ತುಮಕೂರು: ‘ಸ್ವಾತಂತ್ರ್ಯದ ಅಮೃತ ಮಹೋತ್ಸವ’ ಅಂಗವಾಗಿ ತಿಪಟೂರು ನಗರದಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ವತಿಯಿಂದ ಆಯೋಜಿಸಲಾಗಿದ್ದ ‘ತಿರಂಗ ಯಾತ್ರೆ’ಯಲ್ಲಿ ಭಾಗವಹಿಸಿದ್ದ ವೇಳೇಯಲ್ಲಿ ಸಚಿವ ಬಿಸಿ ನಾಗೇಶ್ ( Minister BC Nagesh ) ಅವರು ಎಬಿವಿಪಿ ಧ್ವಜದ ಕೆಳಗೆ ಭಾರತದ ತಿರಂಗ ಹಿಡಿದುಕೊಂಡಿರುವುದು ಈಗ ವಿವಾದಕ್ಕೆ ಕಾರಣವಾಗಿದೆ. ಈ ಪೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಇದು ಅಸಲಿಯೋ ನಕಲಿಯೋ ಎಂಬುದು ಸಚಿವರು ಸ್ಪಷ್ಟ ಪಡಿಸಿದಾಗ ತಿಳಿಯಬೇಕಿದೆ.
ದೇಶಾದ್ಯಂತ ಹರ್ ಘರ್ ತಿರಂಗ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಮನೆ ಮನೆಗಳಿಗೆ ರಾಷ್ಟ್ರಧ್ವಜವನ್ನು ( National Flag ) ಹಂಚುವ ಮೂಲಕ, ಕೋಟ್ಯಾಂತರ ಮನೆಗಳ ಮೇಲೆ ರಾಷ್ಟ್ರಧ್ವಜವನ್ನು ಹಾರಿಸೋ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಆಗಸ್ಟ್ 13ರ ರಿಂದ ಆಗಸ್ಟ್ 17ರವರೆಗೆ ದೇಶಾದಲ್ಲಿ ಹರ್ ಘರ್ ತಿರಂಗ ಕಾರ್ಯಕ್ರಮ ನಡೆಯಲಿದೆ.
ಇದೇ ಹಿನ್ನಲೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ತಮ್ಮ ತವರು ಕ್ಷೇತ್ರ ತಿಪಟೂರಿನಲ್ಲಿ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ನಿಂದ ಆಯೋಜಿಸಿದ್ದಂತ ತಿರಂಗ ಯಾತ್ರೆಯಲ್ಲಿ ಭಾಗವಹಿಸಿದ್ದರು. ಈ ವೇಳೆ ರಾಷ್ಟ್ರಧ್ವಜವನ್ನು ಹಿಡಿದು ಅವರು ಸಾಗಿದ್ರೇ.. ಅವರ ಹಿಂದೆಯೇ ತಿರಂಗ ಯಾತ್ರೆಯಲ್ಲಿ ಎಬಿವಿಪಿ ಧ್ವಜ ಕೂಡ ಹಾರಾಡಿದ ಪೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಸಚಿವರು ಮುಂದೆ ರಾಷ್ಟ್ರಧ್ವಜ ಹಿಡಿದು ಸಾಗುತ್ತಿರುವಾಗಲೇ, ರಾಷ್ಟ್ರಧ್ವಜಕ್ಕಿತ್ತ ಮೇಲಕ್ಕೆ ಎಬಿವಿಪಿ ಧ್ವಜವನ್ನು ಹಿಡಿದಿರುವಂತ ಪೋಟೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಪೋಟೋ ಅಸಲಿಯೋ ಅಥವಾ ನಕಲಿಯೋ ಎಂಬುದನ್ನು ಸಚಿವರೇ ಸ್ಪಷ್ಟ ಪಡಿಸಬೇಕಿದೆ. ಆದ್ರೇ.. ಸಾಮಾಜಿಕ ಜಾಲತಾಣದಲ್ಲಿ ಈ ಪೋಟೋ ಹರಿದಾಡುತ್ತಿದ್ದು, ರಾಷ್ಟ್ರಧ್ವಜಕ್ಕೆ ಮಾಡಿದ ಅಪಮಾನ ಎಂಬುದಾಗಿ ನೆಟ್ಟಿಗರು ಸಚಿವರ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದ್ದಾರೆ ಎನ್ನಲಾಗಿದೆ. ಇದೀಗ ವೈರಲ್ ಪೋಟೋ ಅಸಲೀಯತ್ತು ತನಿಖೆಯಿಂದ ತಿಳಿದು ಬರ ಬೇಕಾಗಿದೆ. ಆ ಬಳಿಕವೇ ಇದು ನಿಜವೇ, ಸುಳ್ಳೋ ಎಂಬುದು ಸ್ಪಷ್ಟವಾಗಲಿದೆ.
BIGG NEWS: ಅಟಲ್ ಪಿಂಚಣಿ ಯೋಜನೆ ಹೊಸ ನಿಯಮ: ಹೂಡಿಕೆದಾರರು ಅಕ್ಟೋಬರ್ ನಿಂದ ಸೇರುವಂತಿಲ್ಲ