ಬೆಂಗಳೂರು: ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ( Chief Minister Basavaraj Bommai ) ಅವರ ಅಧ್ಯಕ್ಷತೆಯಲ್ಲಿ ಮಹತ್ವದ ರಾಜ್ಯ ಸಚಿವ ಸಂಪುಟ ಸಭೆ ನಡೆಯಿತು. ಈ ಸಚಿವ ಸಂಪುಟ ಸಭೆಯಲ್ಲಿ ( Cabinet Meeting ) ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸರ್ಕಾರದಿಂದ ಅನುಮೋದನೆ ನೀಡಲಾಗಿದೆ.
ಈ ಕುರಿತಂತೆ ಸಚಿವ ಸಂಪುಟ ಸಭೆ ಮುಕ್ತಾಯದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ ಮಾಹಿತಿ ನೀಡಿದಂತ ಕಾನೂನು ಸಚಿವ ಜೆಸಿ ಮಾಧುಸ್ವಾಮಿಯವರು, ಮಲ್ಪೆ ಬಂದರು ಅಭಿವೃದ್ಧಿಗೆ 49 ಕೋಟಿ ಅನುದಾನಕ್ಕೆ ಸಂಪುಟ ಒಪ್ಪಿಗೆ ನೀಡಿದೆ. ಬೆಂಗಳೂರಿನ ಗುಳಿಮಂಗಲದಲ್ಲಿ ತರಕಾರಿ ಮಾರುಕಟ್ಟೆ ನಿರ್ಮಾಣಕ್ಕಾಗಿ 100 ಕೋಟಿ ಅನುದಾನಕ್ಕೆ ಒಪ್ಪಿಗೆ ಸೂಚಿಸಲಾಗಿದೆ. ಸುಮಾರು 42 ಎಕರೆಯಲ್ಲಿ ಮಾರ್ಕೆಟ್ ಸ್ಥಾಪನೆಯಾಗಲಿದ್ದು, ಕೆ.ಆರ್.ಮಾರುಕಟ್ಟೆ ಭಾರ ತಗ್ಗಿಸಲಾಗುತ್ತದೆ ಎಂದರು.
BIG NEWS: ಶಾಲೆಗಳಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ನಿರ್ಬಂಧವಿಲ್ಲ – ಸಚಿವ ಬಿ.ಸಿ ನಾಗೇಶ್ ಸ್ಪಷ್ಟನೆ
ಬೆಂಗಳೂರಿನ ನಾಲ್ಕು ಭಾಗದಲ್ಲಿ ಮಾರುಕಟ್ಟೆ ನಿರ್ಮಾಣ ಮಾಡಲಾಗುತ್ತದೆ. ಕೋಲಾರ, ಮಾಗಡಿ ಮಾರ್ಗದಲ್ಲೂ ಮಾಡಲಾಗುತ್ತದೆ. ಇದರ ಬಗ್ಗೆ ಅನೌಪಚಾರಿಕೆ ಚರ್ಚೆ ಮಾಡಿದ್ದೇವೆ ಎಂದು ತಿಳಿಸಿದರು.
ಲೋಕಾಯುಕ್ತದಲ್ಲಿ ಪಿಪಿಗಳ ಸೇವೆ ವಿಸ್ತರಣೆ ಮಾಡಲಾಗಿದೆ. 7 ಮಂದಿಯ ಸೇವೆ ಒಂದು ವರ್ಷ ಮುಂದುವರಿಕೆ ಮಾಡಲಾಗಿದೆ. ಕೊಂಕಣ ರೈಲ್ವೆ ಅಭಿವೃದ್ಧಿಗೆ 73.53 ಕೋಟಿ ಹಣ ನೀಡಲು ಒಪ್ಪಿಗೆ ನೀಡಲಾಗಿದೆ. ರಾಜ್ಯದ ಪಾಲಿನ ಹಣವನ್ನ ಬಿಡುಗಡೆ ಮಾಡಿದ್ದೇವೆ ಎಂದರು.
ಅನ್ನದಿನ್ನಿ ಏತನೀರಾವರಿಗೆ 28 ಕೋಟಿ ಹಣ ಬಿಡುಗಡೆಗೆ ಅನುಮತಿ ನೀಡಲಾಗಿದೆ. ಕೇಂದ್ರ ನೀತಿ ಆಯೋಗದಂತೆ ರಾಜ್ಯದಲ್ಲಿ ಆಯೋಗ ರಚನೆ ಮಾಡಲಾಗುತ್ತದೆ. ರಾಣೆಬೆನ್ನೂರಿನ ಮಡ್ಲೇರಿ ರಸ್ತೆ ರಿಪೇರಿಗೆ 14.06 ಕೋಟಿ ಹಣ ಬಿಡುಗಡೆಗೆ ಒಪ್ಪಿಗೆ ಸೂಚಿಸಲಾಗಿದೆ ಎಂದು ಹೇಳಿದರು.
BREAKING: ಶಾಸಕ ಭೈರತಿ ಸುರೇಶ್ ಗೆ ಕೊರೋನಾ ಪಾಸಿಟಿವ್ | MLA Byrathi Suresh tests positive for COVID-19
ಮಡ್ಲೇರಿ ರಸ್ತೆ ಅಭಿವೃದ್ಧಿಗೆ 11 ಕೋಟಿ ಅನುದಾನ ನೀಡಲಾಗಿದೆ. ವಿಜಯಪುರ ಕೋರ್ಟ್ ಕಟ್ಟಡ ನಿರ್ಮಾಣಕ್ಕಾಗಿ 12 ಕೋಟಿ ಹಣ ಬಿಡುಗಡೆಗೆ ಒಪ್ಪಿಗೆ ಸೂಚಿಸಲಾಗಿದೆ. ಯಾದಗಿರಿಯಲ್ಲಿ ಸಾಯಿ ಸಿದ್ದಾಶ್ರಮಕ್ಕೆ 4 ಎಕರೆ ಭೂಮಿ ನೀಡಲಾಗುತ್ತಿದೆ. ಚಿಕ್ಕಬಾಣಾವರದಲ್ಲಿ 3 ಎಕರೆ ಶ್ರೀನಿವಾಸ ಚಾರಿಟಿಗೆ ಭೂಮಿಯನ್ನು ನೀಡಲುಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಿದ್ದೇವೆ ಎಂದರು.
ಇಂಚಲಗೇರಿ ನೀರು ಪೂರೈಕೆಗೆ ಅನುದಾನ ನೀಡಲಾಗಿದೆ. ಹೆಬ್ರಿ, ಕಾರ್ಕಳಕ್ಕೆ ನೀರು ಸರಬಾರು ಯೋಜನೆ ಅನುಷ್ಠಾನಕ್ಕಾಗಿ 1600 ಕೋಟಿ ಅನುದಾನಕ್ಕೆ ಒಪ್ಪಿಗೆ ನೀಡಲಾಗಿದೆ. ಕಂಕನಾಡಿ ಪ್ರದೇಶಕ್ಕೆ ಕುಡಿಯುವ ನೀರು ಪೂರೈಕೆಗಾಗಿ 160 ಕೋಟಿ ಅನುದಾನ ಕೊಟ್ಟಿದ್ದೇವೆ. ಕಲ್ಲಹಳ್ಳಿ ಕುಡಿಯುವ ನೀರು ಪೂರೈಕೆಗೆ 48 ಕೋಟಿ ಅನುದಾನವನ್ನ ನೀಡಲಾಗಿದೆ ಎಂದು ಮಾಹಿತಿ ನೀಡಿದರು.
ಸೇಡಂನಲ್ಲಿ ಮ್ಯಾಕಾನಿಕಲ್ ಚಾಲನಾ ತರಬೇತಿ ಶಾಲೆಗೆ ಅನುಮತಿ ನೀಡಲಾಗಿದೆ. 18 ಕೋಟಿ ವೆಚ್ಚದಲ್ಲಿ ತರಬೇತಿ ಸಂಸ್ಥೆ ಪ್ರಾರಂಭಿಸಲಾಗುತ್ತದೆ. ಕಾಕ್ಸ್ ಟೌನ್ ಜಿಂಖಾನಾಗೆ 4 ಎಕರೆ ಲೀಸ್ ನೀಡಲಾಗಿತ್ತು. ಅದರಲ್ಲಿ 3 ಎಕರೆ 15 ಗುಂಟೆ ಜಮೀನು ವಾಪಸ್ ಪಡೆಯಲಾಗಿದೆ. ಅದನ್ನ ಸಾರ್ವಜನಿಕ ಆಟದ ಮೈದಾನಕ್ಕೆ ನೀಡ್ತೇವೆ ಎಂದು ತಿಳಿಸಿದರು.
ದುದ್ದ, ಜಾವಗಲ್ ಕುಡಿಯುವ ನೀರಿನ ಯೋಜನೆ ಅನುಷ್ಠಾನಕ್ಕಾಗಿ 42 ಕೋಟಿ ಅನುದಾನ ನೀಡಲಾಗಿದೆ. ಸಂತೆಶಿವಿರ ಕುಡಿಯುವ ನೀರಿಗೆ ಅವಕಾಶಕ್ಕಾಗಿ 25 ಕೋಟಿ ಅನುದಾನ ನೀಡಿಕೆ. ರೇವಣಸಿದ್ದೇಶ್ವರ ಏತ ನೀರಾವರಿ ಯೋಜನೆಗೆ ಒಪ್ಪಿಗೆ ಸೂಚಿಸಲಾಗಿದೆ. 3.2 ಟಿಎಂಸಿ ನೀರು ಬಳಕೆ ಮಾಡಿಕೊಳ್ಳಬಹುದು. 25 ಸಾವಿರ ಹೆಕ್ಟೇರ್ ಗೆ ನೀರು ಪೂರೈಕೆಯಾಗಲಿದೆ. ಮೊದಲ ಹಂತದಲ್ಲಿ 760 ಕೋಟಿ, ಎರಡನೇ ಹಂತದಲ್ಲಿ 939 ಕೋಟಿ ಹಾಗೂ ಮೂರನೇ ಹಂತದಲ್ಲಿ 930 ಕೋಟಿ ಅನುದಾನ ನೀಡಲು ಒಪ್ಪಿಗೆ ಸೂಚಿಸಲಾಗಿದೆ ಎಂದು ಹೇಳಿದರು.
ಸೆಪ್ಟಂಬರ್ 12 ರಿಂದ ಅಧಿವೇಶನ ಪ್ರಾರಂಭವಾಗಲಿದೆ. 10 ದಿನಗಳ ಕಾಲ ಬೆಂಗಳೂರಿನಲ್ಲಿಯೇ ಅಧಿವೇಶನ ನಡೆಯಲಿದೆ ಎಂದು ತಿಳಿಸಿದರು.
ಕೆಪಿಎಸ್ ಸಿ ತಿದ್ದುಪಡಿಯನ್ನ ತಂದಿದ್ದೇವೆ. ವೈವಾ ಮಾಡದೆ ಸೆಲೆಕ್ಷನ್ ಮಾಡಲು ತಿದ್ದುಪಡಿ ನೀಡಲಾಗಿದೆ. ಡಿ ಗ್ರೂಪ್ ನೌಕರಿಗೆ ನೇಮಕ ಮಾಡಲು ಅನುಮತಿ ನೀಡಲಾಗಿದೆ. ಡೈರೆಕ್ಟ್ ರಿಕ್ರೂಟ್ ಮೆಂಟ್ ಮಾಡಲು ಸಮ್ಮತಿ ನೀಡಲಾಗಿದೆ ಎಂದರು.
BIG NEWS: ತುಮಕೂರು ಅಪಘಾತದಲ್ಲಿ 9 ಜನರ ಸಾವಿನ ಹಿಂದಿನ ರಹಸ್ಯ ಬಯಲು: ಏನದು ಗೊತ್ತಾ.? | Tumkur Accident
ರಾಜ್ಯದಲ್ಲಿ ಹೊಸದಾಗಿ 7 ವಿವಿಗಳು ಪ್ರಾರಂಭಿಸಲಾಗುತ್ತದೆ. ಚಾಮರಾಜನಗರ, ಬೀದರ್, ಹಾವೇರಿ, ಹಾಸನ, ಕೊಡಗು, ಕೊಪ್ಪಳ, ಬಾಗಲಕೋಟೆಯಲ್ಲಿ ಪ್ರಾರಂಭವಾಗಲಿದೆ. ಮಂಡ್ಯದಲ್ಲೂ ಒಂದು ವಿವಿ ಶುರುವಾಗಲಿದೆ. ಯುಜಿಸಿ ಒತ್ತಾಯದ ಮೇರೆಗೆ ವಿವಿಗಳ ಸ್ಥಾಪನೆ ಮಾಡಲಾಗುತ್ತದೆ ಎಂದರು.
ಗುಂಡೆ ಕೋಟೆ ಕರಡಿ ವನ್ಯಜೀವಿ ಧಾಮ, ಶರಾವತಿ ಸಿಂಗಲೀಕ ವನ್ಯಜೀವಿ ಧಾಮ, ಕಪ್ಪತ್ತಗುಡ್ಡ, ಭೀಮಘಡ ಜೀವವೈವಿದ್ಯಧಾಮಗಳೆಂದು ಗುರ್ತಿಸಿದ್ದೇವೆ. ಕೇಂದ್ರ ಸರ್ಕಾರಕ್ಕೆ ಇದನ್ನ ಶಿಫಾರಸು ಮಾಡ್ತೇವೆ ಎಂದು ಹೇಳಿದರು.
ಅಂಗನವಾಡಿ ಪೋಷಣ ಅಭಿಯಾನ ಜಾರಿಗೊಳಿಸಲು 4244 ಅಂಗನವಾಡಿ ಕೇಂದ್ರಗಳ ಅರಂಭಿಸಲಾಗುತ್ತದೆ ಎಂದರು.
ಶಿರಾದಲ್ಲಿ ಭೀಕರ ಅಪಘಾತದಲ್ಲಿ 9 ಮಂದಿ ಮೃತಪಟ್ಟಿದ್ದಾರೆ. ಮೃತರಿಗೆ ತಲಾ 5 ಲಕ್ಷ ಪರಿಹಾರ ನೀಡಲು ತೀರ್ಮಾನ ಮಾಡಲಾಗಿದೆ. ಇಂದಿನ ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹೇಳಿದರು.
ಎಸಿಬಿ ರದ್ಧು ಕೋರಿ ನಾವು ಹೋಗಿಲ್ಲ. ಖಾಸಗಿ ವ್ಯಕ್ತಿಯೊಬ್ಬರು ಹೋಗಿದ್ದಾರೆ. ಅದು ಅಲ್ಲಿ ನಿಲ್ಲುತ್ತೋ ಇಲ್ವೋಗೊತ್ತಿಲ್ಲ ಎಂದರು.