ಹಾಸನ : ಮಹಿಳೆ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಐಟಿ ವಿಚಾರಣೆಗೆ ಹಾಜರಾಗಿ ಎಂದು ಭವಾನಿ ರೇವಣಗೆ ನೋಟಿಸ್ ನೆಡಿದೆ ಆದರೆ ಇದುವರೆಗೂ ಭವಾನಿ ರೇವಣ್ಣ ಅವರು ಎಲ್ಲಿಯೂ ಕಾಣಿಸಿಕೊಳ್ಳದೆ ನಾಪತ್ತೆಯಾಗಿದ್ದಾರೆ ಇದೀಗ ಭವಾನಿ ರೇವಣ್ಣ ಅವರ ನಿವಾಸಕ್ಕೆ ಮೂರು ಮಹಿಳಾ ವಕೀಲರು ಭೇಟಿ ನೀಡಿದ್ದು, ಇದೀಗ SIT ಮುಂದಿನ ನಡೆಯ ಬಗ್ಗೆ ಕುತೂಹಲ ಮೂಡಿಸಿದೆ.
ಹೌದು ಮೈಸೂರು ಜಿಲ್ಲೆಯ ಕೆ ಆರ್ ನಗರ ಠಾಣೆಯ ಮಹಿಳೆ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಐಟಿ ವಿಚಾರಣೆಗೆ ಹಾಜರಾಗದ ಭವಾನಿ ರೇವಣಗೆ ಸಂಕಷ್ಟ ಎದುರಾಗಿದೆ. ವಿಚಾರಣೆಗೆ ಹಾಜರಾಗಲು SIT ಅಧಿಕಾರಿಗಳು ನೋಟಿಸ್ ಜಾರಿ ಮಾಡಿದ್ದರು ಕೂಡ ಇದುವರೆಗೂ ಹಾಜರಾಗಿಲ್ಲ.
ಹಾಗಾಗಿ ಸಂಜೆ ಐದು ಗಂಟೆಯ ಒಳಗೆ ಎಸ್ಐಟಿದರೂ ಹಾಜರಾಗದಿದ್ದರೆ ಬಂಧನ ಮಾಡುವ ಸಾಧ್ಯತೆ ಇದೆ. ಯಾವುದೇ ಕ್ಷಣದಲ್ಲಾದರೂ ಭವಾನಿ ಅವರನ್ನು ಎಸ ಐ ಟಿ ಬಂಧಿಸುವ ಸಾಧ್ಯತೆ ಇದೆ ಆದರೆ ಭವಾನಿ ರೇವಣ್ಣ ಅವರು ಎಲ್ಲಿದ್ದಾರೆ ಎಂದು ಇದುವರೆಗೂ ತಿಳಿದು ಬಂದಿಲ್ಲ. ಇದೀಗ ಭವಾನಿ ನಿವಾಸಕ್ಕೆ ಮಹಿಳಾ ವಕೀಲರು ಆಗಮಿಸಿದ್ದಾರೆ.
ಭವಾನಿ ರೇವಣ್ಣಗೆ ನೋಟಿಸ್ ನೀಡಿರುವ ಎಸ್ಐಟಿ ಅಧಿಕಾರಿಗಳು ನೋಟಿಸ್ ನಲ್ಲಿ ನೀಡಿರುವ ಸಮಯ ಮುಗಿಲು 2 ಗಂಟೆ ಮಾತ್ರ ಬಾಕಿ ಇದ್ದು, ಸಮಯ ಮುಗಿಲು 2 ಗಂಟೆ ಬಾಕಿ ಇರುವಾಗಲೇ ಮೂರು ಮಹಿಳಾ ವಕೀಲರು ಇದೀಗ ಭವಾನಿ ರೇವಣ್ಣ ನಿವಾಸಕ್ಕೆ ಬಂದಿದ್ದಾರೆ. ಭವಾನಿ ರೇವಣ ಪರವಕೀಲರು ಆಗಮನ ಹಿನ್ನೆಲೆ ಇದೀಗ ಕುತೂಹಲ ಹೆಚ್ಚಿದೆ . ಭವಾನಿ ವಿಚಾರಣೆ ಸಂಬಂಧ ಎಸ್ಐಟಿ ಅಧಿಕಾರಿಗಳ ಜೊತೆಗೆ ವಕೀಲರು ಚರ್ಚಿಸಲಿದ್ದಾರೆ ಎನ್ನಲಾಗುತ್ತಿದೆ.