ಬೆಂಗಳೂರು : ಹಾಸನದ ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಪಕ್ಷ ನಾಯಕ ಆರ್ ಅಶೋಕ್ ಈ ಕುರಿತಂತೆ ಮಾತನಾಡಿದ್ದು ಈ ಒಂದು ಪ್ರಕರಣದಲ್ಲಿ ಪೆನ್ ಡ್ರೈವ್ ಹಂಚಿದವರೇ ಕಾಂಗ್ರೆಸ್ನವರು ಎರಡು ಮಾತಿಲ್ಲ ಎಂದು ಗಂಭೀರವಾಗಿ ಆರೋಪಿಸಿದರು.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪೆನ್ ಡ್ರೈವ್ ಹಂಚಿದವರೇ ಕಾಂಗ್ರೆಸ್ನವರು ಎರಡು ಮಾತಿಲ್ಲ. ಇದೆಲ್ಲ ಪ್ಲಾನ್ ಮಾಡಿ ಕಾಂಗ್ರೆಸ್ ಈ ರೀತಿ ಮಾಡುತ್ತಿದೆ. ಈಗ ತಮ್ಮ ಮೇಲಿನ ಆಪಾದನೆ ಬಿಜೆಪಿಗೆ ಕಡೆ ತಿರುಗೀಸುತ್ತಿದ್ದಾರೆ ಎಂದು ಬೆಂಗಳೂರಿನಲ್ಲಿ ವಿಪಕ್ಷ ನಾಯಕ ಅರಶೋಕ್ ವಾಗ್ದಾಳಿ ನಡೆಸಿದರು.
ಎಸ್ಐಟಿ ಮೂಲಕ ನಮ್ಮ ಕಡೆ ತನಿಖೆಯನ್ನು ತಿರುಗಿಸಿದ್ದಾರೆ.ಎಸ್ ಐ ಟಿ ಅಧಿಕಾರಿಗಳು ಪಕ್ಷಪಾತ ಧೋರಣೆ ತೋರಿಸುತ್ತಿದ್ದಾರೆ. ನಿಷ್ಪಕ್ಷಪಾತವಾಗಿ ತನಿಖೆ ಆಗಬೇಕಾದರೆ ಸಿಬಿಐಗೆ ಪ್ರಕರಣವನ್ನು ವಹಿಸಲಿ ಪ್ರಜ್ವಲ್ ಪ್ರಕರಣದ ತನಿಖೆ ಸಿಬಿಐ ಗೆ ವಹಿಸಲಿ. ಪ್ರಜ್ವಲ್ ಇದುವರೆಗೂ ವಾಪಾಸ್ಸಾಗಿಲ್ಲ.
ಎಸ್ಐಟಿಯವರು ಬಂಧಿಸಿ ಕರೆ ತಂದಿಲ್ಲ.ಹಾಸನ ಕಾಂಗ್ರೆಸ್ ಕಾರ್ಯಕರ್ತರ ಬಳಿ ಪೆನ್ ಡ್ರೈವ್ ಇದೆ. ಕಾಂಗ್ರೆಸ್ ಕಾರ್ಯಕರ್ತರ ಮೊಬೈಲ್ ಚೆಕ್ ಮಾಡಿದ್ದಾರ? ಯಾಕೆ ಕಾಂಗ್ರೆಸ್ ಕಾರ್ಯಕರ್ತರ ವಿಚಾರಣೆ ನಡೆಸಿಲ್ಲ? ಹಾಸನದಲ್ಲಿ ಎಸ್ಐಟಿ ದಾಳಿ ಮಾಡಿದ ಉದ್ದೇಶ ಡೈವರ್ಟ್ ಮಾಡುವುದು ಪ್ರಕರಣವನ್ನು ಬೇರೆ ಕಡೆ ಡೈವರ್ಟ್ ಮಾಡುವ ಪ್ರಯತ್ನ ನಡೆದಿದೆ ಎಂದು ಕಿಡಿ ಕಾರಿದರು.
‘SIT’ ತನ್ನ ಪಾವಿತ್ರ್ಯತೆಯನ್ನು ಕಳೆದುಕೊಂಡಿದೆ
ಜ್ವಲ್ ರೇವಣ್ಣ ಪ್ರಕರಣದಲ್ಲಿ ರಾಜ್ಯ ರಾಜಕಾರಣದಲ್ಲಿ ಆರೋಪ ಮತ್ತು ಪ್ರತ್ಯಾಾರೋಪ ಜೋರಾಗಿ ನಡೆಯುತ್ತಿದ್ದು, ಪ್ರಕರಣದ ಹಿಂದೆ ದೊಡ್ಡ ತಿಮಿಂಗಲ ಇದೆ ಕುಮಾರಸ್ವಾಮಿ ತಿಳಿಸಿದರು. ಅದಕ್ಕೆ ಡಿಕೆ ಶಿವಕುಮಾರ್ ಹಿಡಿದು ಬಡೆದುಕೊಂಡು ತಿನ್ನಲಿ ಎಂದು ಉತ್ತರಿಸಿದರು .ಇದಕ್ಕೆ ಎಂದು ಪಕ್ಷ ನಾಯಕ ಆರ್ ಅಶೋಕ್ ಪ್ರತಿಕ್ರಿಯೆ ನೀಡಿದ್ದು ,
ತಿಮಿಂಗಲ ಇದೆ ಅಂತ ಎಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ. ತಿಮಿಂಗಲ ಬಡಿದು ತಿಂದುಕೊಳ್ಳಲಿ ಅಂತ ಡಿಕೆ ಶಿವಕುಮಾರ್ ಹೇಳಿದ್ದಾರೆ. ಬಡಿದು ತಿನ್ನೋದನ್ನು ಹೆಚ್ ಡಿ ದೇವೇಗೌಡ ಕುಟುಂಬ ತೀರ್ಮಾನಿಸುತ್ತದೆ. ದೇವೇಗೌಡರಿಗೆ ಈ ವಯಸ್ಸಿನಲ್ಲಿ ನೋವು ಕೊಡಬೇಕಿತ್ತಾ? ಈ ರೀತಿ ಒಕ್ಕಲಿಗ ಸಮುದಾಯದವರು ಮಾತನಾಡುತ್ತಿದ್ದಾರೆ. ಎಸ್ಐಟಿ ತನ್ನ ಪವಿತ್ರತೆಯನ್ನು ಕಳೆದುಕೊಂಡಿದೆ ಎಂದರು.
ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅಶೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಇದು ಕಾಂಗ್ರೆಸ್ನವರ ಮಾಸ್ಟರ್ ಪ್ಲಾನ್ ಯಾಕೆ ಕಾಂಗ್ರೆಸ್ ಕಾರ್ಯಕರ್ತರ ಮೊಬೈಲ್ಗಳಲ್ಲಿ ವಿಡಿಯೋ ಇಲ್ವಾ? ಕಾಂಗ್ರೆಸ್ನ ಎಷ್ಟು ಜನರನ್ನು ಬಂಧಿಸಿದ್ದಾರೆ? ಸುರ್ಜೆವಾಲ ಮಟ್ಟದಲ್ಲಿ ಪ್ರಕರಣದ ಮಾನಿಟರ್ ಆಗುತ್ತಿದೆ ಎಂದರು.
ಎಚ್ ಡಿ ದೇವೇಗೌಡರ ಕುಟುಂಬಕ್ಕೆ ಹೀಗೆ ಆಗಬಾರದಿತ್ತು ಎಂದು ಡಿಕೆ ಶಿವಕುಮಾರ್ ಹೇಳಿಕೆಗೆ ಇದೀಗ ಆರ್ ಅಶೋಕ ಟಾಂಗ್ ನೀಡಿದ್ದು ಪ್ರಾಮಾಣಿಕತೆಯಿಂದ ಹೇಳಿಲ್ಲ ಕಿಂಡಲ್ ಮಾಡಲು ಹೇಳಿದ್ದಾರೆ.. ರೇವಣ್ಣ ಜೈಲಿಗೆ ಹೋದಾಗ ಹೆಚ್ಚು ಖುಷಿ ಪಟ್ಟಿದ್ದು ಕಾಂಗ್ರೆಸ್ಸಿಗರೇ. ತಿಮಿಂಗಲ ಸಮುದ್ರದಲ್ಲಿ ಇದ್ದರೂ ಮೇಲೆ ಬರಲೇಬೇಕಲ್ವಾ? ಆಮ್ಲಜನಕಕ್ಕಾಗಿ ಒಂದು ಸಲವಾದರೂ ಮೇಲೆ ಬರಲೇಬೇಕು ಆಗ ತಿಮಿಂಗಲ ಕಾಂಗ್ರೆಸ್ ಅಥವಾ ಜೆಡಿಎಸ್ ಅಂತ ಗೊತ್ತಾಗುತ್ತದೆ ಎಂದು ತಿಳಿಸಿದರು.