Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಪುಣೆಯಲ್ಲಿ ಇಂದು ಕಾಕ್ರೋಚ್ ಜನತಾ ಪಾರ್ಟಿ ಅಭಿಯತ್ ದಿಪ್ಕೆ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ !

ರಾಜ್ಯದ ಶಾಲಾ ಶಿಕ್ಷಕರಿಗೆ ಬಿಡುಗಡೆಯಾಯ್ತು ‘ಕರ್ತವ್ಯ’ ಆ್ಯಪ್‌ : ಇನ್ಮುಂದೆ ಮೊಬೈಲ್‌ ನಲ್ಲೇ `ಡಿಜಿಟಲ್ ಹಾಜರಾತಿ’ ಕಡ್ಡಾಯ!

BIG NEWS : ಸರ್ಕಾರಿ ನೌಕರರಿಗೂ ಇದೆ ‘ಗೌಪ್ಯತೆಯ ಹಕ್ಕು’: ವೈಯಕ್ತಿಕ ಮಾಹಿತಿಗಾಗಿ `RTI’ ಬಳಸುವಂತಿಲ್ಲ : ಹೈಕೋರ್ಟ್ ಮಹತ್ವದ ತೀರ್ಪು

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಸಿಎಂ ಡಿಕೆಶಿ ಮೊದಲ ಕ್ಯಾಬಿನೆಟ್ ಬಿಗ್ ಗಿಫ್ಟ್: ವಿದ್ಯಾರ್ಥಿಗಳಿಗೆ ಫ್ರೀ ಬಸ್ ಪಾಸ್ ಸೇರಿದಂತೆ 6 ಮಹತ್ವದ ಘೋಷಣೆ!
KARNATAKA

ಸಿಎಂ ಡಿಕೆಶಿ ಮೊದಲ ಕ್ಯಾಬಿನೆಟ್ ಬಿಗ್ ಗಿಫ್ಟ್: ವಿದ್ಯಾರ್ಥಿಗಳಿಗೆ ಫ್ರೀ ಬಸ್ ಪಾಸ್ ಸೇರಿದಂತೆ 6 ಮಹತ್ವದ ಘೋಷಣೆ!

By ವಸಂತ ಬಿ ಈಶ್ವರಗೆರೆ

ಬೆಂಗಳೂರು: ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಜವಾಬ್ದಾರಿ ವಹಿಸಿಕೊಂಡಿರುವ ಡಿ.ಕೆ. ಶಿವಕುಮಾರ್ ಅವರು ಮೊದಲ ದಿನವೇ ಆಡಳಿತದಲ್ಲಿ ಮುನ್ನುಗ್ಗಿದ್ದಾರೆ. ಇಂದು ನಡೆದ ತಮ್ಮ ಮೊದಲ ಸಚಿವ ಸಂಪುಟ ಸಭೆಯಲ್ಲಿ ವಿದ್ಯಾರ್ಥಿಗಳು, ನಿರುದ್ಯೋಗಿ ಯುವಕರು ಹಾಗೂ ಆಸ್ತಿ ಮಾಲೀಕರ ಹಿತದೃಷ್ಟಿಯಿಂದ ಅತ್ಯಂತ ಪ್ರಮುಖವಾದ 6 ಮಹತ್ವದ ಘೋಷಣೆಗಳನ್ನು ಮಾಡುವ ಮೂಲಕ ರಾಜ್ಯದ ಜನತೆಗೆ ಬಂಪರ್ ಗಿಫ್ಟ್ ನೀಡಿದ್ದಾರೆ.

ಮುಖ್ಯಮಂತ್ರಿಗಳ ಈ ಐತಿಹಾಸಿಕ ಮೊದಲ ಸಚಿವ ಸಂಪುಟ ಸಭೆಯ ನಿರ್ಧಾರಗಳ ಸಂಪೂರ್ಣ ವಿವರ ಇಲ್ಲಿದೆ:

1. ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್!

ರಾಜ್ಯದ ಬಡ ಹಾಗೂ ಮಧ್ಯಮ ವರ್ಗದ ವಿದ್ಯಾರ್ಥಿಗಳಿಗೆ ನೆರವಾಗುವ ನಿಟ್ಟಿನಲ್ಲಿ ಸರ್ಕಾರ ಅತ್ಯಂತ ಮಹತ್ವದ ನಿರ್ಧಾರ ಕೈಗೊಂಡಿದೆ. ಇನ್ಮುಂದೆ ರಾಜ್ಯದ ಎಲ್ಲಾ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ (Free Bus Pass) ನೀಡಲಾಗುವುದು ಎಂದು ಮುಖ್ಯಮಂತ್ರಿಗಳು ಪ್ರಕಟಿಸಿದ್ದಾರೆ. ಈ ನಿರ್ಧಾರದಿಂದಾಗಿ ಉನ್ನತ ವ್ಯಾಸಂಗಕ್ಕಾಗಿ ಬೇರೆ ಊರುಗಳಿಗೆ ಪ್ರಯಾಣಿಸುವ ಗ್ರಾಮೀಣ ಮತ್ತು ನಗರ ಭಾಗದ ಲಕ್ಷಾಂತರ ವಿದ್ಯಾರ್ಥಿಗಳಿಗೆ ಭಾರಿ ಆರ್ಥಿಕ ಅನುಕೂಲವಾಗಲಿದೆ.

2. ಬಿ-ಖಾತಾದಿಂದ ಎ-ಖಾತಾ ಯೋಜನೆ ಇಡೀ ರಾಜ್ಯಕ್ಕೆ ವಿಸ್ತರಣೆ

ಇದುವರೆಗೆ ಕೇವಲ ರಾಜಧಾನಿ ಬೆಂಗಳೂರಿಗಷ್ಟೇ ಸೀಮಿತವಾಗಿದ್ದ ‘ಬಿ-ಖಾತಾದಿಂದ ಎ-ಖಾತಾ’ ಪರಿವರ್ತನೆ ಮಾಡುವ ಯೋಜನೆಯನ್ನು ಈಗ ಇಡೀ ಕರ್ನಾಟಕ ರಾಜ್ಯಾದ್ಯಂತ ವಿಸ್ತರಿಸುವುದಾಗಿ ಸಿಎಂ ಘೋಷಿಸಿದ್ದಾರೆ. ಈ ಮೂಲಕ ರಾಜ್ಯದ ಎಲ್ಲಾ ನಗರ ಮತ್ತು ಪಟ್ಟಣ ಪ್ರದೇಶಗಳ ಸಾರ್ವಜನಿಕರ ಆಸ್ತಿ ಹಕ್ಕುಗಳ ಸಮಸ್ಯೆಗೆ ಶಾಶ್ವತ ಮುಕ್ತಿ ಸಿಗಲಿದೆ.

3. 2,500 ಚದರ ಅಡಿವರೆಗಿನ ಮನೆಗಳಿಗೆ ಒಸಿ (OC) ವಿನಾಯಿತಿ!

ಸ್ವಂತ ಮನೆ ನಿರ್ಮಿಸುವ ಮಧ್ಯಮ ವರ್ಗದ ಜನರಿಗೆ ಸರ್ಕಾರ ದೊಡ್ಡ ರಿಲೀಫ್ ನೀಡಿದೆ. 2,500 ಚದರ ಅಡಿ ವಿಸ್ತೀರ್ಣದವರೆಗೆ ಕಟ್ಟಡ ನಿರ್ಮಿಸಿ ಅರ್ಜಿ ಹಾಕಿದವರಿಗೆ ಆಕ್ಯುಪೆನ್ಸಿ ಸರ್ಟಿಫಿಕೇಟ್ (OC) ನಿಯಮದಿಂದ ಸಂಪೂರ್ಣ ವಿನಾಯಿತಿ ನೀಡಲಾಗುವುದು ಎಂದು ತಿಳಿಸಲಾಗಿದೆ.

4. ರಸ್ತೆಗಳ ನಿರ್ಮಾಣಕ್ಕೆ 2,000 ಕೋಟಿ ರೂ. ಬಂಪರ್ ಅನುದಾನ

ರಾಜ್ಯದ ಮೂಲಸೌಕರ್ಯ ಹಾಗೂ ಕನೆಕ್ಟಿವಿಟಿಗೆ ಹೆಚ್ಚಿನ ಒತ್ತು ನೀಡಿರುವ ಸಿಎಂ ಡಿ.ಕೆ. ಶಿವಕುಮಾರ್, ರಾಜ್ಯಾದ್ಯಂತ ಅತ್ಯಾಧುನಿಕ ಹಾಗೂ ಸುಸಜ್ಜಿತ ರಸ್ತೆಗಳ ನಿರ್ಮಾಣಕ್ಕಾಗಿ ಭಾರಿ ಮೊತ್ತದ 2,000 ಕೋಟಿ ರೂಪಾಯಿಗಳ ವಿಶೇಷ ಅನುದಾನವನ್ನು ಘೋಷಿಸಿದ್ದಾರೆ.

5. ನಿರುದ್ಯೋಗಿಗಳಿಗೆ ‘ಪ್ರೈವೇಟ್ ಎಂಪ್ಲಾಯ್ಮೆಂಟ್ ಎಕ್ಸ್ಚೇಂಜ್ ಸೆಂಟರ್’

ಉದ್ಯೋಗದ ಸಮಸ್ಯೆ ನಿವಾರಿಸಲು ಮತ್ತು ಖಾಸಗಿ ಸಂಸ್ಥೆಗಳಲ್ಲಿ ಕೆಲಸ ಹುಡುಕುತ್ತಿರುವ ಯುವಜನರಿಗೆ ನೆರವಾಗಲು ಸರ್ಕಾರ ಹೊಸ ತಂತ್ರಜ್ಞಾನ ಆಧಾರಿತ ವ್ಯವಸ್ಥೆ ತರಲಿದೆ. ಇದಕ್ಕಾಗಿ ರಾಜ್ಯಾದ್ಯಂತ ಪ್ರತ್ಯೇಕ ಖಾಸಗಿ ಉದ್ಯೋಗ ವಿನಿಮಯ ಕೇಂದ್ರಗಳನ್ನು (Private Employment Exchange Centre) ಸ್ಥಾಪಿಸಲಾಗುವುದು ಎಂದು ತಿಳಿಸಿದ್ದಾರೆ.

6. ಪ್ರತಿ ಪಂಚಾಯತ್‌ನಲ್ಲೂ ‘ಭಾರತ್ ಜೋಡೋ ಯುವಕ ಸಂಘ’

ರಾಜ್ಯದ ಗ್ರಾಮೀಣ ಭಾಗದ ಯುವಶಕ್ತಿಯನ್ನು ಸಮಾಜಮುಖಿ ಕಾರ್ಯಗಳಲ್ಲಿ ಸಂಘಟಿಸುವ ಸಲುವಾಗಿ, ರಾಜ್ಯದ ಪ್ರತಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲೂ ‘ಭಾರತ್ ಜೋಡೋ ಯುವಕ ಸಂಘ’ಗಳನ್ನು ಸ್ಥಾಪಿಸಲು ನಿರ್ಧರಿಸಲಾಗಿದೆ. ಈ ಯೋಜನೆಗಾಗಿ ಪ್ರತಿ ಪಂಚಾಯತ್‌ಗೆ 10,000 ರೂಪಾಯಿ ಘೋಷಣೆ ಮಾಡಲಾಗಿದೆ.

ಅಧಿಕಾರ ವಹಿಸಿಕೊಂಡ ಮೊದಲ ಸಚಿವ ಸಂಪುಟ ಸಭೆಯಲ್ಲೇ ವಿದ್ಯಾರ್ಥಿಗಳು, ಯುವಕರು ಮತ್ತು ಆಸ್ತಿ ಮಾಲೀಕರ ಸುದೀರ್ಘ ಕಾಲದ ಬೇಡಿಕೆಗಳಿಗೆ ಸ್ಪಂದಿಸುವ ಮೂಲಕ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ನೂತನ ಸರ್ಕಾರವು ಭರವಸೆಯ ಮುನ್ನುಡಿ ಬರೆದಿದೆ.

Share. Facebook Twitter LinkedIn WhatsApp Email

Related Posts

ರಾಜ್ಯದ ಶಾಲಾ ಶಿಕ್ಷಕರಿಗೆ ಬಿಡುಗಡೆಯಾಯ್ತು ‘ಕರ್ತವ್ಯ’ ಆ್ಯಪ್‌ : ಇನ್ಮುಂದೆ ಮೊಬೈಲ್‌ ನಲ್ಲೇ `ಡಿಜಿಟಲ್ ಹಾಜರಾತಿ’ ಕಡ್ಡಾಯ!

1 Min Read

BIG NEWS : ಸರ್ಕಾರಿ ನೌಕರರಿಗೂ ಇದೆ ‘ಗೌಪ್ಯತೆಯ ಹಕ್ಕು’: ವೈಯಕ್ತಿಕ ಮಾಹಿತಿಗಾಗಿ `RTI’ ಬಳಸುವಂತಿಲ್ಲ : ಹೈಕೋರ್ಟ್ ಮಹತ್ವದ ತೀರ್ಪು

1 Min Read

BIG NEWS : ರಾಜ್ಯ ಸರ್ಕಾರದ ಎಲ್ಲಾ ಇಲಾಖೆಗಳಲ್ಲೂ ‘ಇ-ಅಫೀಸ್’ ತಂತ್ರಾಂಶ ಬಳಕೆ ಕಡ್ಡಾಯ : ಸರ್ಕಾರದಿಂದ ಮಹತ್ವದ ಆದೇಶ

1 Min Read
Recent News

ಪುಣೆಯಲ್ಲಿ ಇಂದು ಕಾಕ್ರೋಚ್ ಜನತಾ ಪಾರ್ಟಿ ಅಭಿಯತ್ ದಿಪ್ಕೆ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ !

ರಾಜ್ಯದ ಶಾಲಾ ಶಿಕ್ಷಕರಿಗೆ ಬಿಡುಗಡೆಯಾಯ್ತು ‘ಕರ್ತವ್ಯ’ ಆ್ಯಪ್‌ : ಇನ್ಮುಂದೆ ಮೊಬೈಲ್‌ ನಲ್ಲೇ `ಡಿಜಿಟಲ್ ಹಾಜರಾತಿ’ ಕಡ್ಡಾಯ!

BIG NEWS : ಸರ್ಕಾರಿ ನೌಕರರಿಗೂ ಇದೆ ‘ಗೌಪ್ಯತೆಯ ಹಕ್ಕು’: ವೈಯಕ್ತಿಕ ಮಾಹಿತಿಗಾಗಿ `RTI’ ಬಳಸುವಂತಿಲ್ಲ : ಹೈಕೋರ್ಟ್ ಮಹತ್ವದ ತೀರ್ಪು

BIG NEWS : ರಾಜ್ಯ ಸರ್ಕಾರದ ಎಲ್ಲಾ ಇಲಾಖೆಗಳಲ್ಲೂ ‘ಇ-ಅಫೀಸ್’ ತಂತ್ರಾಂಶ ಬಳಕೆ ಕಡ್ಡಾಯ : ಸರ್ಕಾರದಿಂದ ಮಹತ್ವದ ಆದೇಶ

State News
KARNATAKA

ರಾಜ್ಯದ ಶಾಲಾ ಶಿಕ್ಷಕರಿಗೆ ಬಿಡುಗಡೆಯಾಯ್ತು ‘ಕರ್ತವ್ಯ’ ಆ್ಯಪ್‌ : ಇನ್ಮುಂದೆ ಮೊಬೈಲ್‌ ನಲ್ಲೇ `ಡಿಜಿಟಲ್ ಹಾಜರಾತಿ’ ಕಡ್ಡಾಯ!

By kannadanewsnow57 KARNATAKA 1 Min Read

ಬೆಂಗಳೂರು: ಕರ್ನಾಟಕದ ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆಯು ತನ್ನ ಶಿಕ್ಷಕ ಹಾಗೂ ಶಿಕ್ಷಕೇತರ ಸಿಬ್ಬಂದಿಯ ದೈನಂದಿನ ಹಾಜರಾತಿ ಪ್ರಕ್ರಿಯೆಯನ್ನು…

BIG NEWS : ಸರ್ಕಾರಿ ನೌಕರರಿಗೂ ಇದೆ ‘ಗೌಪ್ಯತೆಯ ಹಕ್ಕು’: ವೈಯಕ್ತಿಕ ಮಾಹಿತಿಗಾಗಿ `RTI’ ಬಳಸುವಂತಿಲ್ಲ : ಹೈಕೋರ್ಟ್ ಮಹತ್ವದ ತೀರ್ಪು

BIG NEWS : ರಾಜ್ಯ ಸರ್ಕಾರದ ಎಲ್ಲಾ ಇಲಾಖೆಗಳಲ್ಲೂ ‘ಇ-ಅಫೀಸ್’ ತಂತ್ರಾಂಶ ಬಳಕೆ ಕಡ್ಡಾಯ : ಸರ್ಕಾರದಿಂದ ಮಹತ್ವದ ಆದೇಶ

ರಾಜ್ಯದ ವಿದ್ಯಾರ್ಥಿಗಳೇ ಗಮನಿಸಿ : ‘DUPLICATE TC ’ ಪಡೆಯಲು ಏನೆಲ್ಲಾ ದಾಖಲೆ ಬೇಕು? ಇಲ್ಲಿದೆ ಮಾಹಿತಿ

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.