ವಾಷಿಂಗ್ಟನ್: ವಜಾಗೊಂಡಿರುವ ಸಿಇಒ ಪರಾಗ್ ಅಗರ್ವಾಲ್(Parag Agrawa) ಅವರಿಗೆ ಟ್ವಿಟ್ಟರ್(Twitter) ಕಂಪನಿ 345 ಕೋಟಿ ರೂ. ಪರಿಹಾರ ಪ್ಯಾಕೇಜ್ ನೀಡುವ ಸಾಧ್ಯತೆಯಿದೆ.
ಎಲಾನ್ ಮಸ್ಕ್ ಟ್ವಿಟ್ಟರ್ ಕಂಪನಿಯನ್ನು ಖರೀದಿಸಲಿದ್ದಾರೆ ಎಂಬ ಸುದ್ದಿ ಪ್ರಕಟವಾದ ಬೆನ್ನಲ್ಲೇ ಪರಾಗ್ ಅಗರ್ವಾಲ್ ಅವರನ್ನೂ ವಜಾಗೊಳಿಸಬಹುದು ಎಂಬ ಸುದ್ದಿ ಏಪ್ರಿಲ್ನಲ್ಲೇ ಪ್ರಕಟವಾಗಿತ್ತು.
ಈಗ ಆ ಸುದ್ದಿ ನಿಜವಾಗಿದ್ದು ಪರಾಗ್ ಜೊತೆ ಪ್ರಮುಖ ಹುದ್ದೆಯಲ್ಲಿದ್ದವರನ್ನು ವಜಾಗೊಳಿಸಲಾಗಿದೆ.ದಿಢೀರ್ ವಜಾಗೊಳಿಸಿದ ಹಿನ್ನೆಲೆಯಲ್ಲಿ ಟ್ವಿಟ್ಟರ್ ಕಂಪನಿ ಪರಾಗ್ ಅಗರ್ವಾಲ್ ಅವರಿಗೆ 42 ದಶಲಕ್ಷ ಡಾಲರ್(ಅಂದಾಜು 345,71,45,328 ರೂ.) ಪ್ಯಾಕೇಜ್ ನೀಡುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.
ಏಪ್ರಿಲ್ 14 ರಂದು ಸೆಕ್ಯುರಿಟೀಸ್ ಫೈಲಿಂಗ್ನಲ್ಲಿ ಪ್ರಸ್ತುತ ಇರುವ ಟ್ವಿಟ್ಟರ್ ಆಡಳಿತದ ಬಗ್ಗೆ ನನಗೆ ವಿಶ್ವಾಸವಿಲ್ಲ ಎಂದು ಮಸ್ಕ್ ತಿಳಿಸಿದ್ದರುಈ ಹಿಂದೆ ಮುಖ್ಯ ಟೆಕ್ನಾಲಜಿ ಅಧಿಕಾರಿಯಾಗಿದ್ದ ಪರಾಗ್ ಕಳೆದ ನವೆಂಬರ್ನಲ್ಲಿ ಸಿಇಒ ಆಗಿ ಅಧಿಕಾರ ಸ್ವೀಕರಿಸಿದ್ದರು. ಐಐಟಿ ಬಾಂಬೆ ಮತ್ತು ಸ್ಟ್ಯಾನ್ಫೋರ್ಡ್ ವಿಶ್ವವಿದ್ಯಾಲಯದ ಹಳೆಯ ವಿದ್ಯಾರ್ಥಿಯಾಗಿರುವ ಅಗರ್ವಾಲ್ ದಶಕಗಳ ಹಿಂದೆ ಟ್ವಿಟ್ಟರ್ ಕಂಪನಿಯನ್ನು ಸೇರಿದ್ದರು.
ಪರಾಗ್ ಅಗರ್ವಾಲ್(Parag Agarwal) ಜೊತೆ ಕಾನೂನು, ನೀತಿ ಮತ್ತು ಟ್ರಸ್ಟ್ ಮುಖ್ಯಸ್ಥರಾದ ವಿಜಯ ಗದ್ದೆ, ಮುಖ್ಯ ಹಣಕಾಸು ಅಧಿಕಾರಿ ನೆಡ್ ಸೆಗಲ್ ಸೇರಿದಂತೆ ಪ್ರಮುಖರನ್ನು ವಜಾ ಮಾಡಲಾಗಿದೆ ಎಂದು ವರದಿಯಾಗಿದೆ.