ಬೆಂಗಳೂರು : ರಾಜ್ಯದ ಪ್ರಮುಖ ಲೋಕಸಭಾ ಕ್ಷೇತ್ರ ಆಗಿದ್ದ ಬೆಂಗಳೂರು ಗ್ರಾಮಾಂತರದಲ್ಲಿ ಬಿಜೆಪಿಯ ಅಭ್ಯರ್ಥಿ ಡಾ. ಸಿಎನ್ ಮಂಜುನಾಥ್ ಅವರು ಹ್ಯಾಟ್ರಿಕ್ ಗೆಲುವು ಕಂಡ ಕಾಂಗ್ರೆಸ್ ಅಭ್ಯರ್ಥಿ ಡಿಕೆ ಸುರೇಶ್ ವಿರುದ್ಧ ಭರ್ಜರಿ ಗೆಲುವು ದಾಖಲಿಸಿದ್ದಾರೆ. ಗೆಲವು ಖಚಿತವಾದ ನಂತರ ಸುದ್ದಿಗಾರರನ್ನಾಗಿ ಮಾತನಾಡಿದವರು ಇದೊಂದು ಕಾರ್ಯಕರ್ತರ ಐತಿಹಾಸಿಕ ಗೆಲುವಾಗಿದೆ ಎಂದು ತಿಳಿಸಿದರು.
ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಇದೊಂದು ಐತಿಹಾಸಿಕ ಕಾರ್ಯಕರ್ತರ ಗೆಲುವು ನೂತನ ಸಂಸದ ಡಾ. ಸಿ.ಎನ್ ಮಂಜುನಾಥ್ ಹೇಳಿಕೆಯನ್ನು ನೀಡಿದ್ದು, ಬಿಜೆಪಿ ಜೆಡಿಎಸ್ ಕಾರ್ಯಕರ್ತರು ಈ ಒಂದು ಚುನಾವಣೆಯಲ್ಲಿ ಒಟ್ಟಾಗಿ ಶ್ರಮಿಸಿದ್ದಾರೆ. ಗೆಲವು ಕಾರ್ಯಕರ್ತರು ಮತದಾರರಿಗೆ ಅರ್ಪಿಸುತ್ತೇನೆ.ಆರೋಗ್ಯ ಕೃಷಿ ಶಿಕ್ಷಣ ಕ್ಷೇತ್ರದಲ್ಲಿ ಗಮನಹರಿಸುತ್ತೇನೆ ಎಂದು ಬೆಂಗಳೂರಲ್ಲಿ ನೂತನ ಸಂಸದ ಡಾ. ಸಿಎಂ ಮಂಜುನಾಥ್ ಹೇಳಿದರು.
ಬಹಳ ಪ್ರಮುಖವಾದದ್ದು ಅಂದರೆ ಆರೋಗ್ಯ ಕ್ಷೇತ್ರ ಈ ಒಂದು ಕ್ಷೇತ್ರದಲ್ಲಿ ಕಷ್ಟಪಟ್ಟು ಕೆಲಸ ಮಾಡುತ್ತೇನೆ ಅಲ್ಲದೆ ಮೂಲಭೂತ ಸೌಕರ್ಯಗಳ ಕುರಿತಂತೆ, ಕೃಷಿಯಾಗಿರ್ಬೋದು ಶಿಕ್ಷಣ ಆಗಿರಬಹುದು ಉಳಿದ ಎಲ್ಲಾ ಕ್ಷೇತ್ರಗಳಲ್ಲೂ ಪ್ರಾಮಾಣಿಕವಾಗಿ ಕೆಲಸ ಮಾಡಿ ಅಭಿವೃದ್ಧಿಯ ಕೆಲಸ ಮಾಡಲು ಪ್ರಯತ್ನಿಸುತ್ತೇನೆ ಎಂದು ಅವರು ತಿಳಿಸಿದರು.