ್ಯ ಕಲ್ಪಿಸಲು ಒತ್ತಾಯಿಸಿ ಪ್ರತಿಭಟನೆ
KARNATAKA

‘ಸಾಗರ ನಗರಸಭೆ’ ವಿರುದ್ಧ ಸಿಡಿದೆದ್ದ ‘ವರದ ಕಾಲೋನಿ’ ಜನರು: ಮೂಲಭೂತ ಸೌಕರ್ಯ ಕಲ್ಪಿಸಲು ಒತ್ತಾಯಿಸಿ ಪ್ರತಿಭಟನೆ

By ವಸಂತ ಬಿ ಈಶ್ವರಗೆರೆ

ಶಿವಮೊಗ್ಗ: ಜಿಲ್ಲೆಯ ಸಾಗರ ನಗರದ 31ನೇ ವಾರ್ಡ್‌ನ ವರದಾ ಕಾಲೋನಿಯಲ್ಲಿ ಮೂಲಭೂತ ಸೌಕರ್ಯಗಳ ಕೊರತೆಯನ್ನು ಖಂಡಿಸಿ, ಇಂದು ಸ್ಥಳೀಯ ನಾಗರಿಕರು ಬೃಹತ್ ಪ್ರತಿಭಟನೆ ನಡೆಸಿದರು. ರಸ್ತೆ, ನೀರು ಮತ್ತು ವಿದ್ಯುತ್‌ನಂತಹ ಕನಿಷ್ಠ ಸೌಲಭ್ಯಗಳನ್ನು ಒದಗಿಸುವಲ್ಲಿ ನಗರಸಭೆ ವಿಫಲವಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಮಾಜಿ ಅಧ್ಯಕ್ಷರ ಕಿಡಿ

ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಪುರಸಭೆ ಮಾಜಿ ಅಧ್ಯಕ್ಷ ತೀ.ನ.ಶ್ರೀನಿವಾಸ್, “ನಗರಸಭೆ ಅಧಿಕಾರಿಗಳು ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ನಗರದ ಮಧ್ಯಭಾಗಕ್ಕೆ ಮಾತ್ರ ಆದ್ಯತೆ ನೀಡಿ, ಹೊರವಲಯದ ವಾರ್ಡ್‌ಗಳನ್ನು ನಿರ್ಲಕ್ಷಿಸುತ್ತಿರುವುದು ಖಂಡನೀಯ. ಜನಸಂಘಟನೆಯ ಮೂಲಕ ಹೋರಾಟ ನಡೆಸದ ಹೊರತು ಅಧಿಕಾರಿಗಳು ಎಚ್ಚೆತ್ತುಕೊಳ್ಳುವುದಿಲ್ಲ ಎಂದು ಟೀಕಿಸಿದರು. ವರದಾ ಕಾಲೋನಿಯಲ್ಲಿ ಚರಂಡಿ ಹಾಗೂ ಸರಿಯಾದ ರಸ್ತೆ ವ್ಯವಸ್ಥೆ ಇಲ್ಲದೆ ಜನರು ಹೈರಾಣಾಗಿದ್ದಾರೆ ಎಂದು ಅವರು ದೂರಿದರು.

ಐದಾರು ವರ್ಷಗಳ ಬೇಡಿಕೆ ಅತಂತ್ರ

ಸ್ಥಳೀಯ ನಿವಾಸಿ ಗೋಪಾಲಣ್ಣ ಮಾತನಾಡಿ, “ಕಳೆದ ಐದಾರು ವರ್ಷಗಳಿಂದ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸುತ್ತಲೇ ಬಂದಿದ್ದೇವೆ. ಆದರೆ ಪ್ರತಿ ಬಾರಿಯೂ ನಮಗೆ ಬರಿ ಭರವಸೆಗಳೇ ಸಿಗುತ್ತಿವೆ. ಈಗ ಹೋರಾಟದ ಮೂಲಕವೇ ನಮ್ಮ ಹಕ್ಕನ್ನು ಪಡೆದುಕೊಳ್ಳುವ ಅನಿವಾರ್ಯತೆ ಸೃಷ್ಟಿಯಾಗಿದೆ” ಎಂದು ನೋವು ತೋಡಿಕೊಂಡರು.

ನಿವೃತ್ತ ಸೈನಿಕ ಭಾಸ್ಕರ್ ಕಿಡಿಕಿಡಿ

ಕಳೆದ ಹಲವು ವರ್ಷಗಳಿಂದ ವರದ ಕಾಲೋನಿಯಲ್ಲಿ ವಾಸ ಮಾಡುತ್ತಿದ್ದೇನೆ. ರಸ್ತೆ, ಚರಂಡಿಯಂತ ಮೂಲ ಸೌಕರ್ಯಕ್ಕಾಗಿ ನಗರಸಭೆಗೆ ಹಲವಾರು ಬಾರಿ ಮನವಿ ಮಾಡಿ ಪತ್ರವನ್ನು ಸಲ್ಲಿಸಿದ್ದೇನೆ. ಹೀಗಿದ್ದರೂ ಸಮಸ್ಯೆ ಪರಿಹರಿಸಿಲ್ಲ. ನಾವೇ ಚರಂಡಿಯಂತಾಗಿದ್ದಂತ ರಸ್ತೆಗಳನ್ನು ಸರಿ ಪಡಿಸಿಕೊಂಡಿದ್ದೇವೆ. ಮಳೆಗಾಲದಲ್ಲಿ ರಸ್ತೆಯಲ್ಲಿ ಓಡಾಡೋದಕ್ಕೂ ಸಾಧ್ಯವಿಲ್ಲ. ಕೂಡಲೇ ನಗರಸಭೆಯ ಅಧಿಕಾರಿಗಳು ನಮ್ಮ ಸಮಸ್ಯೆಗಳಿಗೆ ಸ್ಪಂದಿಸಿ ಸೂಕ್ತ ಚರಂಡಿ, ರಸ್ತೆ ನಿರ್ಮಾಣ ಮಾಡಬೇಕು ಎಂಬುದಾಗಿ ಒತ್ತಾಯಿಸಿದರು.

ನಗರಸಭೆಗೆ ಜಮೀಲ್ ಸಾಗರ್ ಎಚ್ಚರಿಕೆ

ಪ್ರತಿಭಟನೆ ನೇತೃತ್ವ ವಹಿಸಿದ್ದ ಸಾಮಾಜಿಕ ಕಾರ್ಯಕರ್ತ ಹಾಗೂ ಪತ್ರಕರ್ತ ಜಮೀಲ್ ಸಾಗರ್ ಮಾತನಾಡಿ ನಾವು ನಗರಸಭೆ ವ್ಯಾಪ್ತಿಯಲ್ಲಿದ್ದೇವೋ ಅಥವಾ ಹಳ್ಳಿಯಲ್ಲಿದ್ದೇವೋ ಎಂಬ ಜಿಜ್ಞಾಸೆ ಮೂಡುತ್ತಿದೆ. ಬೀದಿದೀಪ, ಕುಡಿಯುವ ನೀರು ಒದಗಿಸುವುದು ನಗರಸಭೆಯ ಕರ್ತವ್ಯ. ಅಧಿಕಾರಿಗಳ ಹಾರಿಕೆ ಉತ್ತರದಿಂದ ಬೇಸತ್ತ ಜನರು ಇಂದು ಬೀದಿಗೆ ಇಳಿದಿದ್ದಾರೆ. ಕೂಡಲೇ ಸೌಲಭ್ಯ ಕಲ್ಪಿಸದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.

ಪ್ರಮುಖ ಬೇಡಿಕೆಗಳು:

  • ಹದಗೆಟ್ಟಿರುವ ರಸ್ತೆಗಳ ದುರಸ್ತಿ.

  • ಸುಸಜ್ಜಿತ ಚರಂಡಿ ವ್ಯವಸ್ಥೆ ಮತ್ತು ಕುಡಿಯುವ ನೀರಿನ ಪೂರೈಕೆ.

  • ವಾರ್ಡ್‌ನಾದ್ಯಂತ ಬೀದಿದೀಪಗಳ ಅಳವಡಿಕೆ.

  • ನಗರದ ಹೊರವಲಯದ ಬಡಾವಣೆಗಳಿಗೆ ಸಮಾನ ಆದ್ಯತೆ.

ಈ ಪ್ರತಿಭಟನೆಯಲ್ಲಿ ಸಾಮಾಜಿಕ ಕಾರ್ಯಕರ್ತರಾದ ಕುಂಟುಗೋಡು ಸೀತಾರಾಮ್, ಸುಧಾಕರ, ಡ್ಯಾನಿಯಲ್, ಸವಿತಾ ಸೇರಿದಂತೆ ವರದಾ ಕಾಲೋನಿಯ ನೂರಾರು ನಿವಾಸಿಗಳು ಪಾಲ್ಗೊಂಡಿದ್ದರು.

ವರದಿ; ವಸಂತ ಬಿ ಈಶ್ವರಗೆರೆ, ಸಂಪಾದಕರು..

ಸಾಗರದಲ್ಲಿ ಸಿಪಿಐ ಪುಲ್ಲಯ್ಯ ರಾಥೋಡ್ ಕರ್ತವ್ಯಲೋಪ ಖಂಡಿಸಿ ಠಾಣೆ ಎದುರು ಮಲ್ಲಿಕಾರ್ಜುನ ಹಕ್ರೆ ದಿಢೀರ್ ಪ್ರತಿಭಟನೆ, ಆಕ್ರೋಶ

ಸಿನಿಮಾ ಪೈರಸಿಗೆ ಬ್ರೇಕ್: ‘ಜನ ನಾಯಕನ್’ ಚಿತ್ರದ ಅಕ್ರಮ ಪ್ರಸಾರಕ್ಕೆ ಮದ್ರಾಸ್ ಹೈಕೋರ್ಟ್ ತಡೆ!

Share. Facebook Twitter LinkedIn WhatsApp Email

Related Posts

ಸಿಎಂ ಡಿಕೆಶಿ ಮೊದಲ ಕ್ಯಾಬಿನೆಟ್ ಬಿಗ್ ಗಿಫ್ಟ್: ವಿದ್ಯಾರ್ಥಿಗಳಿಗೆ ಫ್ರೀ ಬಸ್ ಪಾಸ್ ಸೇರಿದಂತೆ 6 ಮಹತ್ವದ ಘೋಷಣೆ!

2 Mins Read

BREAKING: ಇಡೀ ರಾಜ್ಯಕ್ಕೆ ರಾಜ್ಯಕ್ಕೆ ಬಿ-ಖಾತಾದಿಂದ ಎ-ಖಾತಾ ಯೋಜನೆ ವಿಸ್ತರಣೆ: ಸಿಎಂ ಡಿ.ಕೆ ಶಿವಕುಮಾರ್ ಘೋಷಣೆ

2 Mins Read

GOOD NEWS: ರಾಜ್ಯದ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಸಿಎಂ ಡಿ.ಕೆ ಶಿವಕುಮಾರ್ ಗುಡ್ ನ್ಯೂಸ್: ಎಲ್ಲರಿಗೂ ಫ್ರಿ ಬಸ್ ಪಾಸ್

2 Mins Read
Recent News

Shocking: ಮತಾಂತರಕ್ಕೆ ಒತ್ತಡ: ವೈಪ್ರೊ ಸಂಸ್ಥೆಯ ಮಾಜಿ ಉದ್ಯೋಗಿಯಿಂದ ಗಂಭೀರ ಆರೋಪ, ಉದ್ಯೋಗಕ್ಕೆ ರಾಜೀನಾಮೆ!

ಜೂನ್ 10ರಂದು ಭಾರತದ ಅತಿ ದೀರ್ಘಕಾಲದ ಚುನಾಯಿತ ಪ್ರಧಾನಿಯಾಗಿ ಮೋದಿ ದಾಖಲೆ | PM Modi

ಸಿಎಂ ಡಿಕೆಶಿ ಮೊದಲ ಕ್ಯಾಬಿನೆಟ್ ಬಿಗ್ ಗಿಫ್ಟ್: ವಿದ್ಯಾರ್ಥಿಗಳಿಗೆ ಫ್ರೀ ಬಸ್ ಪಾಸ್ ಸೇರಿದಂತೆ 6 ಮಹತ್ವದ ಘೋಷಣೆ!

BREAKING: ಇಡೀ ರಾಜ್ಯಕ್ಕೆ ರಾಜ್ಯಕ್ಕೆ ಬಿ-ಖಾತಾದಿಂದ ಎ-ಖಾತಾ ಯೋಜನೆ ವಿಸ್ತರಣೆ: ಸಿಎಂ ಡಿ.ಕೆ ಶಿವಕುಮಾರ್ ಘೋಷಣೆ

State News
KARNATAKA

ಸಿಎಂ ಡಿಕೆಶಿ ಮೊದಲ ಕ್ಯಾಬಿನೆಟ್ ಬಿಗ್ ಗಿಫ್ಟ್: ವಿದ್ಯಾರ್ಥಿಗಳಿಗೆ ಫ್ರೀ ಬಸ್ ಪಾಸ್ ಸೇರಿದಂತೆ 6 ಮಹತ್ವದ ಘೋಷಣೆ!

By ವಸಂತ ಬಿ ಈಶ್ವರಗೆರೆ KARNATAKA 2 Mins Read

ಬೆಂಗಳೂರು: ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಜವಾಬ್ದಾರಿ ವಹಿಸಿಕೊಂಡಿರುವ ಡಿ.ಕೆ. ಶಿವಕುಮಾರ್ ಅವರು ಮೊದಲ ದಿನವೇ ಆಡಳಿತದಲ್ಲಿ ಮುನ್ನುಗ್ಗಿದ್ದಾರೆ. ಇಂದು ನಡೆದ…

BREAKING: ಇಡೀ ರಾಜ್ಯಕ್ಕೆ ರಾಜ್ಯಕ್ಕೆ ಬಿ-ಖಾತಾದಿಂದ ಎ-ಖಾತಾ ಯೋಜನೆ ವಿಸ್ತರಣೆ: ಸಿಎಂ ಡಿ.ಕೆ ಶಿವಕುಮಾರ್ ಘೋಷಣೆ

GOOD NEWS: ರಾಜ್ಯದ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಸಿಎಂ ಡಿ.ಕೆ ಶಿವಕುಮಾರ್ ಗುಡ್ ನ್ಯೂಸ್: ಎಲ್ಲರಿಗೂ ಫ್ರಿ ಬಸ್ ಪಾಸ್

BIG BREAKING: ರಾಜ್ಯದಲ್ಲಿ ‘ಭೂ ಗ್ಯಾರಂಟಿ’ ಘೋಷಿಸಿದ ಸಿಎಂ ಡಿ.ಕೆ ಶಿವಕುಮಾರ್: 3 ಅಂತಸ್ತಿನ ಮನೆಗಳಿಗೆ ಒಸಿ ವಿನಾಯ್ತಿ

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.