ತುಮಕೂರು: ಜಿಲ್ಲೆಯ ಶಿರಾ ತಾಲೂಕಿನ ಬಾಲೇನಹಳ್ಳಿ ಬಳಿಯಲ್ಲಿ ಕ್ರೂಸರ್ ಲಾರಿಗೆ ಡಿಕ್ಕಿಯಾಗಿ ಇಂದು 9 ಮಂದಿ ಸಾವನ್ನಪ್ಪಿದ್ದರು. ಈ ದುರಂತದ ಹಿಂದಿನ ರಹಸ್ಯ ಬಯಲಾಗಿದೆ. ಈ ಘಟನೆಗೆ ಕ್ರೂಸರ್ ಕಂಡೀಷನ್ ಸಂಪೂರ್ಣ ಹಾಳಾಗಿದ್ದೇ ಕಾರಣ ಎನ್ನಲಾಗುತ್ತಿದೆ.
ಇಂದು ಬೆಳಿಗ್ಗೆ ಶಿರಾ ತಾಲೂಕಿನ ಬಾಲೇನಹಳ್ಳಿಯ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಕ್ರೂಸರ್ ಡಿವೈಡರ್ ಗೆ ಡಿಕ್ಕಿಯಾಗಿ, ಬಳಿಕ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ, ಅದರಲ್ಲಿದ್ದಂತ 9 ಮಂದಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದರು. ಈ ಘಟನೆಯ ಹಿಂದಿನ ಸ್ಪೋಟಕ ರಹಸ್ಯ ಬಯಲಾಗಿದೆ.
ಕ್ರೂಸರ್ ಕಂಡೀಷನ್ ಸಂಪೂರ್ಣ ಹಾಳಾಗಿದ್ದರೂ, ಲೆಕ್ಕಿಸದೇ ಅದರಲ್ಲಿಯೇ ಜನರನ್ನು ಕರೆದೊಯ್ದಿದ್ದಾರೆ. ಅಲ್ಲದೇ 12 ಸೀಟ್ ಕ್ಯಪಾಸಿಟಿಯ ಕಾರಿನಲ್ಲಿ 24 ಜನರನ್ನು ತುಂಬಿಕೊಂಡು ಹೋಗಲಾಗಿದೆ.
ಕ್ರೂಸರ್ ಕಾರಿನ ಟೈಯರ್ ಸಂಪೂರ್ಣ ಸವೆದಿದ್ದ ಕಾರಣ, ಕಾರಿನಲ್ಲಿ ಕ್ಯಪಾಸಿಟಿಗಿಂತಲೂ ಹೆಚ್ಚು ಜನರಿದ್ದ ಕಾರಣ, ಬಾರಕ್ಕೆ ಟೈಯರ್ ಸ್ಪೋಟಗೊಂಡು ರಸ್ತೆ ಮಧ್ಯದ ಡಿವೈಡರ್ ಗೆ ಕಾರು ಡಿಕ್ಕಿಯಾಗಿ, ಎದುರಿಗೆ ಬರುತ್ತಿದ್ದಂತ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ, ಭೀಕರ ದುರಂತದಲ್ಲಿ 9 ಮಂದಿ ಸಾವನ್ನಪ್ಪಿದ್ದಾರೆ ಎಂಬುದಾಗಿ ಹೇಳಲಾಗುತ್ತಿದೆ.
ಸೀಟಿನ ಸಾಮರ್ಥ್ಯಕ್ಕಿಂತ ಹೆಚ್ಚು ಜನರನ್ನು ಟೈಯರ್ ಸಂಪೂರ್ಣ ಸವೆದ ಕ್ರೂಸರ್ ನಲ್ಲಿ ಕರೆದೊಯ್ಯುತ್ತಿದ್ದ ಕಾರಣದಿಂದಾಗಿಯೇ ಈ ದುರಂತ ಸಂಭವಿಸಿ, 9 ಮಂದಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.