ಬ್ರಿಟನ್: ಬ್ರಿಟನ್ ಪ್ರಧಾನಿ ಚುನಾವಣೆಗೆ ನಡೆದಂತ ಫಲಿತಾಂಶ ಹೊರ ಬಿದ್ದಿದೆ. ಲಿಜ್ ಟ್ರಸ್ ( Liz Truss ) ಅವರು ರಿಷಿ ಸುನಕ್ ( Rishi Sunak ) ಅವರನ್ನು ಸೋಲಿಸಿ ಭರ್ಜರಿ ಗೆಲುವು ಸಾಧಿಸಿದ್ದಾರೆ. ಈ ಮೂಲಕ ಆಡಳಿತಾರೂಢ ಕನ್ಸರ್ವೇಟಿವ್ ಪಕ್ಷದ ಹೊಸ ನಾಯಕ ಮತ್ತು ಬ್ರಿಟನ್ ನ ಮುಂದಿನ ಪ್ರಧಾನಿಯಾಗಿದ್ದಾರೆ.
ಬೆಂಗಳೂರಿಗರೇ ಮನೆಯಿಂದ ಹೊರ ಬರೋ ಮುನ್ನಾ ಎಚ್ಚರ: ಮುಂದಿನ 3 ಗಂಟೆ ಭಾರಿ ಮಳೆ | Bengaluru Rain
ಕನ್ಸರ್ವೇಟಿವ್ ಪಕ್ಷದ ಸದಸ್ಯರು ಸೋಮವಾರ, ಸೆಪ್ಟೆಂಬರ್ 5 ರಂದು, ಲಿಜ್ ಟ್ರಸ್ ಅವರನ್ನು ತಮ್ಮ ಮುಂದಿನ ನಾಯಕನನ್ನಾಗಿ ಆಯ್ಕೆ ಮಾಡಿದರು, ಇದು ಅವರನ್ನು ಯುನೈಟೆಡ್ ಕಿಂಗ್ ಡಮ್ ನ ಮುಂದಿನ ಪ್ರಧಾನ ಮಂತ್ರಿಯನ್ನಾಗಿ ಮಾಡಿತು. ಮಂಗಳವಾರ ಬೋರಿಸ್ ಜಾನ್ಸನ್ ಅವರಿಂದ ಟ್ರಸ್ ಅಧಿಕಾರ ಸ್ವೀಕರಿಸಲಿದ್ದಾರೆ.
ವಿದೇಶಾಂಗ ಕಾರ್ಯದರ್ಶಿ ಟ್ರಸ್ ಅವರು ಖಜಾನೆಯ ಮಾಜಿ ಚಾನ್ಸಲರ್ ರಿಷಿ ಸುನಕ್ ಅವರನ್ನು ಸೋಲಿಸಿ ಕನ್ಸರ್ವೇಟಿವ್ ಪಕ್ಷದ ನಾಯಕತ್ವ ಮತ್ತು ಪ್ರಧಾನ ಮಂತ್ರಿ ಸ್ಥಾನವನ್ನು ಅಲಂಕರಿಸಿದ್ದಾರೆ.
UK Foreign Secretary Liz Truss becomes the new British Prime Minister, succeeds ousted Boris Johnson; defeats rival Rishi Sunak pic.twitter.com/6mrSLHkjqo
— ANI (@ANI) September 5, 2022