ಉತ್ತರಖಂಡ : ಟಿಟಿ ವಾಹನದಲ್ಲಿ ಪ್ರಯಾಣಿಸುತ್ತಿದ್ದ ಸುಮಾರು 23 ಜನರಿದ್ದ ಟೆಂಪೋ ಟ್ರಾವೆಲರ್ ಒಂದು ಅಲಕನಂದ ನದಿಗೆ ಹೂಳಿ ಬಿದ್ದು ಸುಮಾರು 10 ಜನರು ಸಾವನ್ನಪ್ಪಿದ್ದು 7 ಜನರಿಗೆ ಗಂಭೀರವಾದಂತಹ ಗಾಯಗಳಾಗಿರುವ ಘಟನೆ ಉತ್ತರಖಾಂಡಿನ ರುದ್ರಪ್ರಯಾಗದ ಬದರಿನಾಥ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.
ಅಲಕನಂದ ನದಿಗೆ ಟಿಟಿ ಉರುಳಿ ಬಿದ್ದು 10 ಪ್ರಯಾಣಿಕರ ಸಾವನ್ನಾಪ್ಪಿದ್ದರೆ. ಉತ್ತರಖಾಂಡಿನ ರುದ್ರ ಪ್ರಯಾಗದಲ್ಲಿ ಈ ಒಂದು ರಸ್ತೆ ಅಪಘಾತ ಸಂಭವಿಸಿದೆ. ಬದ್ರಿನಾಥ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಒಂದು ಘೋರ ದುರಂತ ಸಂಭವಿಸಿದೆ ಎಂದು ತಿಳಿದುಬಂದಿದೆ.ಘಟನೆಯಲ್ಲಿ 7 ಪ್ರಯಾಣಿಕರಿಗೆ ಗಂಭೀರವಾದ ಗಾಯಗಳಾಗಿದ್ದು ಸ್ಥಳೀಯ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.ಟೆಂಪೋ ಟ್ರಾವೆಲರ್ ನಲ್ಲಿ 23 ಪ್ರಯಾಣಿಕರು ಎಂದು ತಿಳಿದುಬಂದಿದೆ.
ಇಲ್ಲಿಯವರೆಗೆ ದೊರೆತ ಮಾಹಿತಿಯ ಪ್ರಕಾರ, ರುದ್ರಪ್ರಯಾಗ್ ನಗರದಿಂದ ಐದು ಕಿಲೋಮೀಟರ್ ಮುಂದಿರುವ ಬದರೀನಾಥ್ ಹೆದ್ದಾರಿಯ ರಟೋಲಿ ಬಳಿ ಟೆಂಪೋ ಟ್ರಾವೆಲರ್ ಅಲಕನಂದಾ ನದಿಗೆ ಬಿದ್ದಿದೆ. ವಾಹನದಲ್ಲಿ 23 ಪ್ರಯಾಣಿಕರು ಪ್ರಯಾಣಿಸುತ್ತಿದ್ದರು ಎಂದು ತಿಳಿದುಬಂದಿದೆ. ಮಾಹಿತಿಯ ಮೇರೆಗೆ ಪೊಲೀಸ್ ಆಡಳಿತ, ಜಿಲ್ಲಾ ವಿಪತ್ತು ನಿರ್ವಹಣೆ, ಡಿಡಿಆರ್ಎಫ್ ಮತ್ತು ಇತರ ತಂಡಗಳು ಸ್ಥಳದಲ್ಲೇ ರಕ್ಷಣಾ ಕಾರ್ಯ ನಡೆಸುತ್ತಿವೆ.