ತುಮಕೂರು: ಇಂದು ಜಿಲ್ಲೆಯ ಪಾವಗಡದ ಅಡ್ವಕೇಟ್ ಅಸೋಷಿಯೇಷ್ ಅಧ್ಯಕ್ಷರಾಗಿ ಹೆಚ್ ಶೇಷನಂದನ್ ಅವರು ಭರ್ಜರಿ ಗೆಲುವು ಸಾಧಿಸಿದ್ದಾರೆ.
ಪಾವಗಡದ ಅಡ್ವಕೇಟ್ ಅಸೋಷಿಯೇಷನ್ ನ ಪದಾಧಿಕಾರಿಗಳ ಆಯ್ಕೆಗಾಗಿ ಇಂದು ಚುನಾವಣೆ ನಡೆಯಿತು. ಈ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಹೆಚ್ ಶೇಷನಂದನ್, ಕಾರ್ಯದರ್ಶಿಯಾಗಿ ಹೆಚ್ ಎ ಪ್ರಭಾಕರ ರೆಡ್ಡಿ ಭರ್ಜರಿ ಗೆಲುವು ಸಾಧಿಸಿದ್ದಾರೆ. ಅಲ್ಲದೇ ಉಪಾಧ್ಯಕ್ಷರಾಗಿ ಹನುಮಂತರಾಯಪ್ಪ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಅಂದಹಾಗೇ ದಲಿತ ಚಳುವಳಿಯ ನಾಯಕ ಹೆಚ್ ಸುಬ್ಬರಾಯಪ್ಪ ಅಲಿಯಾಸ್ ಶೇಷಾನಂದನ್ ಅವರಾಗಿದ್ದಾರೆ. ಇಂತಹ ಅವರು ದಲಿತರ ಹೇಳಿಗೆಗಾಗಿ ತನ್ನ ಸರ್ಕಾರಿ ಕೆಲಸವನ್ನೇ ಬಿಟ್ಟ 50ನೇ ವಯಸ್ಸಿನಲ್ಲಿ ಕಾನೂನು ಪದವಿ ಪಡೆದಂತವರು ಆಗಿದ್ದಾರೆ.
ತಾನು ಹುಟ್ಟಿದ ಸ್ಥಳಕ್ಕೂ ತಾನು ಬೆಳೆದ ತಾಲೂಕಿಗೂ ಸೇವೆ ಮಾಡುವ ಹಂಬಲವನ್ನು ಹೊಂದಿರುವಂತ ಇವರು, ನೊಂದವರ ಬಾಳಿನಲ್ಲಿ ನ್ಯಾಯ ದೊರಕಿಸಿಕೊಡಲು ಕಾನೂನು ಪದವಿ ಪಡೆದ ದಿನದಿಂದ ದೀನ ದಲಿತರಿಗೆ ನ್ಯಾಯ ಕೊಡಿಸುವಂತ ಕೆಲಸ ಮಾಡುತ್ತಿದ್ದಾರೆ.
ವರದಿ: ಭಾನುಪ್ರಕಾಶ್, ಪಾವಗಡ