ರಾಯಚೂರು: ನಗರದಲ್ಲಿನ ಲಿಂಗಸುಗೂರು ತಾಲೂಕು ಆಸ್ಪತ್ರೆಯಲ್ಲಿ ಹೆರಿಗೆ ಮಾಡಿಸಲು ಐದು ಸಾವಿರ ಲಂಚಕ್ಕೆ ಇಬ್ಬರು ನರ್ಸ್ ಗಳು ಬೇಡಿಕೆ ಇಟ್ಟ ಪ್ರಕರಣ ಬಯಲಿಗೆ ಬಂದಿತ್ತು. ಈ ಪ್ರಕರಣದ ಬೆನ್ನಲ್ಲೇ ಇಬ್ಬರು ನರ್ಸ್ ಗಳನ್ನು ಅಮಾನತುಗೊಳಿಸಿ ಡಿ.ಹೆಚ್ಓ ಆದೇಶಿಸಿದ್ದಾರೆ.
ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕು ಆಸ್ಪತ್ರೆಯಲ್ಲಿ ಹೆರಿಗೆ ಮಾಡಿಸೋದಕ್ಕೂ ಲಂಚಾವತಾರ ಬಟಾಬಯಲಾಗಿತ್ತು. ಆಸ್ಪತ್ರೆಯ ನರ್ಸ್ ಗಳಾದಂತ ಗೀತಾ ಹಾಗೂ ಆಂಜನಮ್ಮ 5 ಸಾವಿರವನ್ನು ಹೆರಿಗೆ ಮಾಡಿಸಲು ಲಂಚವಾಗಿ ಪಡೆದಿದ್ದರು.
ಸೋಷಿಯಲ್ ಮೀಡಿಯಾಗಳಲ್ಲಿ ನರ್ಸ್ ಗಳು ಲಂಚವನ್ನು ಪಡೆಯುತ್ತಿರುವಂತ ವೀಡಿಯೋ ವೈರಲ್ ಆಗಿತ್ತು. ಈ ಸುದ್ದಿ ಬೆಳಕಿಗೆ ಬಂದ ಬೆನ್ನಲ್ಲೇ ರಾಯಚೂರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸುರೇಂದ್ರ ಬಾಬು, ಇಬ್ಬರು ನರ್ಸ್ ಗಳನ್ನು ಅಮಾನುತುಗೊಳಿಸಿ ಆದೇಶಿಸಿದ್ದಾರೆ.