ಕೆಎನ್ಎನ್ ಸ್ಪಷಲ್ ಡೆಸ್ಕ್: ಕನ್ನಡ ನಾಡಿನ ಹೆಮ್ಮೆಯ ನಾಯಕ ಹೆಚ್.ಡಿ.ದೇವೇಗೌಡರು ( H D Devegowda ) ಶಾಸನಸಭೆ ಪ್ರವೇಶಿಸಿ 2022 ಕ್ಕೆ ಅರವತ್ತು ವರ್ಷ. ಮಾಜಿ ಪ್ರಧಾನಿ ಹುದ್ದೆಯವರೆಗೆ ಏರಿದಂತ ಅವರ ಸಾಧನೆ ವರ್ಣಿಸಲಾಗದ್ದು. ಹಾಗಾದ್ರೇ.. ಅವರ 60 ವರ್ಷದ ಶಾಸನಸಭೆಯ ಪ್ರವೇಶದ ಬಗ್ಗೆ ಮತ್ತಷ್ಟು ಮಾಹಿತಿ ಮುಂದೆ ಓದಿ..
ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ( Farmer Prime Minister HD Devegowda ) ಅವರು, 1962 ರಲ್ಲಿ ಹಾಸನ ಜಿಲ್ಲೆ ಹೊಳೆನರಸೀಪುರ ಕ್ಷೇತ್ರದಿಂದ ವಿಧಾನಸಭೆಗೆ ಆಯ್ಕೆಯಾದರು. ಈ ಬಳಿಕ ಪ್ರತಿಪಕ್ಷನಾಯಕರಾಗಿ, ಸಚಿವರಾಗಿ 1994 ರಲ್ಲಿ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದರು.
ಇನ್ನೂ ಶಾಸನ ಸಭೆಯಲ್ಲಿರುವಾಗಲೇ ದೇಶದ ಪ್ರಧಾನಿ ಹುದ್ದೆಗೆ ದೇವೇಗೌಡರು ಏರಿದ್ದು ಇತಿಹಾಸದ ಅಮರಕ್ಷಣ. ಅಲ್ಲದೇ ನಾಡಿಗೆ ಕೀರ್ತಿ ತಂದ ದೇವೇಗೌಡರು ಈಗಲೂ ಸಕ್ರಿಯ ರಾಜಕಾರಣಿ. ರಾಜ್ಯಸಭೆಯ ಸದಸ್ಯರಾಗಿರುವ ದೇವೇಗೌಡರು ನಾಡಿನ ಸಮಸ್ಯೆಗಳಿಗೆ ಸ್ಪಂದಿಸುವ ರೀತಿ ಅನನ್ಯವಾಗಿದೆ.
ಹಾಸ್ಟೆಲ್ಗೆ ನುಗ್ಗಿ ಯುವತಿಯನ್ನು ತಬ್ಬಿದ ಸೆಕ್ಯುರಿಟಿ ಗಾರ್ಡ್: ಸಿಸಿಟಿವಿಯಲ್ಲಿ ಭಯಾನಕ ವಿಡಿಯೋ ಸೆರೆ
1996ರಲ್ಲಿ ಯಾವ ಒಂದು ರಾಜಕೀಯ ಪಕ್ಷಕ್ಕೂ ಲೋಕಸಭೆಯಲ್ಲಿ ಸ್ಪಷ್ಟ ಬಹುಮತವಿರಲಿಲ್ಲ. ಆಗ ಯುನೈಟೆಡ್ ಫ್ರಂಟ್ (ಕಾಂಗ್ರೆಸ್ ಹೊರತು ಮತ್ತು ಬಿಜೆಪಿ ಹೊರತುಪಡಿಸಿದ ಪ್ರಾದೇಶಿಕ ಪಕ್ಷಗಳ ಒಂದು ಸಂಘ) ಕಾಂಗ್ರೆಸ್ ಬೆಂಬಲದೊಂದಿಗೆ ಕೇಂದ್ರದಲ್ಲಿ ಸರ್ಕಾರ ರಚಿಸಲು ನಿರ್ಧರಿಸಿದರು. ಅನಿರೀಕ್ಷಿತವಾಗಿ, ದೇವೇಗೌಡರು ಸರ್ಕಾರದ ಮುಖ್ಯಸ್ಥರಾಗಿ ಆಯ್ಕೆಯಾದರು ಮತ್ತು ಭಾರತದ 11 ನೇ ಪ್ರಧಾನಿಯಾದರು. ಅವರು 1 ಜೂನ್ 1996 ರಂದು ಭಾರತದ ಪ್ರಧಾನ ಮಂತ್ರಿಯಾಗಿ ಅಧಿಕಾರ ವಹಿಸಿಕೊಂಡರು ಮತ್ತು 1997 ರ ಏಪ್ರಿಲ್ 21 ರವರೆಗೆ ಅಧಿಕಾರದಲ್ಲಿ ಮುಂದುವರೆದರು. ಅಲ್ಲದೆ, ಅವರು ಯುನೈಟೆಡ್ ಫ್ರಂಟ್ನ ಸ್ಟೀರಿಂಗ್ ಕಮಿಟಿಯ ಅಧ್ಯಕ್ಷರಾಗಿದ್ದರು. ದೆಹಲಿ ಮೆಟ್ರೋ ಯೋಜನೆಯ ಕೀರ್ತಿ ಅವರು ಸಲ್ಲುತ್ತದೆ.
15,000 ಶಾಲಾ ಶಿಕ್ಷಕರ ನೇಮಕ ಪರೀಕ್ಷೆಯ ತಾತ್ಕಾಲಿಕ ಆಯ್ಕೆಪಟ್ಟಿ ಪ್ರಕಟ | Teacher Recruitment Result
ಹೆಚ್ ಡಿ ದೇವೇಗೌಡ ಅವರು ಅರವತ್ತು ವರ್ಷಗಳ ಕಾಲ ಸಕ್ರಿಯವಾಗಿದ್ದ ರಾಜಕಾರಣಿ ದೇಶ ಮಾತ್ರವಲ್ಲ, ವಿಶ್ವದ ರಾಜಕಾರಣದಲ್ಲೇ ಅಪರೂಪವಾಗಿದೆ. ಈ ಹಿನ್ನೆಲೆಯಲ್ಲಿ ಪಕ್ಷ ಭೇದ ಮರೆತು ಸರ್ವ ಪಕ್ಷಗಳು ಮತ್ತು ನಾಡಿನ ಜನತೆ ದೇವೇಗೌಡರ ಸೇವೆಯನ್ನು ನೆನಪಿಸಿ, ಅಭಿನಂದಿಸಬೇಕಾದ ಕಾಲ ಇದು ಆಗಿದೆ.
ಹೀಗೆ ಶಾಸನ ಸಭೆಗೆ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಅವರು ಪ್ರವೇಶಿಸಿ 60 ವರ್ಷಗಳ ಈ ಸಂದರ್ಭದಲ್ಲಿ ಅವರಿಗೆ ಕನ್ನಡ ನ್ಯೂಸ್ ನೌ ಸಂಸ್ಥೆಯು ಅಭಿನಂದನೆಗಳನ್ನು ಸಲ್ಲಿಸುತ್ತಿದೆ. ಅಲ್ಲದೇ ನಾಡಿಗೆ ದೊಡ್ಡವರಾದ ತಾವು ನೂರ್ಕಾಲ ನೆಮ್ಮದಿಯಿಂದಿರಿ ಎಂಬುದಾಗಿ ಆಶಿಸುತ್ತಿದೆ.
ಕೇಂದ್ರ ಸಚಿವೆ ʻಸ್ಮೃತಿ ಇರಾನಿʼಯನ್ನು ಕೂಡಲೇ ವಜಾಗೊಳಿಸುವಂತೆ ಆಗ್ರಹಿಸಿ ಪ್ರಧಾನಿ ಮೋದಿಗೆ ಪತ್ರ ಬರೆದ ಗೋವಾ ಶಾಸಕ…?
ಅಂದಹಾಗೇ, ದೇವೇಗೌಡರು ಮೇ 18, 1933 ರಂದು ಹಾಸನ ಜಿಲ್ಲೆಯ ಹೊಳೆನರಸಿಪುರ ತಾಲೂಕಿನ ಹರದನಹಳ್ಳಿಯಲ್ಲಿ ಜನಿಸಿದರು. ಸಿವಿಲ್ ಎಂಜಿನಿಯರಿಂಗ್ನಲ್ಲಿ ಡಿಪ್ಲೊಮಾ ಪಡೆದ ಬಳಿಕ, ಅವರು ಹಾಸನ ತಾಲ್ಲೂಕಿನ ಮುತ್ತಿಗೆ ಹಿರೇಹಳ್ಳಿಯ ದೇವೇಗೌಡ ಅವರ ಮಗಳು ಚೆನ್ನಮ್ಮ ಅವರನ್ನು 1954ರಲ್ಲಿ ವಿವಾಹವಾದರು. ಅವರಿಗೆ ಎಚ್.ಡಿ. ಕುಮಾರಸ್ವಾಮಿ ಹಾಗೂ ಎಚ್.ಡಿ. ರೇವಣ್ಣ ಸೇರಿದಂತೆ ನಾಲ್ಕು ಜನ ಗಂಡು ಮಕ್ಕಳೂ, ಇಬ್ಬರು ಹೆಣ್ಣು ಮಕ್ಕಳೂ ಇದ್ದಾರೆ.
ಎಚ್.ಡಿ. ಕುಮಾರಸ್ವಾಮಿ ಅವರು ಕರ್ನಾಟಕದ ಮುಖ್ಯಮಂತ್ರಿಗಳಾಗಿದ್ದರು. ಎಚ್.ಡಿ. ರೇವಣ್ಣ ಅವರು ಕರ್ನಾಟಕ ಸರ್ಕಾರದಲ್ಲಿ ಮಂತ್ರಿಗಳಾಗಿದ್ದರು. ಖ್ಯಾತ ಹೃದ್ರೋಗ ತಜ್ಞ ಡಾ. ಸಿ.ಎನ್. ಮಂಜುನಾಥ್ ಅವರು ದೇವೇಗೌಡರ ಅಳಿಯ.