ಬೆಂಗಳೂರು: ಉಜ್ಜೀವನ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ನಿಂದ ( ujjivan small finance bank ) ಕೆಲ ನಿಶ್ಚಿತ ಠೇವಣಿಗಳ ( fixed deposits ) ಬಡ್ಡಿದರ ( Interest Rate ) ಹೆಚ್ಚಳ ಮಾಡಲಾಗಿದೆ. ಶೇ.8 ಮತ್ತು ಹಿರಿಯ ನಾಗರಿಕರಿಗೆ ಶೇ.8.75ರವರೆಗೆ ಬಡ್ಡಿದರ ಕೊಡುಗೆ ನೀಡಲಾಗುತ್ತಿದೆ.
ಪ್ರಮುಖಾಂಶಗಳು
• ನಿಯಮಿತ ಗ್ರಾಹಕರಿಗೆ ಹೆಚ್ಚಿನ ಬಡ್ಡಿದರ 80 ವಾರಗಳಿಗೆ ಶೇ.8(560 ದಿನಗಳು)
• ಹಿರಿಯ ನಾಗರಿಕರಿಗೆ ಹೆಚ್ಚಿನ ಬಡ್ಡಿದರ 80 ವಾರಗಳಿಗೆ ಶೇ.8.75(560 ದಿನಗಳು)
• ಪ್ಲಾಟಿನಾ ಎಫ್.ಡಿ. ಹೆಚ್ಚುವರಿ ಬಡ್ಡಿದರ ಶೇ.0.20ರಷ್ಟು ಪಡೆಯುತ್ತದೆ. ಇವುಗಳು ರೂ.15 ಲಕ್ಷಗಳು ಮತ್ತು ಮೇಲ್ಪಟ್ಟು ಹಾಗೂ ರೂ.2 ಕೋಟಿಗಳಿಗಿಂತ ಕಡಿಮೆ ಮೊತ್ತಕ್ಕೆ ಅನ್ವಯಿಸುತ್ತವೆ.
SHOCKING NEWS: ಮಗುವಿಗೆ ನಾಲಿಗೆ ಬದಲಿಗೆ ಜನನಾಂಗಕ್ಕೆ ಶಸ್ತ್ರಚಿಕಿತ್ಸೆ ಮಾಡಿದ ವೈದ್ಯರು
ಉಜ್ಜೀವನ್ ಎಸ್.ಎಫ್.ಬಿ.ಯ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಶ್ರೀ ಇಟ್ಟಿರ ಡೇವಿಸ್ , “ಎಫ್.ಡಿ. ಬೆಲೆ ಹೆಚ್ಚಳವು ಗ್ರಾಹಕರಿಗೆ ಅತ್ಯುತ್ತಮ ಉತ್ಪನ್ನಗಳನ್ನು ನೀಡುವ ನಮ್ಮ ಬದ್ಧತೆಯ ಮರು ದೃಢೀಕರಣವಾಗಿದೆ. ಇದು ಕಣ ಕಣ ಠೇವಣಿಗಳನ್ನು ನಿರ್ಮಿಸುವ ಹಾಗೂ ವಿಕಾಸಗೊಳ್ಳುತ್ತಿರುವ ಕಿರು-ಆರ್ಥಿಕತೆಯ ಸನ್ನಿವೇಶ ನಿರ್ಮಿಸುವ ರೀಟೇಲ್ ಕಾರ್ಯತಂತ್ರಕ್ಕೆ ಪೂರಕವಾಗಿಯೂ ಇದೆ” ಎಂದರು.
ಹೊಸ ದರಗಳು ನವೆಂಬರ್ 5, 2022ರಿಂದ ಪರಿಣಾಮಕಾರಿಯಾಗಿರುತ್ತವೆ
ಕ್ರ.ಸಂ. ಅವಧಿ ಪ್ರಸ್ತುತದ ದರಗಳು ಪರಿಷ್ಕೃತ ದರಗಳು
1 80 ವಾರಗಳು (560 ದಿನಗಳು) 7.20% 8.00%
2 990 ದಿನಗಳು 7.50% 7.75%
3 12 ತಿಂಗಳು1 ದಿನದಿಂದ 559 ದಿನಗಳು 7.20% 7.50%
4 561 ದಿನಗಳಿಂದ 989 ದಿನಗಳು 7.00% 7.50%
5 991 ದಿನಗಳಿಂದ 60 ತಿಂಗಳು 7.00% 7.20%
6 60 ತಿಂಗಳಿಂದ 1ದಿನದಿಂದ 120 ತಿಂಗಳು 6.00% 6.50%
ಗ್ರಾಹಕರು ಈ ಪ್ಲಾನ್ ಅಡಿಯಲ್ಲಿ ₹15 ಲಕ್ಷಗಳು ಮೇಲ್ಪಟ್ಟು ₹ಕೋಟಿಗಳವರೆಗೆ ಈ ಪ್ಲಾನ್ ಅಡಿಯಲ್ಲಿ ಹೂಡಿಕೆ ಮಾಡಬಹುದು. ಪ್ಲಾಟಿನಾ ಎಫ್.ಡಿ.ನಾನ್-ಕಾಲಬಲ್ , ಅಂದರೆ ಅವಧಿಪೂರ್ವ ಹಿಂಪಡೆಯುವಿಕೆ ಈ ಯೋಜನೆಯಲ್ಲಿ ಸಾಧ್ಯವಿಲ್ಲ.
ಉಜ್ಜೀವನ್ ಎಸ್.ಎಫ್.ಬಿ.ಯು ಮಾಸಿಕ, ತ್ರೈಮಾಸಿಕ ಹಾಗೂ ಮೆಚ್ಯುರಿಟಿಯಲ್ಲಿ ಬಡ್ಡಿ ಪಾವತಿಯ ಆಯ್ಕೆಗಳನ್ನು ನೀಡುತ್ತದೆ. ಟ್ಯಾಕ್ಸ್ ಸೇವರ್ ಫಿಕ್ಸ್ಡ್ ಡಿಪಾಸಿಟ್ ಗಳು ಐದು ವರ್ಷಗಳ ಲಾಕ್-ಇನ್ ಅವಧಿಯೊಂದಿಗೆ ಬರುತ್ತವೆ.
ಎಫ್.ಡಿ.ಗಳ ಮೇಲೆ ಹೊಸ ಸುತ್ತಿನ ಬೆಲೆ ಹೆಚ್ಚಳವು ಉಜ್ಜೀವನ್ ಎಸ್.ಎಫ್.ಬಿ.ಯನ್ನು ಸಾವಧಿ ಠೇವಣಿಗಳಿಗೆ ಅತ್ಯಂತ ಹೆಚ್ಚು ಬಡ್ಡಿದರಗಳನ್ನು ನೀಡುವ ಬ್ಯಾಂಕ್ ಗಳ ಸಾಲಿನಲ್ಲಿ ನಿಲ್ಲಿಸಿದೆ.